Site icon Vistara News

IND vs PAK | ಭಾರತ ತಂಡದ ಗೆಲುವಿಗೆ ಕುಹಕವಾಡಿದ ಪಾಕ್‌ ಪತ್ರಕರ್ತನ ಚಳಿ ಬಿಡಿಸಿದ ಅಭಿಮಾನಿಗಳು

team india

ದುಬೈ : ಏಷ್ಯಾ ಕಪ್‌ನ ಗುಂಪು ಹಂತದ ಹಣಾಹಣಿಯಲ್ಲಿ ಪಾಕಿಸ್ತಾನ (IND vs PAK) ತಂಡವನ್ನು ೫ ವಿಕೆಟ್‌ಗಳಿಂದ ಮಣಿಸಿದ ಭಾರತ ಕ್ರಿಕೆಟ್‌ ತಂಡದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಕಳೆದ ವರ್ಷದ ವಿಶ್ವ ಕಪ್‌ ಸೋಲಿಗೆ ಪ್ರತಿಕಾರ ಎಂಬುದಾಗಿ ಬಣ್ಣಿಸಲಾಗುತ್ತಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಭಾರತದ ಭಾರತ ತಂಡದ ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಅರ್ಹ ಗೆಲುವು ಲಭಿಸಿದೆ. ಅದರೆ, ಪಾಕಿಸ್ತಾನದ ಪತ್ರಕರ್ತರೊಬ್ಬರು ಭಾರತಕ್ಕೆ ಅದೃಷ್ಟದ ಗೆಲವು ಎಂದು ಟ್ವೀಟ್‌ ಮಾಡಿದ್ದಾರೆ. ಅದಕ್ಕೆ ಕೆರಳಿದ ಭಾರತದ ಅಭಿಮಾನಿಗಳು ಅವರಿಗೆ ಕಠು ಮಾತಿನ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಭಾರತ ತಂಡ ಮೊದಲು ಫೀಲ್ಡಿಂಗ್‌ ಮಾಡಿ ಪಾಕ್‌ ತಂಡವನ್ನು ೧೪೭ ರನ್‌ಗಳಿಗೆ ನಿಯಂತ್ರಣ ಮಾಡಿತ್ತು. ಭುವನೇಶ್ವರ್‌ ಕುಮಾರ್‌ ೪ ವಿಕೆಟ್‌ ಕಬಳಿಸಿದ್ದರೆ, ಹಾರ್ದಿಕ್‌ ಪಾಂಡ್ಯ ೩ ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು. ಬ್ಯಾಟಿಂಗ್‌ನಲ್ಲೂ ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ತಲಾ ೩೫ ರನ್‌ ಬಾರಿಸಿದ್ದರೆ ಹಾರ್ದಿಕ್ ಪಾಂಡ್ಯ ೧೭ ಎಸೆತಗಳಿಗೆ ೩೩ ರನ್‌ ಕಲೆ ಹಾಕಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಅರ್ಹ ಜಯವೇ ಸರಿ. ಅದರೆ, ಪಾಕಿಸ್ತಾನ ಪತ್ರಕರ್ತನ ಪ್ರಕಾರ ಅದೃಷ್ಟ.

“ಭಾರತ ತಂಡದ ಪರ ಅದೃಷ್ಟವೇ ಚೆನ್ನಾಗಿ ಆಡಿತು. ಯಾಕೆಂದರೆ ಅದೃಷ್ಟ ಅವರ ಪರವಾಗಿ ಇರದಿರುತ್ತಿದ್ದರೆ ಭಾರತ ತಂಡ ಯಾವ ಕಾರಣಕ್ಕೂ ಗೆಲುವು ಸಾಧಿಸುತ್ತಿರಲಿಲ್ಲ. ಒಟ್ಟಿನಲ್ಲಿ ಪಾಕಿಸ್ತಾನ ಪ್ರದರ್ಶನವೇ ಅತ್ಯುತ್ತಮವಾಗಿತ್ತು,” ಎಂದು ಅರ್ಫಾ ಫಿರೋಝ್‌ ಜಾಕ್ ಎಂಬ ಪತ್ರಕರ್ತ ಬರೆದುಕೊಂಡಿದ್ದ. ಈ ಹೇಳಿಕೆಗೆ ಭಾರತದ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.

