Site icon Vistara News

Asia Cup | ಟಾಸ್‌ ಸೋತ ಭಾರತ ತಂಡಕ್ಕೆ ಬ್ಯಾಟಿಂಗ್‌ ಮಾಡುವಂತೆ ಆಹ್ವಾನ ನೀಡಿದ ಹಾಂಕಾಂಗ್‌ ತಂಡ

asi cup

ದುಬೈ : ಹಾಂಕಾಂಗ್‌ ವಿರುದ್ಧದ ಏಷ್ಯಾ ಕಪ್‌ ಪಂದ್ಯದಲ್ಲಿ ಭಾರತ ತಂಡ ಟಾಸ್‌ ಸೋತಿದ್ದು, ಬ್ಯಾಟಿಂಗ್‌ಗೆ ಆಹ್ವಾನ ಪಡೆದುಕೊಂಡಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಎ ಗುಂಪಿನಲ್ಲಿರುವ ಭಾರತ ಹಾಗೂ ಹಾಂಕಾಂಗ್‌ ನಡುವೆ ಸೆಣಸಾಟ ನಡೆಯಲಿದೆ. ಭಾರತಕ್ಕೆ ಇದು ಗುಂಪು ಹಂತದ ಎರಡನೇ ಪಂದ್ಯವಾದರೆ, ಹಾಂಕಾಂಗ್‌ ತಂಡಕ್ಕೆ ಮೊದಲ ಪಂದ್ಯವಾಗಿದೆ.

ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ರಿಷಭ್ ಪಂತ್‌ ೧೧ರ ಬಳಗ ಸೇರಿಕೊಂಡಿದ್ದಾರೆ.

ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ೫ ವಿಕೆಟ್‌ಗಳಿಂದ ಜಯ ಸಾಧಿಸಿರುವ ಕಾರಣ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಹಾಂಕಾಂಗ್‌ ತಂಡ ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತು ಪ್ರವೇಶಿಸಿದೆ.

ತಂಡಗಳು

ಭಾರತ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌ , ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌ , ಭುವನೇಶ್ವರ್‌ ಕುಮಾರ್‌, ಅವೇಶ್‌ ಖಾನ್‌ , ಯಜ್ವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌.

ಹಾಂಕಾಂಗ್‌ : ಯಾಸಿಮ್‌ ಮುರ್ತಾಝ, ನಿಝಾಕತ್‌ ಖಾನ್‌ (ನಾಯಕ), ಬಾಬರ್‌ ಹಯಾತ್‌, ಕಿಂಚಿತ್‌ ಶಾ, ಏಜಾಝ್‌ ಖಾನ್‌, ಸ್ಕಾಟ್‌ ಮೆಕೇಶಿ, ಝೀಶಾನ್ ಅಲಿ, ಹರೂನ್‌ ಅರ್ಷದ್‌, ಎಹ್ಸಾನ್‌ ಖಾನ್‌, ಮೊಹಮ್ಮದ್‌ ಗಹ್ಜಾನ್ಫರ್‌, ಆಯುಶ್‌ ಶುಕ್ಲಾ.

Exit mobile version