Site icon Vistara News

ಆ ಒಂದು ಪುಸ್ತಕ ಮಗ ಕ್ರಿಕೆಟರ್​ ಆಗುವಂತೆ ಮಾಡಿತು; ಕುಶಾಗ್ರಾ ತಂದೆಯ ಮನದಾಳದ ಮಾತು

kumar kushagra

ನವದೆಹಲಿ: ಮಂಗಳವಾರ ನಡೆದ 2024 ಐಪಿಎಲ್(IPL 2024)​ ಆಟಗಾರರ ಮಿನಿ ಹರಾಜಿನಲ್ಲಿ 7.2 ಕೋಟಿ ರೂ. ಮೊತ್ತ ಪಡೆದು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡದ ಸೇರಿದ ಜಾರ್ಖಂಡ್ ವಿಕೆಟ್-ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರಾ(Kumar Kushagra) ಅವರಿಗೆ ತಂಡದ ಮೆಂಟರ್ ಸೌರವ್ ಗಂಗೂಲಿ(Sourav Ganguly) ನೀಡಿದ ಭರವಸೆಯನ್ನು ಕುಶಾಗ್ರಾ ತಂದೆ ಬಹಿರಂಗಪಡಿಸಿದ್ದಾರೆ.

“ಸೌರವ್ ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲು ನನ್ನ ಮಗನ್ನು 10 ಕೋಟಿ ರೂ. ನೀಡಿಯಾದರೂ ಖರೀದಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಅದರಂತೆ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ’ ಎಂದು ಕುಶಾಗ್ರಾ ಅವರ ತಂದೆ ಶಶಿಕಾಂತ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.


“ಕೋಲ್ಕತಾದ ಈಡನ್​ ಗಾರ್ಡನ್​ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಮಗ ಕುಶಾಗ್ರಾ ಉತ್ತಮ ಬ್ಯಾಟಿಂಗ್​ ಮತ್ತು ಕೀಪಿಂಗ್​ ಪ್ರದರ್ಶನ ತೋರುವ ಮೂಲಕ ದಾದಾ ಅವರ ಗಮನಸೆಳೆದಿದ್ದರು. ಈ ವೇಳೆ ಅವರು ಮುಂದಿನ ಐಪಿಎಲ್​ ಹರಾಜಿನಲ್ಲಿ ಎಷ್ಟೇ ಮೊತ್ತ ನೀಡಿಯಾದರು ಡೆಲ್ಲಿ ತಂಡಕ್ಕೆ ಸರಿಸುತ್ತೇನೆ ಎಂದು ಗಂಗೂಲಿ ಹೇಳಿದ್ದರು. ಧೋನಿಯಂತೆ ಬೇಲ್ಸ್​ ಹಾರಿಸುವ ಆತ ಇದೀಗ ಗಂಗೂಲಿ ಅವರ ಮಾತಿನಂತೆ ಡೆಲ್ಲಿ ಸೇರಿಕೊಂಡಿದ್ದಾನೆ ಎಂದು ಶಶಿಕಾಂತ್ ಹೇಳಿದ್ದಾರೆ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಮಾರಾಟವಾಗದ ಟಿ20 ಕ್ರಿಕೆಟ್​ನ ನಂಬರ್ 1 ಬೌಲರ್


