ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) ಮೊದಲ ಪಂದ್ಯ ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ. ಈ ಹಿಂದೆ ಗುಜರಾತ್ ಜಯಂಟ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗುವುದು ಎಂದು ಹೇಳಲಾಗಿತ್ತು. ಇದೀಗ ಪಂದ್ಯವನ್ನು 8 ಗಂಟೆಗೆ ಆರಂಭಿಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮಗಳು ತಡವಾಗಬಹುದು ಎಂದು ಅಂದಾಜಿಸಿದ ಕಾರಣ ಪಂದ್ಯವನ್ನು ತಡವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಹೀಗಾಗಿ ಟಾಸ್ 7.30ಕ್ಕೆ ನಡೆಯಲಿದೆ.
ಡಬ್ಲ್ಯುಪಿಎಲ್ ಟ್ವೀಟ್ ಈ ರೀತಿ ಇದೆ
ಡಿವೈ ಪಾಟೀಲ್ ಸ್ಟೇಡಿಯಮ್ನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮೊದಲು ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಅದು 6 ಗಂಟೆ 25 ನಿಮಿಷಕ್ಕೆ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಸ್ಟೇಡಿಯಮ್ ಗೇಟ್ ಸಂಜೆ 4 ಗಂಟೆಗೆ ತೆರೆಯಲಿದೆ. ಈ ಮೂಲಕ ಪ್ರೇಕ್ಷಕರಿಗೆ ಸಂಜೆ ವೇಳೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ವೀಕ್ಷಣೆ ಸಾಧ್ಯ ಎಂದು ಮಹಿಳೆಯ ಪ್ರೀಮಿಯರ್ ಲೀಗ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ : WPL 2023 Schedule: ಡಬ್ಲ್ಯುಪಿಎಲ್ ಟೂರ್ನಿಯ ವೇಳಾಪಟ್ಟಿ ಪ್ರಕಟ; ಆರ್ಸಿಬಿಗೆ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ
ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಕೃತಿ ಸನೋನ್ ಮತ್ತು ಕಿಯಾರಾ ಆಡ್ವಾಣಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಂಗೀತಗಾರ ಎಪಿ ಧಿಲ್ಲೋನ್ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.