Site icon Vistara News

Hardik Pandya | ಪಾಂಡ್ಯನಿಗೆ ಪರ್ಯಾಯ ಕಂಡುಕೊಳ್ಳದಿದ್ದರೆ ಟೀಮ್​ ಇಂಡಿಯಾಗೆ ಆಪತ್ತು ಎಂದ ಮಾಜಿ ಆಟಗಾರ

Gambhir

ಮುಂಬಯಿ : ಹಾರ್ದಿಕ್​ ಪಾಂಡ್ಯ (Hardik Pandya) ಅವರನ್ನು ಟೀಮ್​ ಇಂಡಿಯಾದ ಭವಿಷ್ಯದ ಕ್ಯಾಪ್ಟನ್​ ಎಂದೇ ಬಿಂಬಿಸಲಾಗುತ್ತಿದೆ. ಮಾತಿಗೆ ತಕ್ಕಂತೆ ಅವರು ನಾಯಕತ್ವದಲ್ಲಿ ಯಶಸ್ಸು ಕೂಡ ಸಾಧಿಸುತ್ತಿದ್ದಾರೆ. ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅವರ ನಾಯಕತ್ವದ ತಂತ್ರಗಳೆಲ್ಲವೂ ಕೆಲಸ ಮಾಡಿತ್ತು. ಈ ಬೆಳವಣಿಗೆಯಿಂದ ಕೋಚ್​ ರಾಹುಲ್​ ದ್ರಾವಿಡ್​ ಹಾಗೂ ಬಿಸಿಸಿಐ ಕೂಡ ಖುಷಿಯಲ್ಲಿದ್ದಾರೆ. ಆದರೆ, ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ಈ ಖುಷಿ ಕ್ಷಣಿಕ ಎಂಬುದಾಗಿ ಹೇಳಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​​ನ ಸಂದರ್ಶನದಲ್ಲಿ ಮಾತನಾಡಿದ ಅವರು, ಹಾರ್ದಿಕ್ ಪಾಂಡ್ಯ ಅವರು ವೇಗವಾಗಿ ಬೆಳೆದು ನಾಯಕತ್ವದ ಹೊಣೆ ಹೊತ್ತುಕೊಳ್ಳುತ್ತಾರೆ. ಆದರೆ, ಅವರಿಗೆ ಪರ್ಯಾಯ ಆಟಗಾರರೊಬ್ಬರನ್ನು ಹುಡುಕಿ ಕೊಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಮೂರು ಮಾದರಿಯಲ್ಲಿ ಆಡುವ ಆಟಗಾರರು ಟಿ20 ಮಾದರಿಯಿಂದ ವಿಶ್ರಾಂತಿ ಪಡೆಯಬೇಕಾಗಿದೆ. ಅಂತೆಯೇ ಏಕ ದಿನ ವಿಶ್ವ ಕಪ್ ಇರುವ ಕಾರಣ ಹಾರ್ದಿಕ್​ ಪಾಂಡ್ಯ ಆ ಮಾದರಿಯಿಂದ ಬ್ರೇಕ್​ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಕೋಚ್ ರಾಹುಲ್​ ದ್ರಾವಿಡ್​ ಹಾಗೂ ಬಿಸಿಸಿಐ ಪಾಂಡ್ಯಗೆ ಬ್ಯಾಕ್ಅಪ್ ಆಟಗಾರನನ್ನು ಹುಡುಕಬೇಕಾಗಿದೆ, ಎಂದು ಹೇಳಿದ್ದಾರೆ.

ಇದನ್ನೂ ಓದಿ | Rishabh Pant | ಪಂತ್​ ಜತೆ ನಾವಿದ್ದೇವೆ; ಶೀಘ್ರ ಗುಣಮುಖರಾಗಲಿ; ಹಾರ್ದಿಕ್​ ಪಾಂಡ್ಯ ಹಾರೈಕೆ

Exit mobile version