Site icon Vistara News

Thailand Open 2023: ಥಾಯ್ಲೆಂಡ್‌ ಓಪನ್​; ಹಿಂದೆ ಸರಿದ ಸಾತ್ವಿಕ್-ಚಿರಾಗ್ ಜೋಡಿ

Satwik-Chirag

#image_title

ಬ್ಯಾಂಕಾಕ್‌: ಭಾರತದ ತಾರಾ ಬ್ಯಾಡ್ಮಿಂಟನ್​ ಜೋಡಿಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ(Satwik-Chirag) ಥಾಯ್ಲೆಂಡ್‌ ಮಾಸ್ಟರ್ಸ್‌ ಸೂಪರ್ 300 ಬ್ಯಾಡ್ಮಿಂಟನ್(Thailand Open 2023) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕಳೆದ ವಾರ ಮುಕ್ತಾಯಕಂಡ ಇಂಡಿಯಾ ಓಪನ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಸಾತ್ವಿಕ್‌ ಇನ್ನೂ ಸಂಪೂರ್ಣ ಚೇತರಿಕೆ ಕಾಣದ ಹಿನ್ನೆಲೆ ಈ ಜೋಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಆಟಗಾರ್ತಿಯರಾದ ಮಾಳವಿಕಾ ಬನ್ಸೋದ್‌(Malvika Bansod) ಮತ್ತು ಸೈನಾ ನೆಹ್ವಾಲ್(Saina Nehwal) ಕೂಡ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಚಿರಾಗ್-ಸಾತ್ವಿಕ್ ಜೋಡಿ ಮಾರ್ಚ್​ನಲ್ಲಿ ನಡೆಯಲಿರುವ ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಟೂರ್ನಿ ವೇಳೆ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಹೇಳಿದೆ.​

ಚಿರಾಗ್-ಸಾತ್ವಿಕ್ ಅನುಪಸ್ಥಿತಿಯಲ್ಲಿ ಕೃಷ್ಣ ಪ್ರಸಾದ್‌ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಡಬಲ್ಸ್​ನಲ್ಲಿ ಭಾರತದ ಪರ ಆಡಲಿದ್ದಾರೆ. ಉಳಿದಂತೆ ಇಶಾನ್ ಭಟ್ನಾಗರ್- ಸಾಯಿ ಪ್ರತೀಕ್‌ ಕೂಡ ಡಬಲ್ಸ್‌ನಲ್ಲಿ ಕಣಕ್ಕಿಳಿಯುವರು. ಪುರುಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್‌, ಸಮೀರ್ ವರ್ಮಾ, ಪ್ರಿಯಾಂಶು ರಾಜಾವತ್‌, ಕಿರಣ್‌ ಜಾರ್ಜ್‌, ಮಿಥುನ್ ಮಂಜುನಾಥ್‌, ಮಹಿಳಾ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಮತ್ತು ಅಸ್ಮಿತಾ ಚಲಿಹಾ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ India Open Badminton: ಇಂಡಿಯಾ ಓಪನ್​; ಚೊಚ್ಚಲ ಪ್ರಶಸ್ತಿ ಗೆದ್ದ ಕುನ್ಲಾವುತ್‌ ವಿತಿಸರ್ನ್

ಮಹಿಳಾ ಡಬಲ್ಸ್​ನಲ್ಲಿ ತ್ರಿಶಾ ಜೋಲಿ- ಗಾಯತ್ರಿ ಗೋಪಿಚಂದ್‌, ಶೃತಿ ಮಿಶ್ರಾ- ಎನ್‌.ಸಿಕ್ಕಿರೆಡ್ಡಿ, ತನಿಶಾ ಕ್ರಾಸ್ತೊ- ಅಶ್ವಿನಿ ಪೊನ್ನಪ್ಪ, ಮಿಶ್ರ ಡಬಲ್ಸ್‌ನಲ್ಲಿ ಬಿ.ಸುಮೀತ್ ರೆಡ್ಡಿ- ಅಶ್ವಿನಿ, ರೋಹನ್ ಕಪೂರ್- ಸಿಕ್ಕಿ, ಇಶಾನ್‌- ತನಿಶಾ ಆಡಲಿದ್ದಾರೆ. ಮಾರ್ಚ್​ನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಲ್​ ಇಂಗ್ಲೆಂಡ್​ ಚಾಂಪಿಯನ್​ ಟೂರ್ನಿಯ ದೃಷ್ಠಿಯಲ್ಲಿ ಭಾರತೀಯ ಬ್ಯಾಡ್ಮಿಂಟನ್​ ಪಟುಗಳು ಈ ಟೂರ್ನಿಯಿಂದಲೇ ಭರ್ಜರಿ ತಯಾರಿ ನಡೆಸುವ ಯೋಜನೆಯಲ್ಲಿದ್ದಾರೆ.​

Exit mobile version