ಶೌರ್ಯ ಎಂಬುವರು ಟ್ವೀಟ್‌ ಮಾಡಿ, ಅದೃಷ್ಟ ಎಂದು ಕಿರಿಚಾಡುವುದನ್ನು ಬಿಡು. ಭಾರತ ಟಿ೨೦ ಮಾದರಿಯಲ್ಲಿ ನಂಬರ್‌ ಒನ್‌ ತಂಡ. ಭುವನೇಶ್ವರ್‌ ಕುಮಾರ್‌ ಅವರನ್ನೇ ಎದುರಿಸಲು ಸಾಧ್ಯವಾಗದ ತಂಡ” ಎಂದು ಟ್ವೀಟ್‌ ಮಾಡಿದ್ದಾರೆ.

ಶೋಯೆಬ್‌ ನಜೀಬ್‌ ಖಾನ್‌ ಎಂಬುವರು ಪ್ರತಿಕ್ರಿಯಿಸಿ. ನೀನು ಮೊದಲು ಕ್ರೀಡಾ ಪತ್ರಕರ್ತನ ವೃತ್ತಿಯನ್ನು ತ್ಯಜಿಸು. ಯಾವುದಾದರೂ ಸಿನಿಮಾಕ್ಕೆ ಸಂಭಾಷಣೆ ಬರೆಯುವ ಕೆಲಸ ಆಯ್ಕೆ ಮಾಡಿಕೊ ಎಂದು ಟ್ವೀಟ್‌ ಪ್ರತಿಕ್ರಿಯೆ ನೀಡಿದ್ದಾರೆ.

ಜಮೀಲ್ ಖಾನ್‌ ಎಂಬುವರು ಪ್ರತಿಕ್ರಿಯೆ ನೀಡಿ “ಖಂಡಿತಾ ಇಲ್ಲ. ನಿನಗೆ ಕ್ರಿಕೆಟ್‌ ಗೊತ್ತಿಲ್ಲ. ಭಾರತ ತಂಡದ ಅಟಗಾರರು ಉತ್ತಮ ಜತೆಯಾಟವಾಡಿ ಗೆದ್ದರು,” ಎಂದು ಬರೆದಿದ್ದಾರೆ.

ಖುಷಿ ಎಂಬುವರು “ಟಿ೨೦ ಮಾದರಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ೧೦ ಬಾರಿ ಮುಖಾಮುಖಿಯಾಗಿದ್ದು, ೮ ಗೆಲವು ಭಾರತಕ್ಕೆ ಲಭಿಸಿದೆ. ಈಗಲೂ ನೀನು ಹೇಳುತ್ತಿದ್ದೀಯಾ, ಭಾರತ ಗೆಲ್ಲುತ್ತಿರಲಿಲ್ಲ ಎಂದು. ಅದ್ಹೇಗೆ ಸಾಧ್ಯ,” ಎಂದು ತಿರುಗೇಟು ಕೊಟ್ಟಿದ್ದಾರೆ.

ಅಂಶುಮ್‌ ಮುಕುಂದ್‌ ಎಂಬುವರು ಟ್ವೀಟ್‌ ಮಾಡಿ “ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳುವುದು ಉತ್ತಮ. ಮುಂದಿನ ಬಾರಿಗೆ ಶುಭ ಹಾರೈಕೆಗಳು. ಗೆದ್ದ ತಂಡಕ್ಕೆ ಶುಭಾಶಯ ಹೇಳುವುದನ್ನು ಮರೆಯಬೇಡ,” ಎಂದು ಬರೆದುಕೊಂಡಿದ್ದಾರೆ.

Exit mobile version