ಲಂಡನ್ : ಇಂಗ್ಲೆಂಡ್ ತಂಡ ಚಾಂಪಿಯನ್‌ಪಟ್ಟ ಅಲಂಕರಿಸುವುದರೊಂದಿಗೆ ೨೦೨೨ನೇ ಆವೃತ್ತಿಯ ಟಿ೨೦ ವಿಶ್ವ ಕಪ್ ಮುಕ್ತಾಯಗೊಂಡಿದೆ. ಈ ಟ್ರೋಫಿಯೊಂದಿಗೆ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡದ ವಿಶ್ವಾಸ ಆಕಾಶದೆತ್ತರಕ್ಕೇರಿದೆ. ೨೦೧೯ರಲ್ಲಿ ಟಿ೨೦ ವಿಶ್ವ ಕಪ್ ಗೆದ್ದಿರುವ ಇಂಗ್ಲೆಂಡ್ ತಂಡ ಮೂರು ವರ್ಷದೊಳಿಗೆ ಮತ್ತೊಂದು ಐಸಿಸಿ ಟ್ರೋಫಿ ಗೆದ್ದಿರುವುದರಿಂದ, ಬಿಳಿ ಚೆಂಡಿನ ಕ್ರಿಕೆಟ್‌ನ ಬಲಿಷ್ಠ ತಂಡ ಎನಿಸಿಕೊಂಡಿದೆ. ಇವೆಲ್ಲದರ ನಡುವೆ ಭಾರತದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕ ದಿನ ವಿಶ್ವ ಕಪ್‌ಗಾಗಿ ಎಲ್ಲ ತಂಡಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ.
ಭಾರತದಲ್ಲಿ ಈ ಟೂರ್ನಿ ನಡೆಯುವ ಕಾರಣ ಭಾರತ ತಂಡವೇ ಫೇವರಿಟ್ ಎಂದು ಹೇಳಲಾಗುತ್ತಿದೆ. ೧೧ ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಮುಂದಿನ ವರ್ಷವೂ ಭಾರತ ತಂಡ ವಿಶ್ವ ಕಪ್ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
“ಮುಂದಿನ ವರ್ಷವೂ ಇಂಗ್ಲೆಂಡ್ ತಂಡವೇ ಕಪ್ ಗೆಲ್ಲುತ್ತದೆ ಹಾಗೂ ಅದುವೇ ಫೇವರಿಟ್ ಎನಿಸಿಕೊಂಡಿದೆ. ಆದರೆ ಭಾರತದಲ್ಲಿ ಟೂರ್ನಿ ನಡೆಯುತ್ತದೆ ಎಂಬ ಕಾರಣಕ್ಕೆ ಆ ತಂಡವೇ ಫೇವರಿಟ್ ಎನ್ನುವುದು ಮೂರ್ಖತನ. ಗೆದ್ದೇ ಗೆಲ್ಲುತ್ತೇವೆ ಎಂಬ ಅಹಂಕಾರವನ್ನು ಬದಿಗಿಟ್ಟು ಭಾರತ ತಂಡ ಇಂಗ್ಲೆಂಡ್ ತಂಡವನ್ನು ನೋಡಿ ಕಲಿಯಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ ವ| Team India | ಟೀಮ್ ಇಂಡಿಯಾ ವಿಶ್ವದ ಅತ್ಯಂತ ಕಳಪೆ ಸೀಮಿತ ಓವರ್‌ಗಳ ತಂಡ ಎನ್ನುತ್ತಾರೆ ವಾನ್; ಕಾರಣ ಇಲ್ಲಿದೆ