Site icon Vistara News

Team india | ಭಾರತ ತಂಡದಲ್ಲಿ ಪೃಥ್ವಿ, ಋತುರಾಜ್‌ ಇರಲೇಬೇಕು ಎಂದ ಐಪಿಎಲ್‌ನ ಚಾಂಪಿಯನ್ ಕೋಚ್‌

ನವ ದೆಹಲಿ : ಐಸಿಸಿ ಟಿ೨೦ ವಿಶ್ವ ಕಪ್‌ ಗೆಲ್ಲುವುದಕ್ಕೆ ಸಾಧ್ಯವಾಗದೇ ಹೋಗಿರುವ ಕಾರಣ ಭಾರತ ತಂಡದಲ್ಲಿ (Team India) ದೊಡ್ಡ ಮಟ್ಟದ ಬದಲಾವಣೆ ಉಂಟಾಗುವ ಸಾಧ್ಯತೆಗಳಿವೆ. ಹಿರಿಯ ಆಟಗಾರರನ್ನು ದೀರ್ಘ ಅವಧಿಯ ತಂಡಕ್ಕೆ ಸೀಮಿತಗೊಳಿಸಿ ಯುವ ಆಟಗಾರರಿಗೆ ಚುಟುಕು ಕ್ರಿಕೆಟ್‌ ತಂಡದಲ್ಲಿ ಭಾರತ ತಂಡದಲ್ಲಿ ಆದ್ಯತೆ ನೀಡುವುದು ಬಿಸಿಸಿಐ ಯೋಜನೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಕಳೆದ ಬಾರಿಯ ಐಪಿಎಲ್‌ ಚಾಂಪಿಯನ್‌ ತಂಡ ಗುಜರಾತ್‌ ಟೈಟನ್ಸ್‌ನ ಕೋಚ್‌ ಆಶೀಶ್‌ ನೆಹ್ರಾ ಅವರು ಯುವ ಬ್ಯಾಟರ್‌ಗಳಾದ ಪೃಥ್ವಿ ಶಾ ಹಾಗೂ ಋತುರಾಜ್‌ ಗಾಯಕ್ವಾಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

೨೦೨೪ರ ವಿಶ್ವ ಕಪ್‌ಗೆ ಮೊದಲು ಭಾರತ ಟಿ೨೦ ತಂಡ ಸಂಪೂರ್ಣವಾಗಿ ಬದಲಾಗಬಹುದು. ಅದಕ್ಕಾಗಿ ಯುವ ಆಟಗಾರರ ಹುಡುಕಾಟದಲ್ಲಿದೆ ಬಿಸಿಸಿಐ. ಅನುಭವಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ. ಶುಬ್ಮನ್‌ ಗಿಲ್‌ ತಂಡದಲ್ಲಿ ಸ್ಥಾನ ಪಡೆಯಬಹುದಾದ ಇನ್ನೊಬ್ಬ ಯುವ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಅವರೂ ಕೂಡ ತಂಡದ ಭವಿಷ್ಯ ಎಂದು ಹೇಳಿದ್ದಾರೆ ಆಶಿಶ್‌ ನೆಹ್ರಾ. ಜತೆಗೆ ದೊಡ್ಡ ದೊಡ್ಡ ಸ್ಕೋರ್‌ಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿರುವ ಗಾಯಕ್ವಾಡ್‌ ಹಾಗೂ ಪೃಥ್ವಿ ಇರಬೇಕು ಎಂದಿದ್ದಾರೆ.

“ಶುಬ್ಮನ್ ಗಿಲ್ ನಿಮಗೆ 50-ಓವರ್‌ಗಳು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಶತಕಗಳನ್ನು ನೀಡಬಲ್ಲವರು. ಅವರು ಪರಿಸ್ಥಿತಿಗಳಿಗೆ ಅನುಗುಣವಾಗಿ ಆಡಬಲ್ಲವರು. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅದು ಸಾಬೀತಾಗಿದೆ. ಮಳೆಯ ಮೊದಲು ಹಾಗೂ ಮಳೆ ಬಂದ ಬಳಿಕ ಅವರು ವಿಭಿನ್ನ ರೀತಿಯಲ್ಲಿ ಆಡಿದ್ದಾರೆ. ಗಿಲ್‌ ಅವರಲ್ಲದೆ, ಪೃಥ್ವಿ ಶಾ, ಋತುರಾಜ್ ಗಾಯಕ್ವಾಡ್ ಕೂಡ ತಂಡದಲ್ಲಿ ಸ್ಥಾನ ಪಡೆಯಬೇಕಾಗಿದೆ ಎಂಬುದಾಗಿ,” ಎಡಗೈ ವೇಗದ ಬೌಲರ್‌ ಆಶಿಶ್‌ ನೆಹ್ರಾ ಹೇಳಿದ್ದಾರೆ.

ಇದನ್ನೂ ಓದಿ | IND vs NZ | ಪಾಕಿಸ್ತಾನ ನಾಯಕ ಬಾಬರ್‌ ಅಜಮ್‌ ದಾಖಲೆಯನ್ನು ಪುಡಿಗಟ್ಟಿದ ಸೂರ್ಯಕುಮಾರ್‌ ಯಾದವ್‌

Exit mobile version