Site icon Vistara News

WTC Final 2023 : ಲಂಡನ್​ನಲ್ಲಿ ಭಯಂಕರ ಚಳಿ, ಟೀಮ್​ ಇಂಡಿಯಾಗೆ ಬೌಲರ್​​ಗಳ ಆಯ್ಕೆಯ ಗಲಿಬಿಲಿ!

World Test Championship

#image_title

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಪಂದ್ಯ ನಡೆಯುವ ಲಂಡನ್​ನಲ್ಲಿ ಸಿಕ್ಕಾಪಟ್ಟೆ ಚಳಿಯಿದೆ. ಬೆಳಗ್ಗೆ 10 ಗಂಟೆಯಾದರೂ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್​ಗೆ ಏರುತ್ತಿಲ್ಲ. ಚಳಿ ಹಾಗೂ ಮಾರುತದ ವೇಗ ಹೆಚ್ಚಿದ್ದಷ್ಟು ವೇಗದ ಬೌಲರ್​ಗಳಿಗೆ ಅನುಕೂಲ. ಹೀಗಾಗಿ ರೋಹಿತ್ ಶರ್ಮಾ ಬಳಗ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೆ ಎಷ್ಟು ಬೌಲರ್​ಗಳೊಂದಿಗೆ ಕಣಕ್ಕೆ ಇಳಿಯಬಹುದು ಎಂಬ ಗೊಂದಲ ಉಂಟಾಗಿದೆ. ವೇಗದ ಬೌಲರ್​ಗಳೇ ಅಥವಾ ಸ್ಪಿನ್ನರ್​ಗಳೇ ಎಂಬ ಕನ್​​ಫ್ಯೂಸ್​ ಶುರುವಾಗಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ನಾಯಕ ರೋಹಿತ್​ ಶರ್ಮಾ ತಮ್ಮ ಅಂಶವನ್ನು ಉಲ್ಲೇಖಿಸಿದರು. ಪಂದ್ಯ ಬೆಗ್ಗೆ 10:30ಕ್ಕೆ ಪ್ರಾರಂಭವಾಗಲಿದೆ. ಮಂಗಳವಾರ ಪತ್ರಿಕಾಗೋಷ್ಠಿ ನಡೆಸುವ ವೇಳೆ 9.5 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶವಿತ್ತು. ಅದು ಪಂದ್ಯ ಆರಂಭದ ಸಮಯಕ್ಕಿಂತ ಒಂದು ಗಂಟೆ ಮೊದಲು.

ಪರಿಸ್ಥಿತಿಗಳು ಇದೇ ರೀತಿ ಮುಂದುವರಿದರೆ ಶೀತ, ಮೋಡ ಕವಿದ ವಾತಾವರಣ ಮತ್ತು ಗಾಳಿಯ ಕಾರಣಕ್ಕೆ ಭಾರತದ ತಂಡದ ಇಬ್ಬರು ಸ್ಪಿನ್ನರ್​​ಗಳೊಂದಿಗೆ ಕಣಕ್ಕಿಳಿಯುವ ಯೋಜನೆ ಸ್ಥಗಿತಗೊಳ್ಳಬಹುದು. ಬದಲಿಗೆ ಅವರು ನಾಲ್ಕು ವೇಗಿಗಳನ್ನು ಆಡಿಸಬೇಕಾಗುತ್ತದೆ.

ನಾವು ನಾಳೆಯವರೆಗೆ ನಿರ್ಧಾರಕ್ಕಾಗಿ ಕಾಯುತ್ತೇವೆ; ಏಕೆಂದರೆ ನಾನು ಇಲ್ಲಿ ನೋಡಿದ ಒಂದು ವಿಷಯವೆಂದರೆ, ಪಿಚ್ ನಿಜವಾಗಿಯೂ ದಿನದಿಂದ ದಿನಕ್ಕೆ ಸ್ವಲ್ಪ ಬದಲಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ. ತಂಡದ ಎಲ್ಲರಿಗೂ ಸ್ಪಷ್ಟ ಸಂದೇಶ ರವಾನಿಲಾಗಿದೆ. ಎಲ್ಲಾ 15 ಆಟಗಾರರು ಯಾವುದೇ ಸಮಯದಲ್ಲಿ ಆಡಲು ಸಿದ್ಧರಾಗಿರಬೇಕು. ನಾವು ನಾಳೆಯೂ ಪರಿಸ್ಥಿತಿಗಳನ್ನು ನೋಡುತ್ತೇವೆ. ಯಾರು ಆ ಪ್ಲೇಯಿಂಗ್ 11 ಗೆ ಪ್ರವೇಶಿಸುತ್ತಾರೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ : WTC Final 2023 : ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸುವ ಸೂಚನೆ ನೀಡಿದ ರೋಹಿತ್​ ಶರ್ಮಾ

