ಇಸ್ಲಾಮಾಬಾದ್ : ಟಿ20 ವಿಶ್ವ ಕಪ್ 2011ರಲ್ಲಿ ಭಾರತ ತಂಡ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧ 10 ವಿಕೆಟ್ ಹೀನಾಯ ಸೋಲು ಅನುಭವಿಸಿತ್ತು. ಭಾರತ ತಂಡಕ್ಕೆ ಅದು ಇಂದಿಗೂ ಮರೆಯಲಾರದ ಸಂದರ್ಭ. ದುಬೈನಲ್ಲಿ ನಡೆದ ಆ ಹಣಾಹಣಿಯಲ್ಲಿ ಭಾರತವನ್ನು ಬಗ್ಗು ಬಡಿದ ಪಾಕಿಸ್ತಾನ ತಂಡಕ್ಕೆ ಆ ಬಗ್ಗೆ ಇನ್ನೂ ಹೆಮ್ಮೆಯಿದೆ. ಅಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಪಾಕ್ ಬ್ಯಾಟರ್, ಗೆಲುವಿನ ಬಳಿಕ ತಮಗೆ ಸಿಕ್ಕ ಮರ್ಯಾದೆ ಕುರಿತ ಇದುರವರೆಗೆ ಕೇಳಿರದ ಕತೆಯೊಂದನ್ನ ಹೇಳಿದ್ದಾರೆ.
ಭಾರತ ತಂಡ ನೀಡಿದ್ದ 152 ರನ್ಗಳ ಗೆಲುವಿನ ಗುರಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಹಾಗೂ ವಿಕೆಟ್ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 152 ರನ್ಗಳ ಅಜೇಯ ಜತೆಯಾಟ ಆಡಿದ್ದರು. ಈ ಮೂಲಕ ಪಾಕ್ ತಂಡ ಗೆದ್ದು ಬೀಗಿತ್ತು. ಇದರ ಕುರಿತು ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಮೊಹಮ್ಮದ್ ರಿಜ್ವಾನ್, ಇದುವರೆಗೆ ಕೇಳಿದರ ಸಂಗತಿಗಳನ್ನು ಹೇಳಿದ್ದಾರೆ.
“ಭಾರತ ವಿರುದ್ಧ ಗೆದ್ದ ತಕ್ಷಣ ನಾನು ಬೇರೆ ಜಯದೊಂದಿಗೆ ಇದೊಂದು ಜಯ ಎಂದು ಅಂದುಕೊಂಡಿದ್ದೆ. ಆದರೆ, ಪಾಕಿಸ್ತಾನಕ್ಕೆ ವಾಪಸಾದ ಬಳಿಕ ಗೆಲುವಿನ ಮಹತ್ವ ಗೊತ್ತಾಯಿತು. ಅಲ್ಲಿ ಯಾವುದೇ ಅಂಗಡಿಗೆ ಹೋಗಿ ಏನಾದರೂ ಖರೀದಿ ಮಾಡಿದರೆ ಮಾಲೀಕರು ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ. ನೀವಾ, ನೀವಾ, ನಿಮಗೆ ಎಲ್ಲವೂ ಫ್ರೀ ಎಂದು ಹೇಳುತ್ತಿದ್ದರು. ಈ ವೇಳೆ ನನಗೆ ನನ್ನ ಬ್ಯಾಟಿಂಗ್ನ ಮೌಲ್ಯ ಗೊತ್ತಾಯಿತು,” ಎಂದು ರಿಜ್ವಾನ್ ಹೇಳಿದ್ದಾರೆ.
ಮೊಹಮ್ಮದ್ ರಿಜ್ವಾನ್ ಅವರು ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅತಿಥೇಯ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕಳೆದುಕೊಂಡಿದೆ.
ಇದನ್ನೂ ಓದಿ | Kohli VS Babar | ಬಾಬರ್ ಅಜಮ್‌ಗಿಂತ ವಿರಾಟ್ ಹೇಗೆ ಶ್ರೇಷ್ಠ ಬ್ಯಾಟರ್? ಪಾಕ್ ಲೆಜೆಂಡ್‌ಗಳು ವಿವರಿಸಿದ್ದಾರೆ