Site icon Vistara News

Test Cricket: ಟೆಸ್ಟ್ ಕ್ರಿಕೆಟ್ ಉತ್ತೇಜನಕ್ಕೆ ಐಸಿಸಿ ನಿಧಿ ಯೋಜನೆ; ಭಾರತಕ್ಕೆ ನೆರವು ಸಿಗಲ್ಲ?

Test Cricket: ICC planning multi-million dollar fund to save Test cricket

ದುಬೈ: ಟೆಸ್ಟ್ ಕ್ರಿಕೆಟ್‌ಗೆ(Test Cricket) ಉತ್ತೇಜನ ನೀಡುವ ಸಲುವಾಗಿ ಈಗಾಗಲೇ ಐಸಿಸಿ ಟೆಸ್ಟ್​ ವಿಶ್ವಕಪ್(WTC)​ ಕೂಟ ಆರಂಭಿಸಿದೆ. 2 ಆವೃತ್ತಿ ಕೂಡ ನಡೆದಿದೆ. ಇದೀಗ ಟೆಸ್ಟ್​ ಕ್ರಿಕೆಟ್​ನತ್ತ ಯುವ ಕ್ರಿಕೆಟಿಗರನ್ನು ಸೆಳೆಯವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 125 ಕೋಟಿ (ಯುಎಸ್‌ಡಿ 15 ಮಿಲಿಯನ್) ಮೊತ್ತದ ನಿಧಿಯನ್ನು ಮೀಸಲಿಡಲು ಐಸಿಸಿ(ICC) ನಿರ್ಧರಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ, ಈ ಪ್ರಸ್ತಾವನೆಯನ್ನು ಐಸಿಸಿಗೆ ಸಲ್ಲಿಸಿದೆ.

ಟೆಸ್ಟ್ ಕ್ರಿಕೆಟ್ ಆಡಲಿರುವ ಆಟಗಾರರ ಪಂದ್ಯದ ಕನಿಷ್ಠ ಸಂಭಾವನೆಯನ್ನು ಹೆಚ್ಚಿಸುವ ಜತೆಗೆ ವಿದೇಶಿ ಸರಣಿಗಳಿಗೆ ತಂಡಗಳನ್ನು ಕಳುಹಿಸುವ ತಂಡದ ಪ್ರವಾಸ ಶುಲ್ಕದ ಜತೆಗೆ ಟೆಸ್ಟ್ ಕ್ರಿಕೆಟ್ ಆಡಲಿರುವ ಪ್ರತಿ ಆಟಗಾರರರಿಗೆ ಕನಿಷ್ಠ 8 ಲಕ್ಷ ರೂ. ಸಂಭಾವನೆ ನೀಡಲು ಇದು ನೆರವಾಗಲಿದೆ.

ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡುವ ಜತೆಗೆ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಹೊಸ ಯೋಜನೆಯ ಅಡಿಯಲ್ಲಿ ಈಗಾಗಲೆ ಭಾರತದ ಟೆಸ್ಟ್ ಕ್ರಿಕೆಟಿಗರಿಗೆ ಬೋನಸ್ ರೂಪದಲ್ಲಿ ಹೆಚ್ಚಿನ ಸಂಭಾವನೆ ನೀಡುತ್ತಿದೆ. ವಾರ್ಷಿಕ ಶೇ.75 ಟೆಸ್ಟ್ ಪಂದ್ಯಗಳಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ತಲಾ 45 ಲಕ್ಷ ರೂಪಾಯಿ ಜತೆಗೆ ಪಂದ್ಯದ ಶುಲ್ಕ 15 ಲಕ್ಷ ನೀಡಲಿದ್ದು, ಶೇ.50-70 ಪಂದ್ಯಗಳನ್ನು ಆಡಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ ತಲಾ 30 ಲಕ್ಷ ಬೋನಸ್ ಪಡೆದುಕೊಳ್ಳಲಿದ್ದಾರೆ.

ಭಾರತಕ್ಕೆ ಈ ಲಾಭವಿಲ್ಲ?


ಮೂಲಗಳ ಪ್ರಕಾರ ಐಸಿಸಿಯ ಈ ನಿಧಿ ಯೋಜನೆಯ ಲಾಭ, ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ದೇಶಗಳಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ರಾಷ್ಟ್ರಗಳು ಈಗಾಗಲೇ ತಮ್ಮ ತಂಡದ ಆಟಗಾರರಿಗೆ ಉತ್ತಮ ಸಂಭಾವನೆಯನ್ನು ನೀಡುತ್ತಿದೆ. ಪ್ರಸ್ತುತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆಸ್ಟ್ ಇಂಡೀಸ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚೇತರಿಕೆ ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ ICC Chairman Election: ಅಮಿತ್​ ಶಾ ಮಗ ಜಯ್​ ಶಾ ಐಸಿಸಿಯ ಮುಂದಿನ ಅಧ್ಯಕ್ಷ?

ಯೂತ್​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಐಸಿಸಿ ಪ್ರಯತ್ನ


2028ರಲ್ಲಿ ಲಾಸ್​ ಏಂಜಲಿಸ್​ನಲ್ಲಿ(los angeles 2028 olympics) ನಡೆಯುವ​ ಒಲಿಂಪಿಕ್ಸ್​ಗೆ(olympics) ಕ್ರಿಕೆಟ್​ ಸೇರ್ಪಡೆಯಾಗಿರುವುದು ಈಗಾಗಲೇ ತಿಳಿದ ವಿಚಾರ. ಇದೀಗ 2030ರ ಯೂತ್​ ಒಲಿಂಪಿಕ್ಸ್​ಗೂ(Youth Olympic 2030) ಕ್ರಿಕೆಟ್​ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಕ್ರಿಕೆಟ್​ ಆಟವನ್ನು ಮತ್ತೆ ಒಲಿಂಪಿಕ್ಸ್​ಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಯೂತ್​ ಒಲಿಂಪಿಕ್ಸ್​ ಕ್ರಿಕೆಟ್(olympics cricket)​ ಸೇರ್ಪಡೆಯ ಸಂಬಂಧ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ (ಐಒಸಿ) ಜತೆಗೆ ಚರ್ಚಿಸಲಾಗುವುದು ಎಂದು ಐಸಿಸಿ(ICC) ಹೇಳಿದೆ.

2030ರ ಯೂತ್​ ಒಲಿಂಪಿಕ್​ ಗೇಮ್ಸ್​ ಆತಿಥ್ಯಕ್ಕೆ ಭಾರತ ಬಿಡ್​ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಯೂತ್​ ಒಲಿಂಪಿಕ್ಸ್​ಅನ್ನು ಮುಂಬೈನಲ್ಲಿ ನಡೆಸಲು ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ ಸದಸ್ಯೆಯಾಗಿರುವ ನೀತಾ ಅಂಬಾನಿ ಅವರು ಈಗಾಗಲೇ ಒಲಿಂಪಿಕ್ಸ್​ ವಿಚಾರದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಹೀಗಾಗಿ ಯೂತ್​ ಒಲಿಂಪಿಕ್ಸ್​ಗೆ ಭಾರತ ಆತಿಥ್ಯ ವಹಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುವ ಸಾಧ್ಯತೆ ಇದೆ.

Exit mobile version