ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಲಾನ್ ಬೌಲ್ಸ್ (LawnBowls) ತಂಡ ಫೈನಲ್‌ಗೇರಿದೆ. ಈ ಮೂಲಕ ಈ ಬಾರಿಯ ಕೂಟದಲ್ಲಿ ಮಹಿಳೆಯರ ತಂಡ ಬಂಗಾರ ಗೆದ್ದಿರುವಂತೆ ಪುರುಷರ ತಂಡವೂ ಅಚ್ಚರಿಯ ಫಲಿತಾಂಶವನ್ನು ನೀಡುವ ಸಾಧ್ಯತೆಗಳಿವೆ. ಶುಕ್ರವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ೧೩-೧೨ ಅಂಕಗಳಿಂದ ಸೋಲಿಸಿದ ಭಾರತದ ನಾಲ್ವರು ಆಟಗಾರರು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡರು.
ಸುನೀಲ್ ಬಹಾದ್ದೂರ್, ನವನೀತ್ ಸಿಂಗ್, ಚಂದನ್ ಸಿಂಗ್, ದಿನೇಶ್ ಕುಮಾರ್ ಅವರಿದ್ದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಅದಕ್ಕಿಂತ ಮೊದಲು ಭಾರತ ತಂಡ ೧೩ ಬಾರಿಯ ಚಾಂಪಿಯನ್ ಕೆನಡಾ ತಂಡವನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಣಿಸಿ ಸೆಮಿಫೈನಲ್ಸ್‌ಗೇರಿತ್ತು.
ಬಲಿಷ್ಠ ತಂಡದ ನ್ಯೂಜಿಲೆಂಡ್ ಆರಂಭದಲ್ಲಿ ಭಾರತದ ವಿರುದ್ಧ ಪಾರಮ್ಯ ಮೆರೆದಿತ್ತು. ಹೀಗಾಗಿ ೧-೫ ಅಂಕಗಳ ಹಿನ್ನಡೆಯೊಂದಿಗೆ ಬಿಗು ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಮುನ್ನಡೆ ಸಾಧಿಸಲು ಆರಂಭಿಸಿದರು. ೯ನೇ ತುದಿಯ ಆಟ ಅರಂಭಗೊಂಡಾಗ ೯-೭ ಅಂಕಗಳನ್ನು ಮುನ್ನಡೆ ಸಾಧಿಸಿಕೊಂಡಿತು. ಅದಾದ ಬಳಿಕ ತಿರುಗಿ ನೋಡದ ಭಾರತೀಯರು ೧೫ನೇ ತುದಿಯ ಆಟ ಮುಗಿದಾಗ ೪ ಅಂಕಗಳ ಮುನ್ನಡೆ ಸಂಪಾದಿಸಿ ಗೆಲವು ಸಾಧಿಸಿದರು.