ಮುಂಬಯಿ: ಬಲಿಷ್ಠ ತಂಡಗಳಿಗೆ ಸೋಲುಣಿ ಸೆಮಿಫೈನಲ್ ಸನಿಹಕ್ಕೆ ಬಂದು ನಿಂತಿರುವ ಕ್ರಿಕೆಟ್ ಶಿಶು ಅಫಘಾನಿಸ್ತಾನ(Australia vs Afghanistan) ತಂಡ ಇಂದು ನಡೆಯುವ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(sachin tendulkar) ಅವರು ಆಫ್ಘನ್ ಆಟಗಾರರ ಕ್ಯಾಂಪ್ಗೆ ಭೇಟಿ ನೀಡಿ ಅಮೂಲ್ಯವಾದ ಕ್ರಿಕೆಟ್ ಸಲಹೆಯನ್ನು ನೀಡಿದ್ದಾರೆ. ಈ ಫೋಟೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಅಫಘಾನಿಸ್ತಾನ ಕಳೆದ ಎರಡು ವಿಶ್ವಕಪ್ಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿತ್ತು. ಆದರೆ ಈ ಬಾರಿ ಯಾರು ಊಹೆ ಮಾಡದ ರೀತಿಯಲ್ಲಿ ಅತ್ಯತ್ತಮ ಆಟ ಪ್ರದರ್ಶಿಸುವ ಮೂಲಕ ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 8 ಅಂಕ ಸಂಪಾದಿಸಿದೆ. ಇಂದಿನ ಒಂದ್ಯದಲ್ಲಿ ಆಸೀಸ್ ವಿರುದ್ಧ ಗೆದ್ದರೆ ಸೆಮಿ ಟಿಕೆಟ್ ಬಹುತೇಕ ಖಾತ್ರಿಗೊಳ್ಳಲಿದೆ.
Sachin Tendulkar pays the Afghanistan camp a visit 👏#CWC23 pic.twitter.com/5a0dWfStSi
— ICC Cricket World Cup (@cricketworldcup) November 6, 2023
ಮೆಚ್ಚುಗೆ ಸೂಚಿಸಿದ್ದ ಸಚಿನ್
ಆಫ್ಘನ್ ತಂಡದ ಪ್ರದರ್ಶನಕ್ಕೆ ಕೆಲ ದಿನಗಳ ಹಿಂದೆ ಸಚಿನ್ ಅವರು ಮೆಚ್ಚು ಸೂಚಿಸಿ ಟ್ವೀಟ್ ಮಾಡಿ “ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಆಟದಲ್ಲಿ ತೋರುತ್ತಿರುವ ಅವರ ಶಿಸ್ತು, ಮನೋಧರ್ಮ ಮತ್ತು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿರುವ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ತೋರಿಸುತ್ತಿದೆ. ಬಹುಶಃ ಇದು ಶ್ರೀ ಅಜಯ್ ಜಡೇಜಾ ಅವರ ಪ್ರಭಾವದ ಕಾರಣದಿಂದಾಗಿರಬಹುದು. ಅಸಾಧಾರಣ ಪ್ರದರ್ಶನದೊಂದಿಗೆ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ಮೇಲೆ ಸವಾರಿ ಮಾಡಿದ ನಿಮ್ಮ ಈ ಸಾಹಸ ಹೀಗೆಯೇ ಮುಂದುವರಿಯಲಿ. ಇನ್ನೂ ಕೂಡ ಅಚ್ಚರಿಯ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡಿದ್ದೇವೆ” ಎಂದು ಹಾರೈಸಿದ್ದರು.
ಆಸೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಂದರೆ ಸೋಮವಾರ ಸಚಿನ್ ಅವರು ವಾಂಖೆಡೆ ಕ್ರಿಕೆಟ್ ಸ್ಟೇಡಿಯಂಗೆ ಬಂದು ಆಫ್ಘನ್ ಆಟಗಾರರಿಗೆ ಕೆಲ ಕ್ರಿಕೆಟ್ ಸಲಹೆಯನ್ನು ನೀಡಿದ್ದಾರೆ. ಸಚಿನ್ ಅವರು ಅಫಘಾನಿಸ್ತಾನ ತಂಡಕ್ಕೆ ಕ್ರಿಕೆಟ್ ಸಲಹೆ ನೀಡಿದ ಫೋಟೊ ಪೋಸ್ಟ್ ಮಾಡಿದ ಐಸಿಸಿ ಪಂದ್ಯಕ್ಕೂ ಮುನ್ನ “ಹೆಚ್ಚಿನ ಎನರ್ಜಿ” ದೊರೆತಿದೆ ಎಂದು ಬರೆದುಕೊಂಡಿದೆ.
ಅಫ್ಘಾನಿಸ್ತಾನ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವಿಶ್ವ ಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದರಿಂದ ವಿಶ್ವಕಪ್ ಕನಸು ಕಾಣುತ್ತಿದೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಮುಂಬರುವ ಪಂದ್ಯದಲ್ಲಿ ತಮ್ಮ ತಂಡದ ಸಂಯೋಜನೆಯನ್ನು ಬದಲಾಯಿಸದು. ಹೀಗಾಗಿ ಅದೇ 11ರ ಬಳಗದೊಂದಿಗೆ ಕಣಕ್ಕಿಳಿಯುವ ಸಾರ್ಧಯತೆಗಳಿವೆ.
ಇದನ್ನೂ ಓದಿ ಬಹಿರಂಗವಾಗಿಯೇ ಶಕೀಬ್, ಬಾಂಗ್ಲಾ ತಂಡಕ್ಕೆ ಜಾಡಿಸಿದ ಏಂಜೆಲೊ ಮ್ಯಾಥ್ಯೂಸ್
ಸಂಭಾವ್ಯ ತಂಡಗಳು
ತಂಡಗಳು
ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜೈ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಾಕ್ ಫಾರೂಕಿ, ನೂರ್ ಅಹ್ಮದ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಜಲ್ವುಡ್.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