Site icon Vistara News

Team India | ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಬಿಸಿಸಿಐಗೆ ಹಿಡಿ ಶಾಪ ಹಾಕಿದ ಆಟಗಾರರು

ನವ ದೆಹಲಿ : ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧದ ಕ್ರಿಕೆಟ್ ಸರಣಿಗೆ ಸೋಮವಾರ ಟೀಮ್‌ ಇಂಡಿಯಾ ಪ್ರಕಟಗೊಂಡಿದೆ. ನವೆಂಬರ್‌ ೧೮ರಿಂದ ನವೆಂಬರ್‌ ೩೦ರವರೆಗೆ ನ್ಯೂಜಿಲೆಂಡ್‌ ಸರಣಿ ನಡೆಯಲಿದೆ. ಅಂತೆಯೇ ಡಿಸೆಂಬರ್‌ ೪ರಿಂದ ಡಿಸೆಂಬರ್‌ ೨೬ರವರೆಗೆ ಬಾಂಗ್ಲಾದೇಶ ಪ್ರವಾಸದಲ್ಲಿ ಮೂರು ಏಕ ದಿನ ಹಾಗೂ ಎರಡು ಟೆಸ್ಟ್‌ ಪಂದ್ಯಗಳು ನಡೆಯಲಿವೆ. ಈ ಎರಡೂ ಪ್ರವಾಸಗಳಿಗೆ ತಂಡದಲ್ಲಿ ಅವಕಾಶ ಪಡೆಯದಂಥ ಕೆಲವು ಆಟಗಾರರು ಬೇಸರ ವ್ಯಕ್ತಪಡಿಸುವ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐಗೆ ಹಿಡಿಶಾಪ ಹಾಕಿದೆ.

ದೇಶಿಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಹೊರತಾಗಿಯೂ ತಂಡಕ್ಕೆ ಮರಳಲು ವಿಫಲಗೊಳ್ಳುತ್ತಿರುವ ಯುವ ಬ್ಯಾಟರ್‌ ಪೃಥ್ವಿ ಶಾ ಅವರು ಸಾಯಿ ಬಾಬಾ ಅವರ ಮೊರೆ ಹೋಗಿದ್ದಾರೆ. ತಂಡ ಪ್ರಕಟಗೊಳ್ಳುತ್ತಿದ್ದಂತೆ ಸಾಯಿ ಬಾಬಾ ಚಿತ್ರ ಹಾಕಿದ ಅವರು, ನೀನು ಎಲ್ಲವನ್ನೂ ನೋಡುತ್ತಿರುವೆ ಎಂದು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್‌ ಹಾಗೂ ಸೈಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಯಶಸ್ಸು ಸಾಧಿಸುತ್ತಿರುವ ಹೊರತಾಗಿಯೂ, ಚೇತನ್‌ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ತಂಡದಲ್ಲಿ ಅವಕಾಶ ಕೊಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಎಡಗೈ ಬ್ಯಾಟರ್‌ ನಿತೀಶ್‌ ರಾಣಾ “ಭರವಸೆ, ಸ್ವಲ್ಪ ಕಾಯಿರಿ ನೋವು ಕೊನೆಗೊಳ್ಳುತ್ತದೆ ‘ಎಂದು ಬರೆದುಕೊಂಡಿದ್ದಾರೆ.

ವೇಗಿ ಉಮೇಶ್‌ ಯಾದವ್‌ ಕೂಡ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೆ ಮಾತ್ರ ಅವಕಾಶ ಪಡೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನೀವು ನನ್ನನ್ನು ಮೂರ್ಖನನ್ನಾಗಿ ಮಾಡಬಹುದು. ಆದರೆ ದೇವರು ನಿಮ್ಮನ್ನೂ ನೋಡುತ್ತಿದ್ದಾನೆ ಎಂಬುದಾಗಿ ಬರೆದುಕೊಂಡಿದ್ದಾರೆ.

ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ಗೆ ಕೂಡ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮತ್ತೆ ಹಿಂದಿರುಗಿ ಬರುವೆ ಎಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ | Hardik Pandya | ನ್ಯೂಜಿಲೆಂಡ್‌ T-20 ಸರಣಿಗೆ ಹಾರ್ದಿಕ್‌ ಪಾಂಡ್ಯ ನಾಯಕ, ಏಕದಿನಕ್ಕೆ ಧವನ್‌ ಮುಂದಾಳತ್ವ, ಹೀಗಿದೆ ತಂಡ

Exit mobile version