ಕ್ಯಾನ್‌ಬೆರಾ : ವರ್ಣ ಭೇದ ನೀತಿಯನ್ನು ವಿರೋಧಿಸಿ (Black Lives Matter) ಪಂದ್ಯಕ್ಕೆ ಮೊದಲು ಆಟಗಾರರು ಮೈದಾನದಲ್ಲಿ ಮೊಣಕಾಲೂರಿ ನಿಲ್ಲುವ ಅಭಿಯಾನಕ್ಕೆ ಹೆಚ್ಚೆಚ್ಚು ಮೌಲ್ಯ ದೊರೆಯುತ್ತಿದೆ. ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಇದನ್ನು ಮಾಡುತ್ತಿದ್ದರೂ ಇದುವರೆಗೂ ಆಸ್ಟ್ರೇಲಿಯಾ ತಂಡ ತವರು ನೆಲದಲ್ಲಿ ಈ ರೀತಿ ಬೆಂಬಲ ವ್ಯಕ್ತಪಡಿಸಿರಲಿಲ್ಲ. ಇದೀಗ ಆಸೀಸ್ ಬಳಗ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪಂದ್ಯಕ್ಕೆ ಮೊದಲು ಮೊಣಕಾಲು ಊರಲು ನಿರ್ಧರಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಲು ನಿರ್ಧರಿಸಿದೆ.
ನವೆಂಬರ್ ೩೦ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಡೆಯಲಿದೆ. ಮೊದಲ ಪಂದ್ಯ ಪರ್ತ್‌ನಲ್ಲಿ ಆಯೋಜನೆಗೊಂಡಿದ್ದರೆ, ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ಆಯೋಜನೆಗೊಂಡಿದೆ. ಈ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಜತೆ ಆಸ್ಟ್ರೇಲಿಯಾ ತಂಡದ ಆಟಗಾರರೂ ಮೊಣಕಾಲೂರಿ ವರ್ಣಭೇದ ನೀತಿಯ ವಿರುದ್ಧ ತಮ್ ಧ್ವನಿಯೆತ್ತಲಿದ್ದಾರೆ.
“ಇತ್ತೀಚಿನ ಅಭ್ಯಾಸ ಪಂದ್ಯದ ವೇಳೆಯೂ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ತಂಡಕ್ಕೆ ಬೆಂಬಲ ಸೂಚಿಸಿದೆ. ಮುಂದಿನ ಸರಣಿಯಲ್ಲೂ ಬೆಂಬಲ ಸೂಚಿಸಲಿದೆ,” ಎಂಬುದಾಗಿ ಆಸ್ಟ್ರೇಲಿಯಾ ತಂಡ ವಕ್ತಾರ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಮೈಕೆಲ್ ಹೋಲ್ಡಿಂಗ್ ಅವರು ಆಸ್ಟ್ರೇಲಿಯಾ ತಂಡದ ನೀತಿಗೆ ಬೆಂಬಲ ಸೂಚಿಸಿದ್ದಾರೆ. ಇದೊಂದು ಅತ್ಯಂತ ಗೌರವದ ಕ್ಷಣ ಎಂದು ಹೇಳಿದ್ದಾರೆ.
ಇದನ್ನೂ ಓದಿ | T20 World Cup | ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ವಿಶ್ವ ಕಪ್‌ನ ಮೊದಲ ಹಂತದಿಂದಲೇ ಔಟ್