20 ಲಕ್ಷ ಮೂಲಬೆಲೆ ಹೊಂದಿದ್ದ ಕುಶಾಗ್ರಾ

20 ಲಕ್ಷ ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅನ್‌ಕ್ಯಾಪ್ಡ್ ಭಾರತೀಯ ಯುವ ಕ್ರಿಕೆಟಿಗನ ಖರೀದಿಗಾಗಿ ಎಲ್ಲ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಬಿಡ್​ ಮಾಡಿತ್ತು. ಆದರೆ ಕೊನೆಗೂ ಪಟ್ಟು ಬಿಡದ ಗಂಗೂಲಿ ಡೆಲ್ಲಿ ತಂಡಕ್ಕೆ ಖರೀದಿ ಮಾಡುವಲ್ಲಿ ಯಶಸ್ಸು ಸಾಧಿಸಿದರು. ಭಾರತೀಯ ಕ್ರಿಕೆಟ್​ಗೆ ಅನೇಕ ಪ್ರತಿಭಾವಂತ ಆಟಗಾರರನ್ನು ಪರಿಚಯಿಸಿದ ಖ್ಯಾತಿ ಗಂಗೂಲಿಯದ್ದು. ಇದೀಗ ಗಂಗೂಲಿ ಗರಡಿ ಸೇರಿರುವ ಕುಶಾಗ್ರಾ ದಾದಾ ಮಾರ್ಗದರ್ಶನದಲ್ಲಿ ಬೆಳೆದು ಮುಂದಿನ ದಿನಗಳಲ್ಲಿ ಭಾರತ ತಂಡ ಪ್ರವೇಶಿಸಿದರು ಅಚ್ಚರಿ ಇಲ್ಲ.

ಇದನ್ನೂ ಓದಿ IPL 2024: ‘ಆರ್​ಸಿಬಿಗೆ ಒಂದು ಕಪ್​ ಗೆಲ್ಲಿಸಿ ಕೊಡಿ’; ಧೋನಿಗೆ ಮನವಿ ಮಾಡಿದ ಅಭಿಮಾನಿ

ಪುಸ್ತಕ ಓದಿ ಮಗನನ್ನು ಕ್ರಿಕೆಟ್​ಗೆ ಸೇರಿಸಿದೆ

ಮಗ ಕ್ರಿಕೆಟ್​ಗೆ ಸೇರಿದ ರೋಚಕ ಕಥೆಯನ್ನು ಕೂಡ ಅವರ ತಂದೆ ಬಹಿರಂಗಪಡಿಸಿದ್ದಾರೆ. ನನ್ನ ಸಹೋದ್ಯೋಗಿಯೊಬ್ಬರು ನನಗೆ ಬಾಬ್ ವೂಲ್ಮರ್ ಅವರ ಆರ್ಟ್ ಅಂಡ್ ಸೈನ್ಸ್ ಆಫ್ ಕ್ರಿಕೆಟ್ ಎಂಬ ಪುಸ್ತಕವನ್ನು ಓದುವಂತೆ ನೀಡಿದರು. ಆ ಪುಸ್ತಕವನ್ನು ನಾನು ನಾಲ್ಕೈದು ಬಾರಿ ಓದಿದೆ. ಪುಸ್ತಕ ಓದಿದ ನನಗೆ ನನ್ನ ಮಗನನ್ನು ಕ್ರಿಕೆಟರ್​ ಮಾಡುವಂತೆ ಪ್ರೇರೇಪಿಸಿತು. ಹೀಗಾಗಿ ಕುಶಾಗ್ರಾಗೆ ತರಬೇತಿ ಪ್ರಾರಂಭಿಸಿದೆ” ಎಂದು ಶಶಿಕಾಂತ್ ನೆನಪಿಸಿಕೊಂಡರು.


ಕುಶಾಗ್ರಾ ಸಾಧನೆ

19 ವರ್ಷ ವಯಸ್ಸಿನ ಕುಶಾಗ್ರಾ ಈ ವರ್ಷದ ಆರಂಭದಲ್ಲಿ ನಡೆದ ದೇವಧರ್ ಟ್ರೋಫಿಯಲ್ಲಿ ಐದು ಇನ್ನಿಂಗ್ಸ್‌ ಆಡಿ 109.13 ಸ್ಟ್ರೈಕ್ ರೇಟ್‌ನಲ್ಲಿ 227 ರನ್‌ ಬಾರಿಸಿದ್ದರು. ಈ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಬಾರಿಸಿದ ಆರನೇ ಆಟಗಾರನಾಗಿ ಹೊರಹೊಮ್ಮಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದರು. 2022 ರಲ್ಲಿ ಕುಶಾಗ್ರಾ ಕೇವಲ 17 ವರ್ಷದವರಾಗಿದ್ದಾಗ ರಣಜಿ ಟ್ರೋಫಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ನಾಗಾಲ್ಯಾಂಡ್ ವಿರುದ್ಧ ದ್ವಿಶತಕ ಬಾರಿಸಿ ಗಮನಸೆಳೆದಿದ್ದರು.

Exit mobile version