ಸಿಡ್ನಿ: ಆ್ಯಶಸ್ ಸರಣಿಯ(The Ashes 2023) ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜಾನಿ ಬೇರ್ಸ್ಟೋ ಅವರ ವಿವಾದಾತ್ಮ ರನೌಟ್ ವಿಚಾರದಲ್ಲಿ ಈಗಾಗಲೇ ಉಭಯ ದೇಶಗಳ ಪ್ರಧಾನಿಗಳು ಕ್ರೀಡಾಸ್ಫೂರ್ತಿ ವಿಚಾರವಾಗಿ ತಮ್ಮ ದೇಶದ ಆಟಗಾರರಿಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿದ್ದಾರೆ. ಇದೀಗ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಾಧ್ಯಮಗಳ ಮಧ್ಯೆಯೂ ಈ ವಿಚಾರ ಸಮರಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾದ ಪತ್ರಿಕೆಯೊಂದು ಇಂಗ್ಲೆಂಡ್ ತಂಡದ ಆಟಗಾರರು ಬೇರ್ಸ್ಟೋ ರನೌಟ್ ವಿಚಾರವಾಗಿ ಕಟುವಾಗಿ ಮತ್ತು ವ್ಯಂಗ್ಯವಾಗಿ ಟೀಕಿಸಿ ವರದಿ ಮಾಡಿದೆ. ‘ಅಳುತ್ತಿರುವ ಮಕ್ಕಳು’ ಎಂದು ಇಂಗ್ಲೆಂಡ್ ತಂಡವನ್ನು ಕರೆದು ಲೇವಡಿ ಮಾಡಿದೆ. ಆಸ್ಟ್ರೇಲಿಯಾದ ‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆ ತನ್ನ ಮುಖಪುಟದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಮಕ್ಕಳು ಬಾಯಲ್ಲಿ ಪೆಸಿಫಯರ್ ಇಟ್ಟುಕೊಳ್ಳುವಂಥ ವ್ಯಂಗ್ಯವಾಡುವ ಚಿತ್ರವವನ್ನು ಹಂಚಿಕೊಳ್ಳುವ ಮೂಲಕ ಆಸೀಸ್ ತಂಡದ ಬೆಂಬಲಕ್ಕೆ ನಿಂತಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ನ ಕೆಲ ಪತ್ರಿಕೆಗಳು ಆಸ್ಟ್ರೇಲಿಯಾವನ್ನು ಟೀಕಿಸಿತ್ತು. ಕ್ರಿಕೆಟ್‌ನ ಕ್ರೀಡಾ ಸ್ಪೂರ್ತಿಯನ್ನು ಆಸ್ಟ್ರೇಲಿಯಾ ಮರೆತಿದೆ ಎಂದು ವರದಿ ಮಾಡಿತ್ತು. ಇದಕ್ಕೆ ಈಗ ಆಸೀಸ್ ಮಾಧ್ಯಮಗಳು ತಕ್ಕ ತಿರುಗೇಟು ನೀಡಿದೆ.
That’s definitely not me, since when did I bowl with the new ball https://t.co/24wI5GzohD
— Ben Stokes (@benstokes38) July 3, 2023
ಆಸ್ಟ್ರೇಲಿಯಾದ ಪ್ರತಿಕೆ ಮಾಡಿರುವ ಲೇವಡಿಯ ಸುದ್ದಿಯ ಫೋಟೊವನ್ನು ಬೆನ್ ಸ್ಟೋಕ್ಸ್(ben stokes) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು “ಅದು ಖಂಡಿಯವಾಗಿಯೂ ನಾನಲ್ಲ. ನಾನು ಯಾವತ್ತೂ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಿಲ್ಲ. ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದಿತ್ತು. ನಿಮ್ಮ ದೇಶದ ಕ್ರೀಡಾಸ್ಫೂರ್ತಿ ಈ ವಿಚಾರದಿಂದಲೇ ತಿಳಿದು ಬರುತ್ತದೆ” ಎಂದು ಲಘುವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.
ಇದನ್ನೂ ಓದಿ Ashes 2023: ಚರ್ಚೆಗೆ ಕಾರಣವಾದ ಜಾನಿ ಬೇರ್ಸ್ಟೋ ಔಟ್; ಕ್ರೀಡಾಸ್ಫೂರ್ತಿ ಮರೆತರೇ ಆಸೀಸ್ ಆಟಗಾರರು?
ಇದೇ ವಿಚಾರದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಅಸಮಾಧಾನ ವ್ಯಕ್ತಪಡಿಸಿ, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡೆ ಎಂದು ಹೇಳಿದ್ದಾರೆ. ಆದರೆ ಆಸೀಸ್ ಆಟಗಾರರನ್ನು ನಿಂದಿಸಿದ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ ಸದಸ್ಯರನ್ನು ಅಮಾನತು ಕ್ರಮವನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಶಿಕ್ಷೆ ನ್ಯಾಯಯುವಾಗಿದೆ ಎಂದು ಹೇಳಿದ್ದಾರೆ. ಬೇರ್ಸ್ಟೋ ಅವರ ವಿವಾದಾತ್ಮಕ ಔಟ್ ತೀರ್ಪಿನ ಹಿನ್ನೆಲೆಯಲ್ಲಿ ಕೋಪಗೊಂಡ ಸದಸ್ಯರು, ಆಸೀಸ್ ಆಟಗಾರರು ಡ್ರೆಸಿಂಗ್ ರೂಮ್ಗೆ ತೆರಳುತ್ತಿದ್ದ ವೇಳೆ ನಿಂದಿಸಿದ್ದರು.