Site icon Vistara News

ICC Ranking | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗೆ ಐದು ಸ್ಥಾನಗಳ ಬಡ್ತಿ

renuka singh

ದುಬೈ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡದ ಪರ ಐದು ಪಂದ್ಯಗಳಲ್ಲಿ ೧೧ ವಿಕೆಟ್‌ಗಳನ್ನು ಕಬಳಿಸಿದ್ದ ವೇಗಿ ರೇಣುಕಾ ಸಿಂಗ್‌ಗೆ, ಮಂಗಳವಾರ ಬಿಡುಗಡೆಯಾದ ಐಸಿಸಿ ಟಿ೨೦ rank ಪಟ್ಟಿಯಲ್ಲಿ ಐದು ಸ್ಥಾನಗಳ ಬಡ್ತಿ ಲಭಿಸಿದೆ. ಅವರೀಗ ೧೩ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ದೀಪ್ತಿ ಶರ್ಮ 33 ಸ್ಥಾನ ಬಡ್ತಿಯೊಂದಿಗೆ ಆಲ್‌ರೌಂಡರ್‌ ವಿಭಾಗದಲ್ಲಿ ೩ನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಘೋಷ್‌ ನಾಲ್ಕು ಸ್ಥಾನ ಬಡ್ತಿ ಪಡೆದುಕೊಂಡಿದ್ದು, ೭೫ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ರೇಣುಕಾ ಸಿಂಗ್‌ ಭಾರತ ಮಹಿಳೆಯರ ತಂಡದಲ್ಲಿ ವೇಗದ ಬೌಲಿಂಗ್‌ ಮೂಲಕ ಮಿಂಚುತ್ತಿದ್ದು, ಮಾರಕ ಸ್ವಿಂಗ್‌ ಮೂಲಕ ಹೊಸ ಚೆಂಡಿನಲ್ಲಿ ಪ್ರಭಾವ ಬೀರುತ್ತಿದ್ದಾರೆ. ತಮ್ಮ ಪ್ರಖರ ದಾಳಿಯ ಮೂಲಕ ಅವರು ಭಾರತ ತಂಡಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ rank ಪಟ್ಟಿಯಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ.

ಸ್ಮೃತಿ ಮಂಧಾನಾ ನಾಲ್ಕನೇ ಸ್ಥಾನದಲ್ಲಿದ್ದು, ಸ್ಫೋಟಕ ಬ್ಯಾಟರ್ ಶಫಾಲಿ ವರ್ಮ ಆರನೇ rank ತಮ್ಮದಾಗಿಸಿಕೊಂಡಿದ್ದಾರೆ. ಜೆಮಿಮಾ ರೋಡ್ರಿಗಸ್‌ ೧೦ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ದೀಪ್ತಿ ಶರ್ಮ ಏಳನೇ ಸ್ಥಾನ ಪಡೆದುಕೊಂಡಿದ್ದು, ಆಲ್‌ರೌಂಡ್‌ ವಿಭಾಗದಲ್ಲಿ ಅವರು ೩ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ | Smriti Mandhaona | ದೇಶಕ್ಕಾಗಿ ಆಡುವೆ, ಲೀಗ್‌ ಸದ್ಯಕ್ಕೆ ಬೇಡ ಎಂದ ಭಾರತದ ಮಹಿಳಾ ಕ್ರಿಕೆಟರ್‌

Exit mobile version