ದುಬೈ : ಏಷ್ಯಾ ಕಪ್ -೨೦೨೨ (Asia Cup) ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೧೭೦ ರನ್ ಬಾರಿಸಿದೆ. ಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಭಾನುಕಾ ರಾಜಪಕ್ಸ (೭೧*) ಅಜೇಯ ಅರ್ಧ ಶತಕ ಬಾರಿಸುವ ಮೂಲಕ ತಂಡದ ಬೃಹತ್ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಬೌಲಿಂಗ್ ಮಾಡಿದ ಪಾಕಿಸ್ತಾನದ ವೇಗಿಗಳು ಲಂಕಾ ಬ್ಯಾಟರ್‌ಗಳನ್ನು ಸತತವಾಗಿ ಪೆವಿಲಿಯನ್‌ಗೆ ಕಳುಹಿಸಿದರು. ಹೀಗಾಗಿ ಲಂಕಾ ತಂಡ ೫೮ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಕ್ರೀಸ್ ಗೆ ಬಂದ ಭಾನುಕಾ ರಾಜಪಕ್ಸ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ೪೫ ಎಸೆತಗಳಲ್ಲಿ ೭೧ ರನ್ ಬಾರಿಸಿದರು. ಇವರಿಗೆ ಬೆಂಬಲ ಕೊಟ್ಟ ವಾನಿಂದು ಹಸರಂಗ ೨೧ ಎಸೆತಗಳಲ್ಲಿ ೩೬ ರನ್ ಬಾರಿಸಿದರು. ಕೊನೆಯಲ್ಲಿ ಚಾಮಿಕಾ ಕರುಣಾತ್ನೆ ೧೪ ರನ್‌ಗಳ ಕೊಡುಗೆ ಕೊಟ್ಟರು.
ಸ್ಕೋರ್ ವಿವರ
ಶ್ರೀಲಂಕಾ : ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೭೦ (ಭಾನುಕಾ ರಾಜಪಕ್ಸ ೭೧*, ವಾನಿಂದು ಹಸರಂಗ ೩೬; ಹ್ಯಾರಿಸ್ ರವೂಫ್ ೨೯ಕ್ಕೆ೩).
ಇದನ್ನೂ ಓದಿ | Asia Cup | ಶ್ರೀಲಂಕಾ- ಪಾಕಿಸ್ತಾನ ನಡುವೆ ಇಂದು ಏಷ್ಯಾ ಕಪ್ ಫೈನಲ್ ಫೈಟ್