Site icon Vistara News

ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ತೇಗಿದ ಪಾಕ್​ ಆಟಗಾರರು

pakistan team in bangalore

ಬೆಂಗಳೂರು: ಪಾಕಿಸ್ತಾನ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕಾಗಿ ಬೆಂಗಳೂರಿನಲ್ಲಿ(Pakistan Team In Bangalore) ಬೀಡು ಬಿಟ್ಟಿದ್ದಾರೆ. ಶುಕ್ರವಾರ ಆಸ್ಟ್ರೇಲಿಯಾ(pakistan vs australia) ವಿರುದ್ಧ ಪಂದ್ಯವನ್ನಾಡಲಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಪಾಕ್​ ಆಟಗಾರರು ನಗರದ ಪ್ರಸಿದ್ಧ ಹೋಟೆಲ್​ ಒಂದಕ್ಕೆ ತೆರಳಿ ಹೊಟ್ಟೆ ತುಂಬಾ ಊಟ ಮಾಡಿ ಬೆಂಗಳೂರಿನ ಫುಡ್​ಗೆ ಫಿದಾ ಆಗಿದ್ದಾರೆ.

ಪಾಕಿಸ್ತಾನ ಆಟಗಾರರು ಬೆಂಗಳೂರಿನ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ಊಟಕ್ಕೆ ಹೊಟೇಲ್​ಗೆ ತೆರಳಿ ಸಖತ್​ ಊಟ ಮಾಡಿದ್ದಾರೆ. ಅಲ್ಲದೆ ಹೋಟೆಲ್​ ಸಿಬ್ಬಂದಿಗಳೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡು ರುಚಿಯಾದ ಆಹಾರ ನೀಡಿದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪಾಕ್​ ಆಟಗಾರರು ಹೋಟೆಲ್​ಗೆ ತೆರಳಿ ಆಹಾರ ಸೇವಿಸಿದ ವಿಡಿಯೊವನ್ನು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ನಾಯಕ ಬಾಬರ್ ಅಜಂ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ ಮತ್ತು ಶದಾಬ್ ಖಾನ್ ಮತ್ತು ತಂಡದ ಸಿಬ್ಬಂದಿಗಳು ಕೂಡ ಕಾಣಿಸಿಕೊಂಡಿದ್ದಾರೆ.

ಭಾಬುವಾರ ಬೆಂಗಳೂರಿಗೆ ಬಂದ ವೇಳೆ ನಾಯಕ ಬಾಬರ್​ ಅಜಂ(Babar Azam) ಅವರ 29ನೇ ವರ್ಷದ ಹುಟ್ಟುಹಬ್ಬವನ್ನು(babar azam birthday) ಬೆಂಗಳೂರಿನಲ್ಲಿ ಆಚರಿಸಲಾಯಿತು. ಕೇಕ್​ ಕತ್ತರಿಸಿ ಬಾಬರ್​ ಹುಟ್ಟುಹಬ್ಬ ಆಚರಿಸಿದರು. ಈ ವೇಳೆ ಪಾಕ್​ ಆಟಗಾರರು ಮತ್ತು ಇಲ್ಲಿನ ಹೋಟೆಲ್​ ಸಿಬ್ಬಂದಿಗಳು ಜತೆಗಿದ್ದರು.

