Site icon Vistara News

Team India | ಧೋನಿ ಇದ್ದಿದ್ದರೆ ಸ್ಪಿನ್ನರ್‌ಗಳ ಕತೆ ಬೇರೆಯೇ ಇರುತ್ತಿತ್ತು ಎಂದ ಮಾಜಿ ಸ್ಪಿನ್ನರ್‌

Team India

ನವ ದೆಹಲಿ : ಗುರುವಾರ ನಡೆದ ಜಿಂಬಾಬ್ವೆ ಹಾಗೂ ಭಾರತ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್‌ ಬೌಲರ್‌ ಕುಲ್ದೀಪ್ ಯಾದವ್‌ ವಿಕೆಟ್‌ ರಹಿತವಾಗಿ ಬೌಲಿಂಗ್‌ ಮುಗಿಸಿದ್ದರು. ೧೦ ಓವರ್‌ ಎಸೆದಿದ್ದ ಅವರು ೩೬ ರನ್‌ ನೀಡಿದ್ದರು. ಇದೇ ವೇಳೆ ಸ್ಪಿನ್ನರ್‌ ಅಕ್ಷರ್ ಪಟೇಲ್ ೭.೩ ಓವರ್‌ಗಳಲ್ಲಿ ೨೪ ರನ್ ವೆಚ್ಚದಲ್ಲಿ ೩ ವಿಕೆಟ್‌ ತಮ್ಮದಾಗಿಕೊಂಡಿದ್ದಾರೆ. ಹೀಗಾಗಿ ಅವರು ಬೌಲಿಂಗ್ ಪರಿಣಾಮಕಾರಿಯಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರೆ, ಭಾರತ ತಂಡದ ಮಾಜಿ ಸ್ಪಿನ್ನರ್‌ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಅವರ ಪ್ರಕಾರ ಧೋನಿ ತಂಡದಲ್ಲಿ ಇದ್ದಿದ್ದರೆ ಈ ರೀತ ಆಗುತ್ತಿರಲಿಲ್ಲವಂತೆ.

ಕುಲ್ದಿಪ್‌ ಯಾದವ್‌ ಅವರು ದೀರ್ಘಕಾಲದ ಬಳಿಕ ಭಾರತ ತಂಡಕ್ಕೆ ಮರಳಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಹೀಗಾಗಿ ಉತ್ತಮ ಪ್ರದರ್ಶನ ನೀಡಿ ಸ್ಥಾನ ಭದ್ರಪಡಿಸಿಕೊಳ್ಳುವ ಅನಿವಾರ್ಯತೆ ಅವರಿಗಿದೆ. ಅತ್ತ ದೀಪಕ್‌ ಚಾಹರ್‌ ಮರು ಪ್ರವೇಶದಲ್ಲಿಯೇ ಮೂರು ವಿಕೆಟ್‌ ತಮ್ಮದಾಗಿಸಿಕೊಂಡು ಹಿರಿಯ ಕ್ರಿಕೆಟಿಗರ ಅಭಿನಂದನೆಗೆ ಅರ್ಹರಾಗಿದ್ದಾರೆ. ಅದರೆ, ಕುಲ್ದೀಪ್‌ಗೆ ಆ ಭಾಗ್ಯ ಸಿಕ್ಕಿರಲಿಲ್ಲ.

ಧೋನಿ ಇರಬೇಕಿತ್ತು

ಮಹೇಂದ್ರ ಸಿಂಗ್‌ ಧೋನಿ ಅವರು ನಾಯಕರಾಗಿದ್ದ ಸಮಯದಲ್ಲಿ ಕುಲ್ದೀಪ್‌ ಯಾದವ್‌ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಅದಕ್ಕೆ ವಿಕೆಟ್‌ ಹಿಂಬದಿಯಲ್ಲಿ ಧೋನಿ ನೀಡುತ್ತಿದ್ದ ಸಲಹೆಗಳೇ ಕಾರಣ. ಆದರೆ, ಕುಲ್ದೀಪ್‌ಗೆ ಈಗ ವಿಕೆಟ್‌ ಹಿಂದಿನಿಂದ ಅಂಥ ಸಲಹೆಗಳು ದೊರಕುತ್ತಿಲ್ಲ. ಹೀಗಾಗಿ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಶಿವರಾಮಕೃಷ್ಣನ್‌ ಹೇಳಿದ್ದಾರೆ.

ಕುಲ್ದೀಪ್‌ ಅವರು ನಿಧಾನಗತಿಯಲ್ಲಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಬ್ಯಾಟರ್‌ಗಳು ಅವರ ಎಸೆತಗಳನ್ನು ಎದುರಿಸಲು ಬ್ಯಾಕ್‌ಫೂಟ್‌ ಬಳಸುತ್ತಾರೆ. ಧೋನಿ ಅದನ್ನು ಗಮನಿಸಿ ಕುಲ್ದಿಪ್‌ಗೆ ಸಲಹೆ ನೀಡುತ್ತಾರೆ. ಆಗ ಕುಲ್ದಿಪ್‌ ಸರಿಯಾದ ಜಾಗದಲ್ಲಿ ಚೆಂಡೆನ್ನು ಎಸೆದು ಎದುರಾಳಿ ಬ್ಯಾಟರ್‌ ಗೊಂದಲಕ್ಕೆ ಬೀಳುವಂತೆ ಮಾಡುತ್ತಾರೆ. ಈ ರೀತಿಯಾಗಿ ಅವರು ವಿಕೆಟ್ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ, ಕುಲ್ದಿಪ್‌ಗೆ ಈಗ ಆ ಅನುಕೂಲಗಳು ಇಲ್ಲ,” ಎಂದು ಹೇಳಿದ್ದಾರೆ.

ಯಜ್ವೇಂದ್ರ ಚಹಲ್‌ ಹಾಗೂ ಇನ್ನಿತರ ಸ್ಪಿನ್ನರ್‌ಗಳಿಗೂ ಧೋನಿ ನಾಯಕರಾಗಿದ್ದಾಗ ಹೆಚ್ಚು ನೆರವಾಗುತ್ತಿತ್ತು ಎಂದೂ ಹೇಳಿದ ಶಿವರಾಮಕೃಷ್ಣನ್‌, ಧೋನಿ ಉತ್ತಮ ವಿಕೆಟ್‌ಕೀಪರ್‌ ಆಗಿರುವ ಜತೆಗೆ ಬ್ಯಾಟರ್‌ಗಳ ನಡೆಯನ್ನು ಗಮನಿಸುವ ಅರ್ಹತೆಯೂ ಇತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | IND vs ZIM ODI | ದೀಪಕ್‌ ಚಾಹರ್‌ ಭರ್ಜರಿ ರೀ ಎಂಟ್ರಿ, 7 ಓವರ್‌ಗಳಲ್ಲಿ 3 ವಿಕೆಟ್‌ ಕಬಳಿಸಿದ ಮಧ್ಯಮ ವೇಗಿ

Exit mobile version