ಹೈದರಾಬಾದ್ : ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ (Hardik Pandya) ಮೂರನೇ ಅಂಪೈರ್ ತಪ್ಪಾಗಿ ಔಟ್ ನೀಡಿದ್ದರು. ವಿಕೆಟ್ಕೀಪರ್ ಟಾಮ್ ಲೇಥಮ್ ಅವರ ಗ್ಲವ್ಸ್ ತಾಗಿದ್ದರೂ ಚೆಂಡು ತಾಗಿ ಬೇಲ್ಸ್ ಎಗರಿದೆ ಎಂದು ಬೌಲ್ಡ್ ಎಂದಿದ್ದರು. ಮೂರನೇ ಅಂಪೈರ್ನ ಈ ತೀರ್ಮಾನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಕ್ರಿಕೆಟ್ ಅಭಿಮಾನಿಗಳು ತಾಂತ್ರಿಕ ಸಹಾಯ ಪಡೆದ ಹೊರತಾಗಿಯೂ ಅಂಪೈರ್ ತಪ್ಪು ತೀರ್ಪು ನೀಡಿದ್ದು ಸರಿಯಲ್ಲ ಎಂದಿದ್ದರೆ, ಹಿರಿಯ ಕ್ರಿಕೆಟಿಗರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಇವೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟಾಂಕೊವಿಕ್ ಕೂಡ ಅಂಪೈರ್ ತೀರ್ಪಿಗೆ ಬೇಸರ ವ್ಯಕ್ತಪಡಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಚೆಂಡು ವಿಕೆಟ್ಗೆ ತಾಗಿಯೇ ಇಲ್ಲ. ಹೀಗಾಗಿ ಬೌಲ್ಡ್ ಆಗಿಲ್ಲ. ಹಾಗಾದರೆ ಹಾರ್ದಿಕ್ ಪಾಂಡ್ಯ ಔಟ್ ಆಗಿದ್ದ ಹೇಗೆ ನತಾಶಾ ಅನುಮಾನ ವ್ಯಕ್ತಪಡಿಸಿದ್ದಾರೆ. ನತಾಶಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ಔಟಾಗಿರುವ ಹೊರತಾಗಿಯೂ ಶುಭ್ಮ್ ಗಿಲ್ ಅವರ ಅಮೋಘ ದ್ವಿ ಶತಕದ (208 ರನ್) ಭಾರತ ತಂಡ 8 ವಿಕೆಟ್ಗೆ 349 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ ಬಳಗ 337 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು.
ಇದನ್ನೂ ಓದಿ | INDvsNA ODI | ವಿವಾದಾತ್ಮಕ ತೀರ್ಪಿಗೆ ಹಾರ್ದಿಕ್ ಪಾಂಡ್ಯ ಔಟ್; ಮೂರನೇ ಅಂಪೈರ್ ವಿರುದ್ಧ ನೆಟ್ಟಿಗರ ಕಿಡಿ