Site icon Vistara News

T20 World Cup| ಸಂದರ್ಭಕ್ಕೆ ತಕ್ಕಂತೆ ಆಟಗಾರರ ಬದಲಾವಣೆ ನಿಶ್ಚಿತ; ನಾಯಕ ರೋಹಿತ್​ ಶರ್ಮಾ

t20

ಮೆಲ್ಬೋರ್ನ್​: ಸಂದರ್ಭಕ್ಕೆ ತಕ್ಕಂತೆ ಟಿ20 ವಿಶ್ವ ಕಪ್‌ (T20 World Cup) ನ ಪ್ರತಿ ಪಂದ್ಯದಲ್ಲೂ ಒಂದು ಅಥವಾ ಎರಡು ಬದಲಾವಣೆಗಳನ್ನು ಮಾಡುವುದಾಗಿ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಮೂಲಕ ಆಟಗಾರರ ಸ್ಥಾನ ಕಾಯಂ ಅಲ್ಲ ಎಂಬ ಸೂಚನೆ ನೀಡಿದೆ. ಜತೆಗೆ ಆಸ್ಟ್ರೇಲಿಯಾದ ಪಿಚ್‌ ಪರಿಸ್ಥಿತಿಗೆ ಅನುಗೂಣವಾಗಿ ಬೌಲಿಂಗ್‌ ಬದಲಾವಣೆ ನಡೆಸುವ ಸೂಚನೆ ಕೊಟ್ಟಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್​, ಭಾರತವು ಕಳೆದ ಒಂದು ವರ್ಷದಲ್ಲಿ ಟಿ20 ಸರಣಿಗೆ 29 ಕ್ರಿಕೆಟಿಗರನ್ನು ಆಡಿಸಿದೆ. ತಂಡದ ರಚನೆ, ಫಾರ್ಮ್, ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಬಳಸಲಾಗುತ್ತಿದೆ. ಯಾವ ಆಟಗಾರರು ಸೂಕ್ತ ಎಂಬುದನ್ನು ಅವರ ಫಾರ್ಮ್ ಅವಲಂಬಿಸಿ ಆಯ್ಕೆ ಮಾಡಬೇಕಾಗುತ್ತದೆ. ಈ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದೇವೆ. ಆಡುವ 11ರ ಬಳಗದಲ್ಲಿ ಬದಲಾವಣೆಗಳ ಬಗ್ಗೆ ನಾನು ಮುಕ್ತವಾಗಿದ್ದೇನೆ. ಪ್ರತೀ ಪಂದ್ಯದಲ್ಲಿ ಒಂದು ಅಥವಾ ಎರಡು ಬದಲಾವಣೆಗೆ ಹಿಂಜರಿಯುವುದಿಲ್ಲ ಎಂದು ರೋಹಿತ್​ ಹೇಳಿದ್ದಾರೆ.

“ಇತ್ತೀಚಿನ ಕೆಲ ವರ್ಷಗಳಿಂದ ಐಸಿಸಿಯ ದೊಡ್ಡ ಕ್ರೀಡಾಕೂಟಗಳಲ್ಲಿ ತಮ್ಮ ತಂಡ ಉತ್ತಮ ಪ್ರದರ್ಶನ ನೀಡಿಲ್ಲ ಎಂಬುವುದು ಸತ್ಯ. ಒತ್ತಡವು ನಿರಂತರವಾಗಿದೆ. ಆದರೆ ಪಾಕಿಸ್ತಾನದ ವಿರುದ್ಧ ಗೆಲ್ಲುವುದು ಸವಾಲು ಎಂದು ನಾನು ಭಾವಿಸುತ್ತೇನೆ. ಅಲ್ಲದೆ ನಾವು ಒಂಬತ್ತು ವರ್ಷಗಳಿಂದ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ” ಎಂದು ರೋಹಿತ್ ಹೇಳಿದ್ದಾರೆ. ಭಾರತ ತಂಡವು ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದೊಂದಿಗೆ ತನ್ನ ಟಿ20 ವಿಶ್ವ ಕಪ್​ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ | T20 World Cup | ಹಲವು ಬದಲಾವಣೆ ಕಂಡ ಟೀಮ್​ ಇಂಡಿಯಾ ವಿಶ್ವ ಕಪ್​ ಪ್ರದರ್ಶನ ಹೇಗಿರಬಹುದು?

Exit mobile version