Site icon Vistara News

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ 3 ವರ್ಷ ಕಳೆದರೂ​ ಧೋನಿ ಸಾವಿರ ಕೋಟಿ ಒಡೆಯ

ms dhoni

ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ(ms dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಘೋಷಿಸಿ ಮೂರು ವರ್ಷ ಕಳೆದರೂ ಅವರ ಬ್ರಾಂಡ್​ ಮೌಲ್ಯ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಸದ್ಯ ಜಗತ್ತಿನ ಶ್ರೀಮಂತ ಕ್ರಿಕೆಟರ್​ಗಳಲ್ಲಿ ಧೋನಿಯು ಕೂಡ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ವಾಣಿಜ್ಯ ಸಂಸ್ಥೆಯೊಂದು ಧೋನಿಯ ಆಸ್ತಿ ಮೌಲ್ಯ ಮತ್ತು ವಿವಿಧ ಮೂಲಗಳಿಂದ ಅವರಿಗೆ ಬರುವ ಆದಾಯವನ್ನು ಅಂದಾಜಿಸಿದೆ. ಈ ವರದಿಯ ಪ್ರಕಾರ ಧೋನಿಯ ಒಟ್ಟು ಆಸ್ತಿ 1,040 ಕೋಟಿ ರೂ. ಎನ್ನಲಾಗಿದೆ.

ಸದ್ಯ ಐಪಿಎಲ್​ನಲ್ಲಿ ಮಾತ್ರ ಆಡುತ್ತಿರುವ ಧೋನಿ ಸಿಎಸ್​ಕೆಯಿಂದ ಪ್ರತಿವರ್ಷ 12 ಕೋಟಿ ವೇತನ ಪಡೆಯುತ್ತಿದ್ದಾರೆ. ಅಲ್ಲದೇ, 28ಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್​ಗಳಿಗೆ ಧೋನಿ ಬ್ರ್ಯಾಂಡ್ ಅಂಬಾಸಿಡರ್​ ಆಗಿದ್ದಾರೆ. ಈ ಬ್ರಾಂಡ್​ಗಳ ಒಂದು ದಿನ ಜಾಹೀರಾತು ಶೂಟಿಂಗ್​ಗಾಗಿ ಧೋನಿ 4ರಿಂದ6 ಕೋಟಿ ಸಂಭಾವನೆ ಪಡೆಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಧೋನಿ ಸಕ್ರಿಯವಾಗದಿದ್ದರೂ ಧೋನಿ ಕೋಟ್ಯಂತರ ರೂ. ಸಂಭಾವನೆ ಪಡೆಯುತ್ತಾರೆ. ಇನ್​​​ಸ್ಟಾಗ್ರಾಮ್​​ನಲ್ಲಿ 4 ಕೋಟಿಗೂ ಹೆಚ್ಚು ಮತ್ತು ಫೇಸ್​ಬುಕ್​ನಲ್ಲಿ 2.5 ಕೋಟಿಗೂ ಅಧಿಕ ಫಾಲೋವರ್ಸ್​ ಹೊಂದಿರುವ ಅವರು ಈ ಖಾತೆಗಳಿಂದ ಪ್ರತಿ ಕಮರ್ಷಿಯಲ್ ಪೋಸ್ಟ್​ಗೆ 1 ರಿಂದ 2 ಕೋಟಿ ರೂ. ಜೇಬಿಗಿಳಿಸುತ್ತಾರೆ. ಇದಲ್ಲದೆ ಸ್ಪೋರ್ಟ್ಸ್ ಮತ್ತು ರಿಯಲ್ ಎಸ್ಟೇಟ್​ ಕಂಪನಿಗಳಲ್ಲಿಯೂ ಧೋನಿ ನೂರಾರು ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಸಿನಿಮಾ ಪ್ರೊಡಕ್ಷನ್ ಹೌಸ್​ ಕೂಡ ​ಆರಂಭಿಸಿದ್ದಾರೆ. ಮೊದಲ ನಿರ್ಮಾಣ ಚಿತ್ರ ಲೆಟ್ಸ್ ಗೆಟ್ ಮ್ಯಾರಿಡ್ (ಎಲ್​ಜಿಎಂ)ನ ಆಡಿಯೋ ಮತ್ತು ಟ್ರೈಲರ್ ಬುಧವಾರ ಚೆನ್ನೈಯಲ್ಲಿ ನಡೆದಿದೆ. ಧೋನಿ ಬಳಿ ಆಡಿ, ಹಮ್ಮರ್, ಲ್ಯಾಂಡ್ ರೋವರ್, ಫೆರಾರಿ ಸೇರಿದಂತೆ ಹಲವು ಐಷಾರಾಮಿ ಕಾರ್​ಗಳಿವೆ. ಇದರ ಜತೆಗೆ​ ವಿವಿಧ ಇಂಪೋರ್ಟೆಡ್​ ಬೈಕ್​ಗಳು ಕೂಡ ಅವರ ಬಳಿ ಇದೆ.

