ನವ ದೆಹಲಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ (WPL 2023) ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಟಿ20 ವಿಶ್ವ ಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಆಯ್ಕೆಯಾಗಿದ್ದಾರೆ. ಇದೇ ವೇಳೆ ಜೆಮಿಮಾ ರೋಡ್ರಿಗಸ್ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮೆಗ್ಲ್ಯಾನಿಂಗ್ ಒಟ್ಟು ಐದು ವಿಶ್ವ ಕಪ್ಗಳನ್ನುಗೆದ್ದಿದ್ದಾರೆ. ಅದರಲ್ಲಿ ನಾಲ್ಕು ಟಿ20 ವಿಶ್ವ ಕಪ್ಗಳಾಗಿದ್ದು, ಒಂದು ಏಕ ದಿನ ವಿಶ್ವ ಕಪ್. ಮೂರು ಟಿ20 ವಿಶ್ವ ಕಪ್ಗಳನ್ನು ಸತತವಾಗಿ ಗೆದ್ದಿದ್ದರು. ಅದೇ ರೀತಿ ಅತ್ಯಂತ ಹೆಚ್ಚು ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಗೆಲುವುಗಳನ್ನು ಸಾಧಿಸಿದ ಆಟಗಾರ್ತಿ ಎಂಬ ದಾಖಲೆಯನ್ನೂ ಮಾಡಿದ್ದಾರೆ.
ಇದನ್ನೂ ಓದಿ : WPL 2023 : ಮಹಿಳೆಯರ ಪ್ರೀಮಿಯರ್ ಲೀಗ್ಗೆ ಜೆರ್ಸಿ ಅನಾವರಣ ಮಾಡಿದ ಆರ್ಸಿಬಿ
30 ವರ್ಷದ ಆಟಗಾರ್ತಿ ಆರು ಟೆಸ್ಟ್ ಪಂದ್ಯಗಳು, 103 ಏಕ ದಿನ ಪಂದ್ಯಗಳು ಹಾಗೂ 132 ಟಿ20 ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. 17 ಶತಕಗಳು ಸೇರಿದಂತೆ ಒಟ್ಟಾರೆ 8000 ರನ್ ಬಾರಿಸಿದ್ದಾರೆ. ಲ್ಯಾನಿಂಗ್ ಅವರನ್ನು ಫೆಬ್ರವರಿ 13ರಂದು ನಡೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಳಗ 1.10 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿತ್ತು.
ಮಹಿಳೆಯರ ಪ್ರೀಮಿಯರ್ ಲೀಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಬಳಗ
ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಮರಿಜಾನೆ ಕಾಪ್, ಮೆಗ್ ಲ್ಯಾನಿಂಗ್, ಆಲಿಸ್ ಕ್ಯಾಪ್ಸಿ, ಶಿಖಾ ಪಾಂಡೆ, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಮಿನ್ನು ಮಣಿ, ಪೂನಂ ಯಾದವ್, ಸ್ನೇಹಾ ದೀಪ್ತಿ, ತಾರಾ ಎನ್ ಸಾಧು, ತಾರಾ ಎನ್ ಸಾಧು, ಮತ್ತು ಅಪರ್ಣಾ ಮೊಂಡಲ್.