ಮಂಗಳವಾರದ ನೆಟ್​ ಪ್ರಾಕ್ಟೀಸ್​ ವೇಳೆ ಕೆಲವೇ ಕೆಲವು ಆಟಗಾರರು ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದರು. ಆರ್ ಅಶ್ವಿನ್, ಕೆ.ಎಸ್.ಭರತ್, ಉಮೇಶ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್ ಮತ್ತಿತರರು ತಮ್ಮ ಹೋಟೆಲ್ ಕೊಠಡಿಗಳಲ್ಲಿ ಉಳಿದಿದ್ದರು. ಮಧ್ಯಾಹ್ನದ ಬಳಿಕ ಅವರೆಲ್ಲರೂ ಜತೆ ಸೇರಲಿದ್ದಾರೆ.

ಸಂಯೋಜನೆಯನ್ನು ಹೇಗಿರಲಿದೆ?

ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ, ಚೇತೇಶ್ವರ ಪೂಜಾರ 3 ನೇ ಸ್ಥಾನದಲ್ಲಿ, ವಿರಾಟ್ ಕೊಹ್ಲಿ 4 ನೇ ಸ್ಥಾನದಲ್ಲಿ ಮತ್ತು ರಹಾನೆ 5 ನೇ ಸ್ಥಾನದಲ್ಲಿ ಆಡಲಿದ್ದಾರೆ. ನಾಲ್ಕನೇ ಬೌಲರ್​ ಬೇಕಾದರೆ ಬೌಲಿಂಗ್ ವಿಭಾಗದಲ್ಲಿ ಜಯದೇವ್ ಉನಾದ್ಕಟ್ ಅವರಿಗಿಂತ ಉಮೇಶ್ ಮೇಲುಗೈ ಸಾಧಿಸಲಿದ್ದಾರೆ. ಆದರೆ ಉಮೇಶ್ ಇಂಗ್ಲೆಂಡ್​​ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಉನಾದ್ಕಟ್ ಒಂದನ್ನೂ ಆಡಿಲ್ಲ. ಇದು 2011ರಲ್ಲಿ ಪ್ರಾರಂಭವಾದ ವೃತ್ತಿಜೀವನದ 56 ಟೆಸ್ಟ್​ಗಳಲ್ಲಿ ಎರಡು ಇಂಗ್ಲೆಂಡ್​ನಲ್ಲಿ.

ಆಟದ ಸಮಯದಲ್ಲಿ ಪರಿಸ್ಥಿತಿಗಳು ಬದಲಾಗಬಹುದು. ಈ ಮೈದಾನದಲ್ಲಿ ಭಾರತ ಆಡಿದ ಕೊನೆಯ ಪಂದ್ಯದಲ್ಲಿ, 5 ನೇ ದಿನದಂದು ಚೆಂಡು ರಿವರ್ಸ್ ಸ್ವಿಂಗ್ ಆಗಿತ್ತು. ಒಂದು ವೇಳೆ ಭಾರತ 4 ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್ ಬೌಲಿಂಗ್ ಮಾತ್ರವಲ್ಲದೆ ಆಕ್ರಮಣಕಾರಿ ಬ್ಯಾಟಿಂಗ್​​ಗೂ ನೆರವಾಗಲಿದ್ದಾರೆ.

ನಾವು ಏನು ಗೆದ್ದಿದ್ದೇವೆ ಮತ್ತು ಏನನ್ನು ಗೆದ್ದಿಲ್ಲ ಎಂದು ನಮಗೆ ತಿಳಿದಿದೆ ಎಂದು ರೋಹಿತ್​ ಶರ್ಮಾ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಹಾಗೆಂದು ನಾವು ಹಿಂದಿನ ಸೋಲಿನ ಬಗ್ಗೆ ಯೋಚನೆ ಮಾಡುವುದಿಲ್ಲ ಕಳೆದ ವರ್ಷ ನಾವು ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾದಲ್ಲಿದ್ದಾಗ, ನಮಗೆ ಅದೇ ಪ್ರಶ್ನೆಯನ್ನು ಕೇಳಲಾಗಿತ್ತು. ಆಗಲೂ ನಾನು ಇದೇ ಉತ್ತರ ಕೊಟ್ಟಿದ್ದೆ ಎಂಬುದಾಗಿ ರೋಹಿತ್​ ಹೇಳಿದ್ದಾರೆ.

Exit mobile version