ಬೆಂಗಳೂರು: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಪಿಚ್ಗಳ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿವೆ. ಪಿಚ್ಗಳು ವಿಪರೀತ ತಿರುವು ಪಡೆಯುತ್ತಿವೆ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆರೋಪ. ಆದರೆ, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಮೂರನೇ ಪಂದ್ಯದ ಸೋಲಿನ ಬಳಿಕವೂ ಇಂಥದ್ದೊಂದು ಪಿಚ್ನಲ್ಲಿ ಆಡುವುದೇ ನಮಗೆ ಇಷ್ಟ ಎಂದು ಹೇಳಿದ್ದರು. ಆದರೆ, ಟೀಮ್ ಇಂಡಿಯಾದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಅದನ್ನು ಒಪ್ಪುತ್ತಿಲ್ಲ. ಬ್ಯಾಟ್ ಮತ್ತು ಬೌಲಿಂಗ್ಗೆ ಪೂರಕವಾಗಿರು ಪಿಚ್ ತಯಾರಿಸಬೇಕು ಎಂದು ಹೇಳಿದ್ದಾರೆ.
ಇಂಡಿಯಾ ಟುಡೆ ಜತೆ ಮಾತನಾಡಿದ ಅವರು, ಇಂಥ ಪಿಚ್ಗಳನ್ನು ತಯಾರಿಸುವ ಮೊದಲು ಯೋಚನೆ ಮಾಡಬೇಕಾಗುತ್ತದೆ. 2012 ಹಾಗೂ 13ರಲ್ಲಿ ಇಂಥದ್ದ ಪಿಚ್ ತಯಾರಿಸಿ ಭಾರತ ತಂಡದ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಇದೀಗ ಮತ್ತದೇ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : INDvsAUS : ಅಪಾಯಕಾರಿಯಲ್ಲದ ಪಿಚ್ಗೆ 3 ಡಿಮೆರಿಟ್ ಅಂಕ ಕೊಟ್ಟಿದ್ದು ಯಾಕೆ? ಸುನೀಲ್ ಗವಾಸ್ಕರ್ ಪ್ರಶ್ನೆ
ಚೆಂಡು ಮತ್ತು ಬ್ಯಾಟ್ನ ನಡುವೆ ಸಮತೋಲನ ಹೊಂದಿರುವ ಪಿಚ್ ನಿರ್ಮಿಸಬೇಕು. ಪಂದ್ಯದ ಮೊದಲೆರಡು ದಿನ ಹೊಸ ಬೌಲರ್ಗಳಿಗೆ ಹೆಚ್ಚು ಅವಕಾಶ ಸಿಗಬೇಕು. ಬ್ಯಾಟರ್ಗಳಿಗೂ ದಿನವಿಡೀ ಆಡುವ ಅವಕಾಶ ದೊರೆಯಬೇಕು. ಮೂರು ಮತ್ತು ನಾಲ್ಕನೇ ದಿನ ಚೆಂಡು ತಿರುವು ಪಡೆಯಬೇಕು. ಅಹಮದಾಬಾದ್ನಲ್ಲಿ ಇದೇ ಪರಿಸ್ಥಿತಿ ಮುಂದುವರಿಯಬಾರದು ಎಂಬುದೇ ನನ್ನ ನಿರೀಕ್ಷೆ. ಒಂದು ವೇಳೆ ಅಹಮದಾಬಾದ್ನಲ್ಲೂ ಇದೇ ರೀತಿಯ ತಿರುವು ಪಡೆದರೆ ಭಾರತ ತಂಡ ಪಂದ್ಯದಲ್ಲಿ ಗೆಲುವು ಸಾಧಿಸಬಹುದು. ಆದರೆ ಪಿಚ್ಗೆ ಡಿಮೆರಿಟ್ ಅಂಕಗಳು ಸಿಗುವುದು ಖಾತರಿ ಎಂದು ಹೇಳಿದ್ದಾರೆ.