Site icon Vistara News

IND vs PAK | ಗೆಲುವಿಗಾಗಿ ಜತೆಯಾಗಿದ್ದಾರೆ ಕೊಹ್ಲಿ- ರೋಹಿತ್‌ ಎಂದು ಸಂಭ್ರಮಿಸಿದ ಅಭಿಮಾನಿಗಳು

ind vs pak

ಮುಂಬಯಿ : ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್‌ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ (IND vs PAK) ತಂಡವನ್ನು ಸೋಲಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಖುಷಿಯ ವಿಷಯವಾಗಿತ್ತು. ಆದರೆ, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಅಭಿಮಾನಿಗಳಿಗೆ ಆ ಗೆಲುವಿನ ಜತೆಗೆ ಇನ್ನೇನೋ ಖುಷಿಯಿದೆ. ಅದನ್ನವರು ಸೋಶಿಯಲ್‌ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ.

ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಔಟಾಗಿ ಬಂದ ರೋಹಿತ್‌ ಶರ್ಮ ಹಾಗೂ ವಿರಾಟ್‌ ಕೊಹ್ಲಿ ಪೆವಿಲಿಯನ್‌ನಲ್ಲಿ ನಿಂತು ಸತತವಾಗಿ ಚರ್ಚೆ ನಡೆಸುತ್ತಿದ್ದರು. ಅದು ಆಟದ ಕುರಿತ ಚರ್ಚೆಯಂತಿತ್ತು. ಇದನ್ನು ನೋಡಿದ ಇಬ್ಬರು ಖ್ಯಾತ ಆಟಗಾರರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಯಾಕೆಂದರೆ ಕೊಹ್ಲಿ ಮತ್ತು ರೋಹಿತ್‌ ನಡುವೆ ಮನಸ್ತಾಪವಿದೆ ಎಂಬುದು ಇತ್ತೀಚಿನ ಕೆಲವು ವರ್ಷಗಳಿಂದ ಹರಿದಾಡುತ್ತಿರುವ ಮಾಹಿತಿ. ಅದಕ್ಕೆ ತಕ್ಕಂತೆ ಅಭಿಮಾನಿಗಳೂ ಸೋಶಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಕಚ್ಚಾಡುತ್ತಿದ್ದರು. ಹೀಗಾಗಿ ಕೊಹ್ಲಿ ಮತ್ತು ರೋಹಿತ್‌ ಮಾತುಕತೆಯನ್ನು ನೋಡಿ ತಂಡಕ್ಕಾಗಿ ಒಂದಾಗಿದ್ದಾರೆ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರೋಹಿತ್‌ ಮತ್ತು ವಿರಾಟ್‌ ನಡುವೆ ಮನಸ್ತಾಪವಿದೆ ಎಂಬ ಸುದ್ದಿಗೆ ಪೂರಕವಾಗಿ ಕೆಲವು ಘಟನೆಗಳೂ ನಡೆದಿತ್ತು. ಆದರೆ, ಕಳೆದ ವರ್ಷ ರೋಹಿತ್‌ ಶರ್ಮ ಫಾರ್ಮ್‌ ಕಳೆದುಕೊಂಡಿದ್ದ ಸಮಯದಲ್ಲಿ ವಿರಾಟ್‌ ಕೊಹ್ಲಿ ಅದನ್ನು ಸಮರ್ಥಿಸಿಕೊಂಡಿದ್ದರು. ಪ್ರಸ್ತುತ ಫಾರ್ಮ್‌ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಅವರಿಗೂ ರೋಹಿತ್ ಶರ್ಮ ಅವರ ಬೆಂಬಲ ಲಭಿಸುತ್ತಿದೆ. ಇದೀಗ ಅವರಿಬ್ಬರು ಜತೆಯಾಗಿ ನಿಂತು ಮಾತನಾಡುತ್ತಿರುವ ಚಿತ್ರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ತಂದಿದೆ.

ಇದನ್ನೂ ಓದಿ | IND vs PAK | 100ನೇ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿಗೆ ಶುಭಾಶಯಗಳ ಸುರಿಮಳೆ

Exit mobile version