ಲಂಡನ್: ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮರ್ನಸ್ ಲಾಬುಶೇನ್ ವಿಶ್ವದ ಅತ್ಯುತ್ತಮ ಟೆಸ್ಟ್ ಕ್ರಿಕೆಟ್ ಬ್ಯಾಟರ್. ಟೆಸ್ಟ್ ಕ್ರಿಕೆಟ್ ಬಗ್ಗೆ ಅವರ ಗೀಳು ಪ್ರತಿ ಬಾರಿಯ ಚರ್ಚೆಯ ವಿಷಯ ಎನಿಸಿಕೊಂಡಿದೆ. ಆದರೆ ಭಾರತದ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ಅವರ ಒಳ ಉಡುಪು ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ನೇರ ಪ್ರಸಾರದ ಕ್ಯಾಮೆರಾಮ್ಯಾನ್ಗಳ ಕಣ್ಣಿಗೆ ಬಿದ್ದ ಅವರ ಒಳ ಉಡುಪು ಚರ್ಚೆಯ ವಿಷಯ ಎನಿಸಿಕೊಂಡಿತು.
ಪ್ರಸ್ತುತ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್ಮನ್ ಆಗಿರುವ ಮರ್ನಸ್ ಲಾಬುಶೇನ್, ಫೈನಲ್ ಪಂದ್ಯದ 3ನೇ ದಿನದಂದು ತಮ್ಮ ಬ್ಯಾಟಿಂಗ್ ವೇಳೆ ಭಾರತೀಯ ಬೌಲರ್ಗಳ ಬೆವರಿಳಿಸಿದ್ದರು. ಅದರಲ್ಲೂ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಮರ್ನಸ್ ನಡುವೆ ಜಿದ್ದಾಜಿದ್ದಿಯೇ ನಡೆದಿತ್ತು. ಏತನ್ಮಧ್ಯೆ ಅವರು ಒಳಉಡುಪು ಎಲ್ಲರ ಗಮನ ಸೆಳೆಯಿತು.
2021-22ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 4-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ತಂಡದ ಈ ಸಾಧನೆಯನ್ನು ತಮ್ಮ ಒಳಚಡ್ಡಿಯಲ್ಲಿ ಬರೆಸಿಕೊಂಡಿದ್ದಾರೆ ಲಾಬು ಶೇನ್. ಪಂದ್ಯದ ನಡುವೆ ಅನಿವಾರ್ಯವಾಗಿ ಅವರಿಗೆ ಪ್ಯಾಂಟ್ ಜಾರಿಸುವ ಅನಿವಾರ್ಯತೆ ಎದುರಾಯಿತು. ಈ ವೇಳೆ ಅದರಲ್ಲಿ ಇಂಗ್ಲೆಂಡ್ ವಿರುದ್ಧದ 4-0 ಅಂತರದ ಗೆಲುವಿನ ಸಂಭ್ರಮವನ್ನು ಬರೆಯಲಾಗಿತ್ತು.
ಇದನ್ನೂ ಓದಿ :WTC Final 2023 : ಕೆಂಗಣ್ಣನಿಂದ ಕೆಕ್ಕರಿಸಿ ನೋಡಿ ಗೆಲ್ಲುವೆ; ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಟೀಮ್ ಇಂಡಿಯಾ ವೇಗಿ!
ದಕ್ಷಿಣ ಆಫ್ರಿಕಾ ಮೂಲದ ಈ ಕ್ರಿಕೆಟಿಗ 2021-22ರ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್. ಅವರೀಗ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಹಾಲಿ ಆವೃತ್ತಿಯ ಆಶಸ್ ಸರಣಿಯಲ್ಲಿ ಮೇಲೆ ಕಣ್ಣಿಟ್ಟಿದ್ದಾರೆ. ಈ ವೇಳೆ ಅವರು ಒಳಉಡುವಿನ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಲಿದೆ.
ಚೊಚ್ಚಲ ಪ್ರಶಸ್ತಿಯ ಹಾದಿಯಲ್ಲಿ ಆಸ್ಟ್ರೇಲಿಯಾ
ಇದಕ್ಕೂ ಮುನ್ನ ಲಾಬುಶೇನ್ ಅವರು ಡ್ರೆಸ್ಸಿಂಗ್ ರೂಮ್ನಲ್ಲ ನಿದ್ದೆ ಮಾಡುತ್ತಿದ್ದ ವಿಡಯೊ ಕೂಡ ಬಹಿರಂಗಗೊಂಡಿತ್ತು. ಡೇವಿಡ್ ವಾರ್ನರ್ ಅವರನ್ನು ನಿದ್ದೆಯಿಂದ ಎಬ್ಬಿಸಿದ್ದ ಚಿತ್ರಣವೂ ಸುದ್ದಿಯಾಗಿತ್ತು. ಆದರೆ ನಿದ್ದೆಯಿಂದ ಎದ್ದ ಅವರು ಭರ್ಜರಿಯಾಗಿ ಬ್ಯಾಟ್ ಮಾಡಿ 41 ರನ್ ಬಾರಿಸಿದ್ದರು.
28 ವರ್ಷದ ಆಟಗಾರ ನಾಲ್ಕನೇ ದಿನದಂದು ಹೆಚ್ಚು ಪರಿಣಾಮ ಬೀರಲಿಲ್ಲ. ಏಕೆಂದರೆ ಅವರು ನಾಲ್ಕನೇ ದಿನ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಆದಾಗ್ಯೂ ಆಸ್ಟ್ರೇಲಿಯಾ ತಂಡ ಮುನ್ನಡೆ ಹಾದಿಯಲ್ಲಿದೆ. ಪಂದ್ಯ ಗೆಲ್ಲುವ ಅವಕಾಶಗಳನ್ನು ಸೃಷ್ಟಿಸಿಕೊಂಡಿದೆ.