ಬಾಬರ್​ ನಾಯಕತ್ವ ವಿರುದ್ಧ ಅಸಮಾಧಾನ

ಭಾರತ ವಿರುದ್ಧ ಹೀನಾಯ ಸೋಲು ಕಂಡ ಕಾರಣ ತಂಡದ ನಾಯಕತ್ವಕ್ಕೆ ಬಾಬರ್​ ರಾಜೀನಾಮೆ ನೀಡಬೇಕು ಎಂದು ಪಾಕ್​ ತಂಡದ ಮಾಜಿ ನಾಯಕ ಶೋಯೆಬ್​ ಮಲಿಕ್​ ಆಗ್ರಹಿಸಿದ್ದಾರೆ. ಕ್ರೀಡಾ ಸಂದರ್ಶನದಲ್ಲಿ ಮಾತನಾಡಿದ ಮಲಿಕ್​, ಹೋರಾಡಿ ಸೋಲು ಕಂಡರೂ ಬೇಸರವಿರಲಿಲ್ಲ. ಆದರೆ ಇದೊಂದು ಹೀನಾಯ ಸೋಲು. ತಂಡವನ್ನು ಒತ್ತಡದಲ್ಲಿ ಹೇಗೆ ಮುನ್ನಡೆಸಬೇಕು ಎನ್ನುವುದು ಬಾಬರ್​ಗೆ ತಿಳಿದಿಲ್ಲ. ಅವರ ತಕ್ಷಣ ನಾಯಕತ್ವಕ್ಕೆ ರಾಜೀನಾಮೆ ನೀಡಿದರೆ ಸೂಕ್ತ ಎಂದು ಹೇಳಿದ್ದಾರೆ.

ಇದನ್ನೂ ಓದಿ Jasprit Bumrah : ಬುಮ್ರಾ ನೋಡಿ ಕಲಿ; ಶಾಹೀನ್‌ ಶಾ​ ಅಫ್ರಿದಿಗೆ ಬುದ್ಧಿ ಹೇಳಿದ ಪಾಕ್​ ಮಾಜಿ ಕ್ರಿಕೆಟಿಗ

“ನನ್ನ ಪ್ರಾಮಾಣಿಕ ಅಭಿಪ್ರಾಯದ ಪ್ರಕಾರ, ಬಾಬರ್ ಅಜಂ ನಾಯಕತ್ವವನ್ನು ತೊರೆಯಬೇಕು. ನಾನು ಈ ಮಾತನ್ನು ಈಗಾಗಲೇ ಹಿಂದಿನ ಸಂದರ್ಶನಗಳಲ್ಲಿ ಹೇಳಿದ್ದೇ. ಇದೀಗ ಮತ್ತೆ ಮರುಕಳಿಸುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಓರ್ವ ನಾಯಕನಾಗಿ ಬಾಬರ್ ತಂಡದ ಬಗ್ಗೆ ಯೋಚಿಸುತ್ತಿಲ್ಲ. ತನ್ನ ಪಾಡಿಗೆ ತಾನು ಆಡಿ ಹೋಗುತ್ತಿದ್ದಾರೆ. ಇದನ್ನು ಎಲ್ಲರು ಮಾಡಲು ಸಾಧ್ಯ. ಸಂಘಟಿತ ಹೋರಾಟದ ಕೊರತೆಯೇ ಭಾರತ ವಿರುದ್ಧದ ಸೋಲಿಗೆ ಕಾರಣ. ಸೋಲಿಗೆ ಬಾಬರ್​ ಅವರ ಕಳಪೆ ನಾಯಕತ್ವವೇ ಕಾರಣ” ಎಂದು ಹೇಳಿದ್ದಾರೆ.

ಬುಮ್ರಾ ನೋಡಿ ಕಲಿಯಿರಿ

ಜಸ್​ಪ್ರೀತ್​ ಬುಮ್ರಾ ಅವರ ಬೌಲಿಂಗ್​ ಮಾದರಿಯನ್ನು ಶಾಹೀನ್​ ಅಫ್ರಿದಿ ಅನುಸರಿಸಬೇಕು ಎಂದು ಪಾಕ್​ ತಂಡದ ಮಾಜಿ ವೇಗಿ ವಕಾರ್ ಯೂನಿಸ್ ಸಲಹೆ ನೀಡಿದ್ದಾರೆ. “ಅಫ್ರಿದಿ ಫಿಟ್ನೆಸ್ನಲ್ಲಿ ಸಮಸ್ಯೆ ಇದೆಯೇ ಎಂದು ನನಗೆ ತಿಳಿದಿಲ್ಲ. ಆದರೆ ಅವರು ಲಯ ಕಳೆದುಕೊಂಡಿದ್ದಾರೆ. ಅವರು ಬುಮ್ರಾ ಬೌಲಿಂಗ್​ ನೋಡಿ ಕಲಿಯಬೇಕು” ಎಂದು ಹೇಳಿದ್ದಾರೆ.

Exit mobile version