ಲಂಡನ್: ಇಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ(The Ashes 2023) ಅಂತಿಮ ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ಬಂದು ನಿಂತಿದೆ. ಇಂಗ್ಲೆಂಡ್ ಬಾರಿಸಿದ ಮೊದಲ ಇನಿಂಗ್ಸ್ಗೆ ಪ್ರತಿಯಾಗಿ ಬ್ಯಾಟ್ ಮಾಡಿದ ಆಸೀಸ್ 295 ರನ್ಗೆ ಆಲೌಟ್ ಆಗಿ 12 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಎರಡು ದಿನಗಳ ಆಟದಲ್ಲಿ ಇತ್ತಂಡಗಳು ಆಲೌಟ್ ಆಗಿದ್ದು ಹೋರಾಟ ಸಲಬಲದಿಂದ ಸಾಗುತ್ತಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಇರುವುದರಿಂದ ಪಂದ್ಯ ಸ್ಪಷ್ಟ ಪಲಿತಾಂಶ ಕಾಣುವ ಸಾಧ್ಯತೆ ಅಧಿಕವಾಗಿದೆ.
ದ್ವಿತೀಯ ದಿನದಾಟದ ವೇಳೆ ಮೂರನೇ ಅಂಪೈರ್ ಭಾರತದ ನಿತಿನ್ ಮೆನನ್(Nitin Menon) ಅವರು ನೀಡಿದ ರನೌಟ್ ತೀರ್ಪಿಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(Ravichandran Ashwin) ಕೂಡ ಟ್ವೀಟ್ ಮೂಲಕ “ಸರಿಯಾದ ತೀರ್ಪು ನೀಡಿದ ನಿತಿನ್ ಮೆನನ್ ಅವರನ್ನು ಅಭಿನಂದಿಸಲೇಬೇಕು” ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ IND vs WI: ಬ್ಯಾಟಿಂಗ್ನಲ್ಲೂ ನೂತನ ದಾಖಲೆ ಬರೆದ ಅಶ್ವಿನ್; ದಿಗ್ಗಜ ಆಟಗಾರನ ರೆಕಾರ್ಡ್ ಪತನ
ಆಸ್ಟ್ರೇಲಿಯಾದ ಬ್ಯಾಟಿಂಗ್ ಇನಿಂಗ್ಸ್ನ 78ನೇ ಓವರ್ನಲ್ಲಿ 42 ರನ್ ಗಳಿಸಿದ್ದ ಸ್ಟೀವನ್ ಸ್ಮಿತ್(steven smith) ಅವರು ಕ್ರಿಸ್ ವೋಕ್ಸ್ ಅವರ ಎಸೆತದಲ್ಲಿ 2 ರನ್ ಕಸಿಯುವ ವೇಳೆ ರನೌಟ್ ಆದರು. ಕೀಪರ್ ಜಾನಿ ಬೇರ್ ಸ್ಟೋ ಅವರು ಚೆಂಡನ್ನು ವಿಕೆಟ್ಗೆ ತಾಗಿಸಿದರು. ಆದರೆ ಲೆಗ್ ಅಂಪೈರ್ ಅವರು ಮೂರನೇ ಅಂಪೈರ್ಗೆ ತೀರ್ಪು ನೀಡುವಂತೆ ಮನವಿ ಮಾಡಿದರು. ಕ್ರೀಸ್ಗೆ ಬರುವ ಮುನ್ನವೇ ಚೆಂಡು ವಿಕೆಟ್ಗೆ ತಲುಲಿದೆ ಎಂದು ಸ್ಮಿತ್ ಬೇಸರದಿಂದ ಪೆವಿಲಿಯನ್ ಕಡೆಗೆ ತೆರಳಲು ಸಿದ್ಧರಾಗಿದ್ದರು. ರೀಪ್ಲೆಯಲ್ಲಿ ನೋಡುವಾಗ ಸ್ಮಿತ್ ಅವರು ಕ್ರೀಸ್ನಿಂದ ಹಿಂದೆ ಇರುವುದನ್ನು ಕಂಡುಬಂತು ಇಂಗ್ಲೆಂಡ್ ಆಟಗಾರರು ಸಂಭ್ರಮಾಚರಣೆ ಆರಂಭಿಸಿದರು.
ಮೂರನೇ ಅಂಪೈರ್ ಆಗಿದ್ದ ನಿತಿನ್ ಮೆನನ್ ಅವರು ಹಲವು ಆ್ಯಂಗಲ್ನಿಂದ ಇದನ್ನು ಪರೀಕ್ಷಿಸಿದಾಗ ಜಾನಿ ಬೇರ್ಸ್ಟೋ ಅವರು ವಿಕೆಟ್ಗೆ ಚೆಂಡು ಹಿಡಿಯುವ ಮುನ್ನವೇ ಗ್ಲೌಸ್ ತಾಗಿಸಿರುವುದು ಕಂಡು ಬಂದು ಹೀಗಾಗಿ ಇದನ್ನು ನಾಟೌಟ್ ಎಂದು ತೀರ್ಪುನೀಡಿದರು. ಕಷ್ಟಕರವಾದ ಈ ತೀರ್ಪನ್ನು ಅತ್ಯಂತ ಯಶಸ್ವಿಯಾಗಿ ನೀಡಿದ ನಿತಿನ್ ಮೆನನ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರನೌಟ್ ಸಂಕಷ್ಟದಿಂದ ಪಾರಾದ ಸ್ಮಿತ್ ಅರ್ಧಶತಕ ಬಾರಿಸಿದರು. ಒಟ್ಟು 123 ಎಸೆತ ಎದುರಿಸಿ 71 ರನ್ ಗಳಿಸಿ ಔಟಾದರು.