ಇದನ್ನೂ ಓದಿ MS Dhoni: ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ

ಅಭಿಮಾನಿಗಳಿಗೆ ಉಡುಗೊರೆಯಾಗಿ ಐಪಿಎಲ್​ನ ಮತ್ತೊಂದು ಋತುವಿನಲ್ಲಿ ಆಡಲು ಬಯಸುತ್ತೇನೆ ಎಂದು ಧೋನಿ ಈ ಹಿಂದೆ ಹೇಳಿದ್ದರು. ಆದಾಗ್ಯೂ, ಎಲ್ಲವೂ ಅವರ ಮೊಣಕಾಲು ಚೇತರಿಕೆಯ ಮೇಲೆ ಅವಲಂಬಿತವಾಗಿರುತ್ತದೆ.

‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಟ್ರೈಲರ್‌ ಬಿಡುಗಡೆ ಮಾಡಿದ ಧೋನಿ

ಎಂ. ಎಸ್.ಧೋನಿ (MS Dhoni) ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ತಮ್ಮದೇ ಧೋನಿ ಎಂಟರ್‌ಟೈನ್‌ಮೆಂಟ್‌ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ಲೆಟ್ಸ್ ಗೆಟ್ ಮ್ಯಾರೀಡ್ ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್‌ ಹಾಗೂ ಆಡಿಯೊ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನೆರವೇರಿದೆ. ಕ್ಯಾಪ್ಟನ್ ಕೂಲ್ ತಮ್ಮದೇ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಟ್ರೈಲರ್‌ ಅನಾವರಣ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡರು.

ಎಂ.ಎಸ್.ಧೋನಿ ಮಾತನಾಡಿ, ʻʻನಾನು ಈ ಸಿನಿಮಾವನ್ನು ನೋಡಿದ್ದೇನೆ. ತುಂಬಾ ಎಂಟರ್‌ಟೈನ್‌ ಆಗಿದೆ. ನಾನು ನನ್ನ ಮಗಳ ಜತೆ ಸಿನಿಮಾ ನೋಡಬಹುದು. ಅವಳು ತುಂಬಾ ಪ್ರಶ್ನೆಗಳನ್ನು ಕೇಳುತ್ತಾಳೆ. ಇಡೀ ಚಿತ್ರತಂಡ ಅದ್ಭುತ ಕೆಲಸ ಮಾಡಿದೆ. ಈ ಪ್ರಾಜೆಕ್ಟ್ ಅವರು ನಿಭಾಯಿಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಹೆಂಡತಿಗೆ ಸಿನಿಮಾ ಮಾಡಬೇಕು ಎಂದಾಗ ನಾನು ಹೇಳಿದ್ದು ಒಂದೇ, ಸಿನಿಮಾ ಮಾಡುವುದೆಂದರೆ ಮನೆ ವಿನ್ಯಾಸ ಮಾಡಿದಂತೆ ಅಲ್ಲ. ನೀವು ಗೋಡೆಗೆ ಬಣ್ಣ ಹಾಕುತ್ತೀರ. ನಿಮಗೆ ಇಷ್ಟವಿಲ್ಲ, ನೀವು ಬಣ್ಣವನ್ನು ಬದಲಾಯಿಸುತ್ತೀರಿ. ನಂತರ, ಮೊದಲ ಬಣ್ಣವು ಉತ್ತಮವಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ ಮತ್ತು ನಂತರ ನೀವು ಅದನ್ನು ಮತ್ತೆ ಬಣ್ಣಿಸುತ್ತೀರಿ. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಲೆಟ್ಸ್ ಗೆಟ್ ಮ್ಯಾರೀಡ್ ಸಿನಿಮಾ ಸ್ವಲ್ಪ ದಿನಗಳಲ್ಲಿ ಥಿಯೇಟರ್‌ಗೆ ಬರಲಿದೆ. ಅತ್ತೆ ಸೊಸೆ ಹಾಗೂ ಮಗನ ನಡುವೆ ನಡೆಯುವ ಕಥೆʼʼ ಎಂದರು.

Exit mobile version