ಕೇಪ್ಟೌನ್: ಭಾರತ ಮಹಿಳೆಯರ ಕ್ರಿಕೆಟ್ ತಂಡ ಟಿ20 ವಿಶ್ವ ಕಪ್ನ (T20 World Cup) ಸೆಮಿಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆ ಎದುರಿಸಿದೆ. ಆಸ್ಟ್ರೇಲಿಯಾ ವಿರುದ್ಧ 6 ರನ್ಗಳ ಸೋಲಿ ಕಂಡು ನಿರಾಸೆಯೊಂದಿಗೆ ತವರಿಗೆ ಮರಳಿದೆ. ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಅವಕಾಶವಿದ್ದರೂ, ಆತ್ಮವಿಶ್ವಾಸದ ಕೊರತೆಯಿಂದ ಕೊನೇ ಹಂತದದಲ್ಲಿ ಪಂದ್ಯವನ್ನು ಕೈ ಚೆಲ್ಲಿದ್ದರು. ಅದರಲ್ಲೂ ನಾಯಕಿ ಹರ್ಮನ್ಪ್ರೀತ್ ಕೌರ್ ಸುಲಭವಾಗಿ ರನ್ಔಟ್ ಆಗಿ ತಂಡದ ಸೋಲಿಗೆ ಪ್ರಧಾನ ಕಾರಣ ಎಂದೆನಿಸಿಕೊಂಡಿದ್ದರು. ಈ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ನಾಯಕಿ ಹರ್ಮನ್ಪ್ರೀತ್, ತಾವು ರನ್ಔಟ್ ಆಗಿದ್ದು ದುರದೃಷ್ಟದಿಂದ ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ ಒಪ್ಪಿಲ್ಲ. ಅದು ದುರದೃಷ್ಟವೇನೂ ಅಲ್ಲ. ನಮ್ಮ ತಂಡದ ಆಟಗಾರರ ಶ್ರಮದ ಫಲ ಎಂದು ಹೇಳಿದ್ದಾರೆ.
ಹರ್ಮನ್ಪ್ರೀತ್ ಕೌರ್ ತಾವು ರನ್ಔಟ್ ಆಗಿರುವುದನ್ನು ದುರದೃಷ್ಟ ಎಂದು ಬಣ್ಣಿಸಿದ್ದೇ ತಪ್ಪು. ಆ ಒಂದು ವಿಕೆಟ್ ಪಡೆದ ಬಳಿಕ ಬೆಲಿಂಡಾ ಕ್ಲಾರ್ಕ್ ನಮ್ಮ ಪ್ರಯತ್ನವನ್ನು ಮೆಚ್ಚಿ ಮಾತನಾಡಿದ್ದಾರೆ. ಬ್ಯಾಟರ್ಗಳು ಹತ್ತಿರವಿರುವ ಸಂದರ್ಭದಲ್ಲಿ ಸಾಮಾನ್ಯವಾಗಿ ನಾನು ಬೇಲ್ಸ್ ಎಗರಿಸುವ ಯತ್ನ ಮಾಡುವುದಿಲ್ಲ. ಆದರೆ, ಅದು ಔಟ್ ಎಂಬುದೇ ಖಚಿತವಾಗಿತ್ತು ಎಂದು ವಿಕೆಟ್ ಕೀಪರ್ ಆಗಿರುವ ಅಲೀಸಾ ಹೀಲಿ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಹರ್ಮನ್ಪ್ರೀತ್ ಮಾಡಿದ್ದ ಸ್ವೀಪ್ಮಾಡಿದ್ದ ಚೆಂಡು ಬೌಂಡರಿ ಲೈನ್ ಕಡೆಗೆ ಹೋಗಿದ್ದರು. ಮೇಗನ್ ಶೂಟ್ ಅದನ್ನು ಅಲಿಸಾ ಕಡೆಗೆ ಎಸೆದಿದ್ದರು. ಎರಡನೇ ರನ್ಗೆ ಓಡಿದ್ದ ಹರ್ಮನ್ಪ್ರೀತ್ ಕೌರ್ ಕ್ರೀಸ್ ಕಡೆಗೆ ಬ್ಯಾಟ್ ಇಟ್ಟಿದ್ದರು. ಬ್ಯಾಟ್ ಜಾರದೇ ನೆಲಕ್ಕೆ ಕಚ್ಚಿಕೊಂಡಿತ್ತು. ಹೀಗಾಗಿ ಅವರು ರನ್ಔಟ್ ಆಗಿದ್ದರು.
ಇದನ್ನೂ ಓದಿ : T20 World Cup : ಪುಟಿದೇಳುವ ಭರವಸೆ ನೀಡಿದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್
ಅಲೀಸಾ ರನ್ಔಟ್ ಮಾಡಿದ್ದರು. ಈ ಕುರಿತು ಹೇಳಿಕೆ ಕೊಟ್ಟ ಅಲಿಸಾ. ಚೆಂಡನ್ನು ಮೇಗನ್ ಶೂಟ್ ಅತಿ ವೇಗದಲ್ಲಿ ವಾಪಸ್ ಮಾಡಿದ್ದಾರೆ. ಹೀಗಾಗಿ ರನ್ಔಟ್ ಮಾಡಲು ಸಾಧ್ಯವಾಯಿತು. ಅಲ್ಲದೆ, ಕಿರಿಯ ಕ್ರಿಕೆಟರ್ಗಳಿಗೆ ಇದೊಂದು ಪಾಠ ಕೂಡ. ಮೈದಾನಕ್ಕೆ ಇಳಿದು ಆಡುವಾಗ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಅವರು ಇದನ್ನು ನೋಡಿ ಕಲಿಯಬೇಕು ಎಂದು ಹೇಳಿದ್ದಾರೆ.