Site icon Vistara News

Cricket League : ಮಾರ್ಚ್​ 12ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2

Television Premier League Season 2 from March 12

#image_title

ಬೆಂಗಳೂರು: ಎನ್ 1 ಕ್ರಿಕೆಟ್ ಅಕಾಡೆಮಿ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್​ನ ಎರಡನೇ ಆವೃತ್ತಿ ಮಾರ್ಚ್​ 12ರಿಂದ 15ರವರೆಗೆ ನಡೆಯಲಿದೆ. ಇದು ಎರಡನೇ ಆವೃತ್ತಿಯ ಕ್ರಿಕೆಟ್​ ಲೀಗ್​ ಆಗಿದ್ದು, ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಾಲ್ಕು ದಿನಗಳ ಕಾಲ ಪಂದ್ಯ ನಡೆಯಲಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕ ಬಿ.ಆರ್. ಸುನಿಲ್ ಕುಮಾರ್ ಟೂರ್ನಿಯ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ವರ್ಷದಿಂದ ಟಿಪಿಎಲ್ ಆರಂಭಿಸಿದ್ದೇವೆ. ಮೊದಲ ಸೀಸನ್ ಯಶಸ್ವಿಯಾಗಿತ್ತು. ಇದೀಗ ಎರಡನೇ ಸೀಸನ್​ಗೆ ತಯಾರಿ ನಡೆಯುತ್ತಿದೆ. ಮಾರ್ಚ್ ಎರಡನೇ ವಾರದಲ್ಲಿ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯಲಿವೆ ಎಂದು ಹೇಳಿದರು.

ಟೂರ್ನಿಗೆ ತಂಡ ಹಾಗೂ ನಾಯಕರ ಆಯ್ಕೆ ಎಲ್ಲವೂ ನಡೆದಿದೆ. ಮಾರ್ಚ್ 7ರಂದು ಜೆರ್ಸಿ ಅನಾವರಣಗೊಳ್ಳಲಿದೆ. ಟಿಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯರಿಗೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ವತಿಯಿಂದ ದ್ವಿಚಕ್ರ ವಾಹನ ಸಿಗಲಿದೆ. ಕಳೆದ ಬಾರಿ ಟೂರ್ನಮೆಂಟ್ ಮುಗಿದ ಮೇಲೆ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಅವರಿಗೆ ಧನ ಸಹಾಯ ಮಾಡಿದ್ದೆವು. ಈ ಬಾರಿ ಹಿರಿಯ ಕಲಾವಿದರಿಗೆ ಸಹಾಯ ಧನ ನೀಡಲು ಚಿಂತನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಆರು ತಂಡಗಳ ನಡುವಿನ ಸರಣಿ

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಆ್ಯನಿಲೀಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ಒಂದೊಂದು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ : Kannada Chalanachitra Cricket : ಕನ್ನಡ ಚಲನಚಿತ್ರ ಕಪ್​ ಕ್ರಿಕೆಟ್​ ಟೂರ್ನಿಯ ಟಿಕೆಟ್​ ಮಾರಾಟಕ್ಕೆ ನಟ ಸುದೀಪ್​ ಚಾಲನೆ

ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್​ಗಳಿದ್ದಾರೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಆನಿಹೆಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್ ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತಾ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್​ಗಳು.

Exit mobile version