ಭುವನೇಶ್ವರ್: ಒಡಿಶಾದ ಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್ (26) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಟಕ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅವರ ಸಾವಿಗೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಜನವರಿ 10ರಂದು ಒಡಿಶಾ ಮಹಿಳೆಯರ ಕ್ರಿಕೆಟ್ ತಂಡದ ಪಟ್ಟಿ ಪ್ರಕಟಗೊಂಡಿತ್ತು. ಅದರಲ್ಲಿ 26 ವರ್ಷದ ಅವಕಾಶ ಪಡೆದಿರಲಿಲ್ಲ. ಮರುದಿನದಿಂದ ಅವರು ನಾಪತ್ತೆಯಾಗಿದ್ದರು. ಕ್ರಿಕೆಟ್ ಅಭ್ಯಾಸದಲ್ಲೂ ಪಾಲ್ಗೊಂಡಿರಲಿಲ್ಲ. ಈ ಬಗ್ಗೆ ಮಂಗಳಾಬಾಗ್ ಪೊಲೀಸ್ ಸ್ಟೇಷನ್ನಲ್ಲಿ ದೂರು ನಾಪತ್ತೆ ದೂರು ದಾಖಲಾಗಿತ್ತು.
ಅಥಗಡ ಪ್ರದೇಶದ ಗುರುದಿಜಹಾಟಿಯಾ ಪ್ರದೇಶದ ಅರಣ್ಯದಲ್ಲಿ ಜನವರಿ 13ರಂದು ರಾಜಶ್ರೀ ಅವರ ಮೃತದೇಹ ಪತ್ತೆಯಾಗಿದೆ. ಅವರ ದೇಹಕ್ಕೆ ಮರವೊಂದಕ್ಕೆ ನೇತುಬಿದ್ದ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಟಕ್ ಪೊಲೀಸರು ಅನೈಸರ್ಗಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜೇಶ್ವರಿ ಅವರ ಫೋನ್ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅವರನ್ನು ಕೊಲೆ ಮಾಡಲಾಗಿದೆ ಎಂಬುದಾಗಿ ಕುಟುಂಬದ ಸದಸ್ಯರು ದೂರಿದ್ದಾರೆ. ಪೊಲೀಸರು ಆ ದಿಕ್ಕಿನಲ್ಲೂ ತನಿಖೆ ಆರಂಭಿಸಿದ್ದಾರೆ. ರಾಜೇಶ್ವರಿ ಅವರು ಒಡಿಶಾ ಕ್ರಿಕೆಟ್ ಸಂಸ್ಥೆಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದರು. 23 ಇತರರ ಕ್ರಿಕೆಟ್ ಅಟಗಾರ್ತಿಯರ ಜತೆ ಅವರು ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದಲೇ ಅವರು ನಾಪತ್ತೆಯಾಗಿದ್ದಾರೆ.ತಂದೆಯನ್ನು ನೋಡಲು ಪುರಿಗೆ ಹೋಗುವುದಾಗಿ ಅವರು ಕೆಲವರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ರಾಜೇಶ್ವರಿ ಅವರ ಸಾವಿನ ಹಿನ್ನೆಲೆ ಹುಡುಕುತ್ತಿದ್ದೇವೆ. ಅವರು ಜನವರಿ 11ರಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರ ಜತೆಗಿದ್ದ ಕ್ರಿಕೆಟರ್ಗಳು ಹಾಗೂ ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Cricketer Death | ಹಿಮಾಚಲ ಪ್ರದೇಶದ ಯುವ ಕ್ರಿಕೆಟಿಗ ಗುಜರಾತ್ನ ಆಸ್ಪತ್ರೆಯಲ್ಲಿ ನಿಧನ