Site icon Vistara News

PAKvsNZ | ಪಾಕಿಸ್ತಾನದ ಕರಾಚಿ ಕ್ರಿಕೆಟ್​ ಪಿಚ್​ ರಸ್ತೆಯಂತಿದೆ ಎಂದು ಜರೆದ ನ್ಯೂಜಿಲ್ಯಾಂಡ್​ ವೇಗದ ಬೌಲರ್​

PAKvsNZ

ಕರಾಚಿ : ಪ್ರವಾಸಿ ನ್ಯೂಜಿಲ್ಯಾಂಡ್​ ​ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಎರಡನೇ ಟೆಸ್ಟ್​ ಪಂದ್ಯ ಕರಾಚಿಯಲ್ಲಿ ಸೋಮವಾರ ಆರಂಭಗೊಂಡಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿರುವ ನ್ಯೂಜಿಲ್ಯಾಂಡ್​ ತಂಡ ಚಹಾ ವಿರಾಮದ ವೇಳೆ 4 ವಿಕೆಟ್​ ನಷ್ಟಕ್ಕೆ 270 ರನ್​ ಬಾರಿಸಿದೆ. ಅದರಲ್ಲೂ ಮೊದಲ ವಿಕೆಟ್​ಗೆ ಕಿವೀಸ್ ಆಟಗಾರರು 134 ರನ್​ಗಳ ಜತೆಯಾಟ ನೀಡಿದ್ದರು. ಒಟ್ಟಿನಲ್ಲಿ ಈ ಪಿಚ್​ ಕೂಡ ಬ್ಯಾಟ್ಸ್​ಮನ್​ಗಳಿಗೆ ಪೂರಕವಾಗಿರುವುದು ನ್ಯೂಜಿಲೆಂಡ್​ನ ವೇಗದ ಬೌಲರ್ ಮಿಚೆಲ್​ ಮೆಕ್​ಲ್ಯಾಗನ್​ ಅವರನ್ನು ಕೆರಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಇದೇನು ರಸ್ತೆಯಾ, ಬ್ಯಾಟರ್​ಗಳ ಸ್ವರ್ಗ ಎಂದು ಕರೆದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಪಿಚ್​ಗಳನ್ನು ತಯಾರಿಸಲು ಸೋಲುತ್ತಿದೆ ಎಂಬ ಆರೋಪಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ರಾವಲ್ಪಿಂಡಿ ಪಿಚ್ ಎರಡು ವರ್ಷದ ಅವಧಿಯಲ್ಲಿ ಎರಡು ಬಾರಿ ಡಿಮೆರಿಟ್​ ಅಂಕಗಳನ್ನು ಪಡೆದುಕೊಂಡಿರುವುದೇ ಇದಕ್ಕೆ ಸೂಕ್ತ ಉದಾಹರಣೆ. ಹೀಗಾಗಿ ಕರಾಚಿಯಲ್ಲಿ ಮೂರನೇ ಪಂದ್ಯ ಆರಂಭಗೊಂಡು ಬ್ಯಾಟರ್​ಗಳು ವಿಜೃಂಭಿಸುತ್ತಿದ್ದಂತೆ ಮೆಕ್​ಲ್ಯಾಗನ್ ಅವರು ಕೋಪದಿಂದ, ಕರಾಚಿ ಪಿಚ್​ ರಸ್ತೆಯಂತಿದೆ ಎಂದು ಬರೆದುಕೊಂಡಿದ್ದಾರೆ.

ಮೆಕ್​ಲ್ಯಾಗನ್​ ಅವರ ಟ್ವೀಟ್​ಗೆ ಹಲವಾರು ಮಂದಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತಮ್ಮ ತಂಡದ ಬ್ಯಾಟರ್​ಗಳಿಗಾಗಿ ಪಿಚ್​ ನಿರ್ಮಿಸುತ್ತಿದ್ದಾರೆ. ಅವರಿಗೆ ಪಂದ್ಯ ಸ್ಪರ್ಧಾತ್ಮಕವಾಗಿ ನಡೆಯಬೇಕೆನ್ನುವ ಯಾವುದೇ ಇಚ್ಛೆಯಿಲ್ಲ. ಬಾಬರ್​ ಅಜಮ್​ ದೊಡ್ಡ ಸ್ಕೋರ್​ ಮಾಡಿ ನಂಬರ್​ ಒನ್​ ಬ್ಯಾಟರ್​ ಆಗುವುದಷ್ಟೇ ಅವರ ಉದ್ದೇಶ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಈ ರೀತಿ ಮಾಡುವ ಕಾರಣವೇ ಆ ತಂಡ ಟೆಸ್​​ ಶ್ರೇಯಾಂಕದಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ,

ಟೆಸ್ಟ್​ ಕ್ರಿಕೆಟ್​ ಪಿಚ್​ಗಳನ್ನು ಸ್ಪರ್ಧಾತ್ಮಕವಾಗಿ ನಿರ್ಮಿಸಬೇಕು. ಕ್ರೀಡಾ ಪ್ರೇಮಿಗಳ ಕೌತುಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಐಸಿಸಿ ತನ್ನ ಸದಸ್ಯ ಸಂಸ್ಥೆಗಳಿಗೆ ಸಲಹೆ ಕೊಟ್ಟಿದೆ. ಆದರೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತನ್ನ ಚಾಳಿ ಬಿಡುತ್ತಿಲ್ಲ.

ಇದನ್ನೂ ಓದಿ | INDvsPAK | ಅಧಿಕಾರ ಕಳೆದುಕೊಂಡರೂ ಅಹಂಕಾರ ಬಿಡದ ರಮೀಜ್!​; ಭಾರತವನ್ನು ಪದೇ ಪದ ಸೋಲಿಸಿ ಎಂದ ಪಿಸಿಬಿ ಮಾಜಿ ಅಧ್ಯಕ್ಷ

Exit mobile version