Site icon Vistara News

IND vs PAK | ಸ್ಟೇಡಿಯಮ್‌ಗೆ ಆಗಮಿಸಿದ ಭಾರತ ತಂಡದ ಆಟಗಾರರು, ಅಭಿಮಾನಿಗಳ ಸಂಭ್ರಮ

ind vs pak

ದುಬೈ : ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್‌ ಟಿ೨೦ ಪಂದ್ಯವನ್ನಾಡಲು ಭಾರತ ತಂಡದ ಆಟಗಾರರು ಭಾನುವಾರ ಸಂಜೆಯ ವೇಳೆಗೆ ಸ್ಟೇಡಿಯಮ್‌ಗೆ ಪ್ರವೇಶ ಮಾಡಿದರು. ಭಾರತ ತಂಡದ ಆಟಗಾರರಿಗೆ ದುಬೈನಲ್ಲಿರುವ ಸಾವಿರಾರು ಕ್ರಿಕೆಟ್‌ ಅಭಿಮಾನಿಗಳು ಶುಭಾಶಯ ವ್ಯಕ್ತಪಡಿಸಿದರು.

ಬಿಸಿಸಿಐ ತನ್ನ ಅಧಿಕೃತ ಟ್ವೀಟ್‌ ಖಾತೆಯಲ್ಲಿ ಭಾರತ ತಂಡದ ಆಟಗಾರರು ಸ್ಟೇಡಿಯಮ್‌ಗೆ ಅಗಮಿಸುತ್ತಿರುವ ಚಿತ್ರವನ್ನು ಪ್ರಕಟಿಸಿದೆ. ನಾಯಕ ರೋಹಿತ್‌ ಶರ್ಮ, ಉಪನಾಯಕ ಕೆ. ಎಲ್‌ ರಾಹುಲ್‌, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಬಸ್‌ ಇಳಿದು ಬರುತ್ತಿರುವ ಚಿತ್ರವನ್ನು ಪ್ರಕಟಿಸಿದೆ.

ಆಟಗಾರರು ಮೈದಾನಕ್ಕೆ ಬರುತ್ತಿದ್ದಂತೆ ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದರು. ತಮ್ಮ ತಮ್ಮ ಮೊಬೈಲ್‌ಗಳ ಮೂಲಕ ಚಿತ್ರಗಳನ್ನು ತೆಗೆದರು.

ಭಾರತ ತಂಡ ಇಂತಿದೆ

ಭಾರತ : ರೋಹಿತ್‌ ಶರ್ಮ (ನಾಯಕ), ಕೆ ಎಲ್‌. ರಾಹುಲ್‌ (ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ರಿಷಭ್ ಪಂತ್‌, ದೀಪಕ್‌ ಹೂಡ, ದಿನೇಶ್‌ ಕಾರ್ತಿಕ್‌, ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಯಜ್ವೇಂದ್ರ ಚಹಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌.

Exit mobile version