ಬುಲಾವಾಯೊ: ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ತೇಜನಾರಾಯಣ ಚಂದ್ರಪಾಲ್ ಅಜೇಯ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ತಂದೆ ಶಿವನಾರಾಯಣ ಚಂದ್ರಪಾಲ್ ಅವರ ಹಾದಿಯನ್ನೇ ಹಿಡಿದ್ದಾರೆ. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ ಮೊದಲ ಹಾಗೂ ಏಕೈಕ ಅಪ್ಪ-ಮಗನ ಜೋಡಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಮಳೆ ಪೀಡಿತ ಪಂದ್ಯದಲ್ಲಿ 3ನೇ ದಿನ ದ್ವಿಶತಕ ಬಾರಿಸಿ ಮಿಂಚಿದ ಅವರು ಬ್ರಾಥ್ವೇಟ್ ಜತೆಗೂಡಿ ಮೊದಲ ವಿಕೆಟ್ಗೆ ಬರೋಬ್ಬರಿ 336 ರನ್ ಜತೆಯಾಟ ನಡೆಸಿ ಗಮನಸೆಳೆದರು. ಬ್ರಾತ್‌ವೇಟ್ 182 ರನ್ ಗಳಿಸಿ ಔಟಾದರು. ಉಭಯ ಆಟಗಾರರ ಬ್ಯಾಟಿಂಗ್ ಸಾಹಸದಿಂದ ವೆಸ್ಟ್ ಇಂಡೀಸ್ ತಂಡ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 447ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಜಬಾಬಿತ್ತ ಜಿಂಬಾಬ್ವೆ 7 ವಿಕೆಟ್ಗೆ 192 ರನ್ ಗಳಿಸಿ ಆಟವಾಡುತ್ತಿದೆ.
ಶಿವನಾರಾಯಣ್ ಚಂದ್ರಪಾಲ್ ಒಟ್ಟು 467 ಎಸೆತ ಎದುರಿಸಿ ಅಜೇಯ 207 ರನ್ ಪೇರಿಸಿದರು. ಈ ಇನಿಂಗ್ಸ್ ವೇಳೆ 3 ಸಿಕ್ಸರ್ ಮತ್ತು 16 ಬೌಂಡರಿ ಸಿಡಿಯಿತು. 26ರ ಹರೆಯದ ಅವರು ತಂದೆ ಶಿವನಾರಾಯಣ್ ಚಂದ್ರಪಾಲ್ ಅವರಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ IND VS AUS: ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತಕ್ಕೆ ಪಂತ್ ಅವರ ಕೊರಗು ಕಾಡಲಿದೆ: ಚಾಪೆಲ್
ಸಂಕ್ಷಿಪ್ತ ಸ್ಕೋರು: ವೆಸ್ಟ್‌ಂಡೀಸ್ ಮೊದಲ ಇನ್ನಿಂಗ್ಸ್ 6 ವಿಕೆಟಿಗೆ 447 ಡಿಕ್ಲೇರ್ (ಬ್ರಾತ್‌ವೇಟ್ 182, ಟಿ.ಚಂದ್ರಪಾಲ್ ಅಜೇಯ 207, ಬ್ರ್ಯಾಂಡನ್ ಮಾವುತ 140ಕ್ಕೆ 5); ಜಿಂಬಾಬ್ವೆ 7 ವಿಕೆಟಿಗೆ 192 ರನ್ ಗಳಿಸಿ ಆಡುತ್ತಿದೆ.