ಮುಂಬಯಿ: ಯುವ ಬ್ಯಾಟರ್ ಶುಬ್ಮನ್ ಗಿಲ್ (Shubman Gill) ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಅವರು ಕೇವಲ 7 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಲಂಕಾ ಸ್ಪಿನ್ನರ್ ಮಹೀಶ್ ತೀಕ್ಷಣ ಅವರ ಎಸೆತದ ಮರ್ಮವರಿಯುವಲ್ಲಿ ಸೋತ ಅವರು ಎಲ್ಬಿಡಬ್ಲ್ಯು ಔಟ್ ಆಗಿ ಪೆವಿಲಿಯನ್ ದಾರಿ ಹಿಡಿದಿದ್ದರು. ಈ ಮೂಲಕ ಯವ ಆಟಗಾರನ ಶುಭಾರಂಭ ನಿರಾಸೆಯಿಂದ ಕೂಡಿತ್ತು.
ಈ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಶುಬ್ಮನ್ ಗಿಲ್ ಅವರನ್ನು ಭಾರತ ಟಿ20 ತಂಡದಲ್ಲಿ ಆಡಿಸಬೇಕಾಗಿಲ್ಲ. ಅವರು ಆ ಮಾದರಿಗೆ ಫಿಟ್ ಅಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಟಿ20 ಪಂದ್ಯಕ್ಕೆ ಮೊದಲು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ಶುಬ್ಮನ್ ಗಿಲ್ ಚುಟುಕು ಕ್ರಿಕೆಟ್ಗೆ ಸೂಕ್ತವಲ್ಲ. ಅವರು ದೀರ್ಘ ಅವಧಿಯಲ್ಲಿ ತಂಡದಲ್ಲಿ ಆಡುವುದಕ್ಕೆ ಫಿಟ್ ಆಗಿದ್ದಾರೆ. ಹೀಗಾಗಿ ಚುಟುಕು ಕ್ರಿಕೆಟ್ನಲ್ಲಿ ಆಡುವ ಮೂಲಕ ತಮ್ಮ ಆಟದ ಶೈಲಿಯನ್ನು ಕಳೆದುಕೊಳ್ಳಬಾರದು, ಎಂದು ಹೇಳಿದ್ದಾರೆ.
ಶುಬ್ಮನ್ ಗಿಲ್ ಟೆಸ್ಟ್ ಪಂದ್ಯಗಳಲ್ಲಿ ಆಡುವುದನ್ನು ನೋಡಿದ್ದೇನೆ. ಕಲಾತ್ಮಕವಾಗಿ ಆಡುತ್ತಾರೆ ಹಾಗೂ ಭವಿಷ್ಯದ ನಾಯಕರೂ ಹೌದು. ಏಕ ದಿನ ಮಾದರಿಯಲ್ಲೂ ಅವರು ತಮ್ಮ ಸಾಮರ್ಥ್ಯ ಸಾಬೀತು ಮಾಡಬಲ್ಲರು. ಹೀಗಾಗಿ ಚುಟಕು ಕ್ರಿಕೆಟ್ನಲ್ಲಿ ಆಡುವ ಮೂಲಕ ತಮ್ಮ ನೈಜ ಶೈಲಿಯನ್ನು ಕಳೆದಕೊಳ್ಳಬಾರದು ಎಂಬುದಾಗಿ ಅವರ ಹೇಳಿದ್ದಾರೆ.
ಇದನ್ನೂ ಓದಿ | INDvsSL | ಶಿವಂ ಮಾವಿ, ಶುಬ್ಮನ್ ಗಿಲ್ ಟಿ20 ಮಾದರಿಗೆ ಎಂಟ್ರಿ, ಅರ್ಶ್ದೀಪ್ ಸಿಂಗ್ ಅಲಭ್ಯ