ಲಂಡನ್: ಜೂನ್ 7 ರಂದು ಲಂಡನ್ನ ದಿ ಓವಲ್ ಸ್ಟೇಡಿಯಮ್ನಲ್ಲಿ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (WTC Final 2023) ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಏತನ್ಮಧ್ಯೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಷಿಪ್ ಪಂದ್ಯಕ್ಕೆ ಮುಂಚಿತವಾಗಿ ಬ್ಯಾಟಿಂಗ್ನಲ್ಲಿ ಅಬ್ಬರದ ಪ್ರದರ್ಶನ ನೀಡುವ ಭರವಸೆ ತೋರಿದ್ದಾರೆ. ಓವಲ್ ಇಂಗ್ಲೆಂಡ್ನಲ್ಲಿರುವ ಬ್ಯಾಟಿಂಗ್ ಪ್ರಿಯ ಪಿಚ್ ಆಗಿದ್ದು, ಅಬ್ಬರಿಸುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ಈ ಮೈದಾನದಲ್ಲಿ ಭಾರತ ಕೊನೆಯ ಬಾರಿಗೆ ಆಡಿದಾಗ ಹಿಟ್ಮ್ಯಾನ್ ರೋಹಿತ್ ಅದ್ಭುತ ಟೆಸ್ಟ್ ಶತಕ ಭಾರಿಸಿದ್ದರು. ಅದೇ ವಿಶ್ವಾಸದೊಂದಿಗೆ ಮತ್ತೊಂದು ಮೂರಂಕಿ ಮೊತ್ತವನ್ನು ಬಾರಿಸುವ ಸೂಚನೆ ನೀಡಿದ್ದಾರೆ 2021ರಲ್ಲಿ ಟೀಮ್ ಆತಿಥೇಯ ಇಂಡಿಯಾ ಇಂಗ್ಲೆಂಡ್ ವಿರುದ್ಧ ಈ ಪಿಚ್ನಲ್ಲಿ ಆಡಿತ್ತು. ಪಂದ್ಯದಲ್ಲಿ ರೋಹಿತ್ 256 ಎಸೆತಗಳಲ್ಲಿ 127 ರನ್ ಗಳಿಸಿದರು. ಅವರ ಪ್ರದರ್ಶನದಿಂದ ಭಾರತ ತಂಡ ಭರ್ಜರಿ ವಿಜಯ ದಾಖಲಿಸಿತ್ತು. ಹೀಗಾಗಿ ಈ ಬಾರಿಯೂ ರೋಹಿತ್ ಬ್ಯಾಟಿಂಗ್ ಬಗ್ಗೆ ಕುತೂಹಲ ಕೆರಳಿದೆ.
ನಿರ್ಣಾಯಕ ಪಂದ್ಯಕ್ಕೆ ಮುಂಚಿತವಾಗಿ, ಅವರು ಎದುರಾಳಿ ಬೌಲರ್ಗಳನ್ನು ನಿಭಾಯಿಸಲು ಸತತವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲಿನ ಹವಾಮಾನವೂ ಅವರಿಗೆ ಎಷ್ಟರ ಮಟ್ಟಿಗೆ ನೆರವು ನೀಡುತ್ತದೆ ಎಂದು ನೋಡಬೇಕಿದೆ. ಈ ಕುರಿತು ಮಾತನಾಡಿದ ರೋಹಿತ್ “ಹವಾಮಾನವು ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ಸುದೀರ್ಘ ಇನಿಂಗ್ಸ್ ಬಗ್ಗೆ ಗಮನಹರಿಸಬೇಕಾಗಿದೆ ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಹೊಂದಿರಬೇಕಾಗುತ್ತದೆ. ಬೌಲರ್ಗಳನ್ನು ಯಾವಾಗ ದಂಡಿಸಬೇಕು ಎಂಬ ಪ್ರಜ್ಞೆಯನ್ನು ಗಳಿಸಬೇಕಾಗುತ್ತೆ. ಅದಕ್ಕೆ ನಾನು ಸಿದ್ದನಾಗಿದ್ದೇನೆ ಎಂದು ಹೇಳಿದ್ದಾರೆ.
ಓವಲ್ನಲ್ಲಿ ಸ್ಕೋರ್ ಬಾರಿಸುವುದು ನನ್ನ ಯೋಜನೆಯಾಗಿದೆ. ಅದಕ್ಕೆ ಪೂರಕ ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. “ನಮ್ಮ ಸಾಮರ್ಥ್ಯ ಏನು ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಅಂತೆಯೇ ಓವಲ್ ಇಂಗ್ಲೆಂಡ್ನ ಅತ್ಯುತ್ತಮ ಬ್ಯಾಟಿಂಗ್ ಪಿಚ್ಗಳಲ್ಲಿ ಒಂದಾಗಿದೆ ಎಂದು ನಮಗೆ ತಿಳಿದಿದೆ. ಹೀಗಾಗಿ ರನ್ ಹೇಗೆ ಗಳಿಸಬೇಕು ಎಂದು ಅರಿತುಕೊಳ್ಳಬೇಕಾಗುತ್ತದ. ಸ್ಕ್ವೇರ್ ಬೌಂಡರಿ ಮೂಲಕ ರನ್ ಗಳಿಸುವುದು ಸುಲಭ. ಇಲ್ಲಿ ಯಶಸ್ಸು ಸಾಧಿಸಲು ಅದುವೇ ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಡಕ್ಔಟ್ ಆಗುವ ಮೂಲಕ ಅನಗತ್ಯ ದಾಖಲೆ ಸೃಷ್ಟಿಸಿಕೊಂಡ ರೋಹಿತ್ ಶರ್ಮಾ
ಕಳೆದ ವರ್ಷ ಸೌತಾಂಪ್ಟನ್ನ ರೋಸ್ ಬೌಲ್ನಲ್ಲಿ ನಡೆದ ಡಬ್ಲ್ಯುಟಿಸಿ 2021ರ ಫೈನಲ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿದ್ದ ನ್ಯೂಜಿಲ್ಯಾಂಡ್ ತಂಡ ಚಾಂಪಿಯನ್ಪಟ್ಟ ಅಲಂಕರಿಸಿತ್ತು.
2021-23ರ ಆವೃತ್ತಿಯಲ್ಲಿ ಆಸ್ಟ್ರೇಲಿಯಾ 19 ಟೆಸ್ಟ್ಗಳಲ್ಲಿ 66.67 ಅಂಕಗಳೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕಾಂಗರೂಗಳನ್ನು 2-1 ರಿಂದ ಸೋಲಿಸಿದ ನಂತರ ಭಾರತವು 58.8 ಅಂಕಗಳೊಂದಿಗೆ ಫೈನಲ್ಗೆ ಪ್ರವೇಶಿಸಿತು.