ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ಅವರು ಆಸೀಸ್ ವಿರುದ್ಧ ನಡೆಯುತ್ತಿರುವ ಆ್ಯಶಸ್ ಸರಣಿಯ(The Ashes 2023) ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮದೇ ದೇಶದ ಮಾಜಿ ಆಟಗಾರನ ದಾಖಲೆಯೊಂದನ್ನು ಮುರಿದಿದ್ದಾರೆ.
ಅಂತಿಮ ಟೆಸ್ಟ್ನ ದ್ವಿತೀಯ ಇನಿಂಗ್ಸ್ನಲ್ಲಿ 42 ರನ್ ಗಳಿಸಿದ ಸ್ಟೋಕ್ಸ್ 3 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಟಾಡ್ ಮರ್ಫಿಗೆ ವಿಕೆಟ್ ಒಪ್ಪಿಸಿದರು. ಒಂದು ಸಿಕ್ಸರ್ ಬಾರಿಸುತ್ತಿದ್ದಂತೆ ಆ್ಯಶಸ್ ಸರಣಿಯೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿ ಮೂಡಿಬಂದರು. ಈ ಮೂಲಕ ಕೆವಿನ್ ಪೀಟರ್ಸನ್(Kevin Pietersen) ದಾಖಲೆಯನ್ನು ಮುರಿದರು. ಪಿಟರ್ಸನ್ 2005ರ ಆ್ಯಶಸ್ ಸರಣಿಯಲ್ಲಿ 14 ಸಿಕ್ಸರ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಸ್ಟೋಕ್ಸ್ 15 ಸಿಕ್ಸರ್ ಬಾರಿಸಿ ಅಗ್ರಸ್ಥಾನ ಪಡೆದಿದ್ದಾರೆ.
ಬೃಹತ್ ಲೀಡ್ ಪಡೆದ ಇಂಗ್ಲೆಂಡ್
ದ್ವಿತೀಯ ಇನಿಂಗ್ಸ್ನಲ್ಲಿ ಬಿರುಸಿನ ಆಟವಾಡಿದ ಇಂಗ್ಲೆಂಡ್ ಬೃಹತ್ ಮೊತ್ತದ ಲೀಡ್ ಪಡೆದು ಆಸೀಸ್ ಮೇಲೆ ಒತ್ತಡ ಹೇರಿದೆ. ಮೊದಲ ಇನಿಂಗ್ಸ್ನ 12 ರನ್ಗಳ ಹಿನ್ನಡೆಯಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಸಂಘಟಿತ ಬ್ಯಾಟಿಂಗ್ ನೆರವಿನಿಂದ 395 ರನ್ ಗಳಿಸಿ 383 ರನ್ ಲೀಡ್ ಪಡೆದಿದೆ. ಇಂಗ್ಲೆಂಡ್‌ನ ದೊಡ್ಡ ಮೊತ್ತವನ್ನು ಬೆನ್ನಟ್ಟುತ್ತಿರಉವ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ.
ಇಂಗ್ಲೆಂಡ್‌ನ ದ್ವಿತೀಯ ಇನಿಂಗ್ಸ್ನಲ್ಲಿ ಅಗ್ರ ಕ್ರಮಾಂಕದ ಆಟಗಾರರೆಲ್ಲ ಸ್ಫೋಟಕ ಬ್ಯಾಟಿಂಗ್ ನಡೆಸಿ ಆಸೀಸ್ ಬೌಲಿಂಗ್ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸಿದರು. ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ಆಟಗಾರರು ಎರಡಂಕಿ ಮೊತ್ತವನ್ನು ದಾಡುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ The Ashes 2023; ನಿತಿನ್ ಮೆನನ್ ರನೌಟ್ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಆರ್.ಅಶ್ವಿನ್
𝗘𝗻𝗴𝗹𝗮𝗻𝗱'𝘀 𝗡𝗼. 𝟯
— England Cricket (@englandcricket) July 29, 2023
👑 @BenStokes38 👑 #EnglandCricket | #Ashes pic.twitter.com/5UL7WLlPU6
ಆರಂಭಕಾರರಾದ ಜಾಕ್ ಕ್ರಾಲಿ 73, ಬೆನ್ ಡಕೆಟ್ 42 ರನ್ ಹೊಡೆದರೆ. ರೂಟ್ ಗಳಿಕೆ 91 ರನ್ ಗಳಿಸಿ 9 ರನ್ ಅಂತರದಲ್ಲಿ ಶತಕ ವಂಚಿತರಾದರು. ನಾಯಕ ಬೆನ್ ಸ್ಟೋಕ್ಸ್ ಕೊಡುಗೆ 42, ಜಾನಿ ಬೇರ್‌ಸ್ಟೊ 78, ಮೊಯಿನ್ ಅಲಿ 29 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆಸ್ಟ್ರೇಲಿಯಾ ಪರ ದ್ವಿತೀಯ ಇನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಟಾಡ್ ಮರ್ಫಿ ತಲಾ 4 ವಿಕೆಟ್ ಉರುಳಿಸಿದರು.