ತಿರುವನಂತಪುರ : ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಬುಧವಾರ ಟಿ೨೦ ಸರಣಿಯ ಮೊದಲ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಅಲ್ಲಿನ ಕ್ರಿಕೆಟ್ ಪ್ರೇಮಿಗಳ ನಡುವಿನ ಸಮರ ಶುರುವಾಗಿದೆ. ಅಲ್ಲಿ ಸಮರ ಸಾರಿದವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಅಭಿಮಾನಿಗಳು. ಇದರ ಜತೆಗೆ ಸ್ಥಳೀಯ ಪ್ರತಿಭೆ ಸಂಜು ಸ್ಯಾಮ್ಸನ್ ಕೂಡ ಅಭಿಮಾನಿಗಳು ಕೂಡ ಸೇರಿಕೊಂಡಿದ್ದಾರೆ.
ಸೋಮವಾರ ಭಾರತ ತಂಡ ತಿರುವನಂತಪುರಕ್ಕೆ ತಲುಪಿದಾಗ ಅಲ್ಲಿ ಸಂಜು ಸ್ಯಾಮ್ಸನ್ ಅಭಿಮಾನಿಗಳು ಟೀಮ್ ಇಂಡಿಯಾದ ಬಸ್ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಮರು ದಿನ ಅಲ್ಲಿನ ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ಆರಾಧ್ಯ ದೈವದ ವಿರಾಟ್ ಕೊಹ್ಲಿಯ ದೊಡ್ಡ ಕಟೌಟ್ ಹಾಕಿದ್ದರು. ಮರು ದಿನವೇ ಅಲ್ಲಿನ ರೋಹಿತ್ ಶರ್ಮ ಅಭಿಮಾನಿಗಳು ರೋಹಿತ್ ಅವರ ಕಟೌಟ್ ಕೂಡ ಹಾಕಿದ್ದಾರೆ. ಇದರ ಜತೆಗೆ ಸಂಜು ಸ್ಯಾಮ್ಸನ್ ಅವರ ಕಟೌಟ್ ಕೂಡ ರಾರಾಜಿಸುತ್ತಿದೆ.
ಸಂಜು ಸ್ಯಾಮ್ಸನ್ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಕೊಡುತ್ತಿಲ್ಲ ಎಂಬುದಾಗಿ ಅಲ್ಲಿ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಮಟ್ಟದ ಅಭಿಯಾನ ಆರಂಭಿಸಿದ್ದಾರೆ. ರಿಷಭ್ ಪಂತ್‌ಗಿಂತ ಹೆಚ್ಚು ಟಿ೨೦ ಸ್ಟ್ರೈಕ್ ರೇಟ್ ಹೊಂದಿದ್ದರೂ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಆರೋಪಿಸಲಾಗುತ್ತಿದೆ. ಕೇರಳದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಇದ್ದಷ್ಟೇ ಅಭಿಮಾನಿಗಳು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರಿಗೂ ಅಷ್ಟೇ ಅಭಿಮಾನಿಗಳು ಇದ್ದಾರೆ.
ಇನ್ನೂ ಇದೆ | IND vs SA | ಗ್ರೀನ್‌ಫೀಲ್ಡ್ ಸ್ಟೇಡಿಯಮ್ ಪಕ್ಕದಲ್ಲಿ ಕೊಹ್ಲಿಯ ಬೃಹತ್ ಕಟೌಟ್ ನೆಟ್ಟವರು ಯಾರು?