ಮೀರ್‌ಪುರ್: ಪ್ರವಾಸಿ ಭಾರತ ತಂಡದ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯನ್ನು (INDvsBAN) ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿರುವ ಬಾಂಗ್ಲಾದೇಶ ಬಳಗ ಏಳು ವರ್ಷದ ಬಳಿಕ ಸರಣಿ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ತವರು ನೆಲದಲ್ಲಿ ತಮ್ಮ ತಂಡ ಬಲಿಷ್ಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.
೨೦೧೫ರಲ್ಲಿ ಪ್ರವಾಸ ಮಾಡಿದ್ದ ಭಾರತ ತಂಡ ಏಕ ದಿನ ಸರಣಿಯಲ್ಲಿ ಸೋಲು ಕಂಡಿತ್ತು. ಇದೀಗ ಸತತ ಎರಡನೇ ಬಾರಿ ಭಾರತ ತಂಡಕ್ಕೆ ತವರು ನೆಲದಲ್ಲಿ ಸರಣಿ ಸೋಲಿನ ರುಚಿಯನ್ನು ತೋರಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ ೫೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೨೭೧ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ತನ್ನ ಪಾಲಿನ ಓವರ್‌ಗಳು ಮುಕ್ತಾಯಗೊಂಡಾಗ ೯ ವಿಕೆಟ್ ಕಳೆದಕೊಂಡು ೨೬೬ ರನ್ ಬಾರಿಸಿ ಸೋಲಿಗೆ ಒಳಗಾಯಿತು.
ಭಾರತ ತಂಡದ ಪ್ರಮುಖ ಬ್ಯಾಟರ್‌ಗಳು ಈ ಪಂದ್ಯದಲ್ಲೂ ವೈಫಲ್ಯ ಎದುರಿಸಿದರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತದ ಗೆಲುವಿನ ಸವಾಲನ್ನೂ ಪಡೆದರೂ ಭಾರತಕ್ಕೆ ಜಯ ಲಭಿಸಲಿಲ್ಲ. ಅದಕ್ಕಿಂತ ಮೊದಲು ಭಾರತ ತಂಡ ಸ್ಲಾಗ್ ಓವರ್ ಬೌಲಿಂಗ್‌ನಲ್ಲಿ ಎಡವಿತು. ಮೊದಲ ಆರು ವಿಕೆಟ್‌ಗಳನ್ನು ೬೯ ರನ್‌ಗಳಿಗೆ ಕಬಳಿಸಿದರೂ ಆ ಬಳಿಕ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಲು ವಿಫಲಗೊಂಡು ಸೋಲೊಪ್ಪಿಕೊಂಡಿತು.
ಇದನ್ನೂ ಓದಿ | INDvsBAN | ಬಾಂಗ್ಲಾದೇಶ ವಿರುದ್ಧದ 2ನೇ ಪಂದ್ಯದಲ್ಲೂ ಭಾರತಕ್ಕೆ 5 ರನ್ ಸೋಲು; ಸರಣಿ ಕಳೆದುಕೊಂಡ ರೋಹಿತ್ ಪಡೆ