ಮೀರ್ಪುರ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಫಿಟ್ ಕ್ರೀಡಾಪಟು. ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಕ್ಕುಳಿಯುವುದಾಗಲಿ, ತಂಡ ತೊರೆಯುವುದು ಅವರ ವೃತ್ತಿ ಕ್ರೀಡೆಯಲ್ಲಿ ಬಲು ಅಪರೂಪದ ಸಂಗತಿ. ಫೀಲ್ಡಿಂಗ್ ವಿಚಾರಕ್ಕೆ ಬಂದಾಗಲೂ ಅವರು ಟೀಮ್ ಇಂಡಿಯಾದ ಸಮರ್ಥ ಫೀಲ್ಡರ್. ಆದರೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನ ಅವರು 4 ಕ್ಯಾಚ್ಗಳನ್ನು ಕೈ ಚೆಲ್ಲುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಎರಡನೇ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 231 ರನ್ಗಳಿಗೆ ಆಲ್ಔಟ್ ಆಯಿತು. ಅದಕ್ಕಿಂತ ಮೊದಲು ಸ್ಲಿಪ್ನಲ್ಲಿ ಫೀಲ್ಡ್ ಮಾಡಿದ ವಿರಾಟ್ ಕೊಹ್ಲಿ ನಾಲ್ಕು ಕ್ಯಾಚ್ಗಳನ್ನು ಕೈ ಚೆಲ್ಲಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಕ್ಯಾಚ್ ಬಿಟ್ಟ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಒಂದು ಕಾಲದಲ್ಲಿ ಬೆಸ್ಟ್ ಫೀಲ್ಡರ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಇದೀಗ ಕ್ಯಾಚ್ ಕೂಡ ಬಿಡುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ. ವಿಡಿಯೊಗಳನ್ನು ಶೇರ್ ಮಾಡಿ ಇವರು ಹಳೆಯ ಕೊಹ್ಲಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪಂದ್ಯದಲ್ಲಿ ಮೂರನೇ ದಿನ ಅಂತ್ಯಕ್ಕೆ ಬಾರತ ತಂಡ 45 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಭಾರತ ತಂಡದ ಗೆಲುವಿಗೆ ಇನ್ನೂ 100 ರನ್ಗಳು ಬೇಕಾಗಿದ್ದು, ಸತತವಾಗಿ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಬಿದ್ದಿದೆ.
ಇದನ್ನೂ ಓದಿ | INDvsPAK | ಭಾರತದ ಗೆಲುವಿಗೆ ಇನ್ನೂ ಬೇಕು 100 ರನ್, ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ ಭಾರತ