ಅಹಮದಾಬಾದ್: ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಗಳಿಸಿರುವ 480 ರನ್ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡಲು ಆರಂಭಿಸಿರುವ ಭಾರತ ತಂಡ ಎರಡನೇ ದಿನದಾಟದ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 38 ರನ್ ಬಾರಿಸಿದೆ. ರೋಹಿತ್ ಶರ್ಮಾ 17 ಹಾಗೂ ಶುಬ್ಮನ್ ಗಿಲ್ 18 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡ ಇನ್ನೂ 444 ರನ್ಗಳ ಹಿನ್ನಡೆಯಲ್ಲಿದ್ದು, ಮೂರು ದಿನಗಳ ಆಟ ಬಾಕಿಯಿದೆ.
ಅದಕ್ಕಿಂತ ಮೊದಲ ಇನಿಂಗ್ಸ್ನಲ್ಲಿ 167. 2 ಓವರ್ಗಳನ್ನು ಎದುರಿಸಿದ ಅಸ್ಟ್ರೇಲಿಯಾ ತಂಡ 480 ರನ್ಗಳಿಗೆ ಆಲ್ಔಟ್ ಆಯಿತು. ಆಸ್ಟ್ರೇಲಿಯಾ ತಂಡದ ಬ್ಯಾಟರ್ಗಳಾದ ಉಸ್ಮಾನ್ ಖ್ವಾಜಾ (180) ಹಾಗೂ ಕ್ಯಾಮೆರಾನ್ ಗ್ರೀನ್ (114) ಶತಕಗಳನ್ನು ಬಾರಿಸಿ ಮಿಂಚಿದರು. ಈ ಜೋಡಿ ಐದನೇ ವಿಕೆಟ್ಗೆ 208 ರನ್ ಬಾರಿಸಿ 43 ವರ್ಷಗಳ ಬಳಿಕ ಭಾರತದಲ್ಲಿ ದ್ವಿಶತಕ ಜತೆಯಾಟ ಆಡಿದ ಆಸ್ಟ್ರೇಲಿಯಾದ ಬ್ಯಾಟರ್ಗಳೆಂಬ ಸಾಧನೆ ಮಾಡಿದರು. ಇದೇ ವೇಳೆ ಭಾರತ ತಂಡದ ಸ್ಪಿನ್ನರ್ ಆರ್. ಅಶ್ವಿನ್ 91 ರನ್ಗಳಿಗೆ 6 ವಿಕೆಟ್ ಉರುಳಿಸಿದರು.
ಇದನ್ನೂ ಓದಿ : INDvsAUS : ಪ್ಯಾಟ್ ಕಮಿನ್ಸ್ ತಾಯಿ ನಿಧನ, ಕಪ್ಪು ಪಟ್ಟಿ ಧರಿಸಿ ಕ್ರೀಡಾಂಗಣಕ್ಕೆ ಇಳಿದ ಆಸ್ಟ್ರೇಲಿಯಾ ತಂಡ
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಮೂರು ಪಂದ್ಯಗಳು ಸ್ಪಿನ್ ಪಿಚ್ನಲ್ಲಿ ನಡೆದಿತ್ತು ಹಾಗೂ ಕೇವಲ ಎರಡೂವರೆ ದಿನಗಳಲ್ಲಿ ಫಲಿತಾಂಶ ಪ್ರಕಟಗೊಂಡಿತ್ತು. ಆದರೆ, ನಾಲ್ಕನೇ ಪಂದ್ಯದ ಮೊದಲೆರಡು ದಿನ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್ಗೆ ನೆರವು ನೀಡಿತು.