ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್(Border Gavaskar Trophy) ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಗುರುವಾರ(ಫೆ.9) ಆರಂಭವಾಗಲಿದೆ. ಆದರೆ ಈ ಪಂದ್ಯದ ಫಲಿತಾಂಶಕ್ಕಿಂತಲೂ ಒಂದು ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದುವೇ ನಾಗ್ಪುರ ಪಿಚ್(Nagpur Pitch).
ಹೌದು ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಮಧ್ಯೆ ಉಭಯ ತಂಡಗಳ ಮ್ಯಾನೆಜ್ಮೆಂಟ್ ಪಿಚ್ ಬದಲಾಯಿಸುವಂತೆ ವಿದರ್ಭ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯೂರೇಟರ್‌ಗೆ ತಿಳಿಸಿವೆ ಎಂದು ವರದಿಯಾಗಿದೆ. ಭಾರತ ತಂಡದ ಕೋಚ್ ದ್ರಾವಿಡ್ ಕೂಡ ಪಿಚ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ರೀಡಾಂಗಣದ ಸೆಂಟರ್ ಪಿಚ್‌ನಲ್ಲಿ ಭಾರತ ತಂಡ ಒಂದೆರಡು ದಿನ ಅಭ್ಯಾಸ ಮಾಡಿದೆ. ಇದೇ ಪಿಚ್‌ನಲ್ಲಿ 5 ದಿನ ಆಡುವುದು ಸೂಕ್ತವಲ್ಲ. ಏಕೆಂದರೆ ಅವಸರದಿಂದ ನಿರ್ಮಿಸಿದ ಈ ಪಿಚ್ ಹೇಗೆ ವರ್ತಿಸಲಿದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಇದರಿಂದ ಆಟಗಾರರಿಗೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಪಿಚ್ ಬದಲಿಸುವಂತೆ ದ್ರಾವಿಡ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ Border Gavaskar Trophy: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಇತಿಹಾಸ, ರೋಚಕ ಸಂಗತಿಗಳ ಮಾಹಿತಿ
ಸೋಮವಾರ ಈ ಪಿಚ್ ಮೇಲೆ ಹಸಿರು ಹೊದಿಕೆ ಇತ್ತು. ಕಂದು ಬಣ್ಣದ ಪ್ಯಾಚ್‌ಗಳಿದ್ದವು. ಪಂದ್ಯ ಆರಂಭವಾಗುವ ವೇಳೆ ಹುಲ್ಲು ಸಂಪೂರ್ಣ ಬೋಳಾಗುವ ಸಾಧ್ಯತೆ ಇದೆ. ಹೀಗಾಗಿ ಮೊದಲ ದಿನವೇ ಪಿಚ್ ಸ್ಪಿನ್ನಿಗೆ ನೆರವಾದರೆ ಅಚ್ಚರಿ ಇಲ್ಲ ಎನ್ನುತ್ತದೆ ಒಂದು ವರದಿ. ಒಟ್ಟಾರೆ ಈ ಪಿಚ್ ಸ್ಪಿನ್ ಸ್ನೇಹಿಯಾಗಿರುವುದೇ ಅಥವಾ ಸ್ಪರ್ಧಾತ್ಮಕವಾಗಿ ವರ್ತಿಸಲಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.