Site icon Vistara News

ICC World Cup 2023 : ವಿಶ್ವ ಕಪ್​ ಲೀಗ್ ಹಂತದ ಕೊನೇ ಪಂದ್ಯದ ಬಳಿಕ ಅಂಕಪಟ್ಟಿ ಈ ರೀತಿ ಇದೆ

Team india

ಬೆಂಗಳೂರು: ವಿಶ್ವ ಕಪ್ 2023ರ (ICC World Cup 2023) ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಅಕ್ಟೋಬರ್ 5ರಂದು ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್​ ನಡುವಿನ ಸ್ಪರ್ಧೆಯ ಮೂಲಕ ಪ್ರಾರಂಭಗೊಂಡ ಹಣಾಹಣಿಗಳು ಭಾರತ ಹಾಗೂ ನೆದರ್ಲ್ಯಾಂಡ್ಸ್ ನಡುವಿನ ಪಂದ್ಯದೊಂದಿಗೆ ಮುಕ್ತಾಯಗೊಂಡಿದೆ. ಒಟ್ಟು 45 ಪಂದ್ಯಗಳು ನಡೆದಿದ್ದು 10 ತಂಡಗಳು ತಲಾ 9 ಪಂದ್ಯಗಳನ್ನು ಆಡಿವೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು ಸೆಮಿಫೈನಲ್​ಗೇರಿವೆ. ನೆವೆಂಬರ್​ 15 ಮತ್ತು 16ರಂದು ಸೆಮಿಫೈನಲ್ ಪಂದ್ಯ ನಡೆಯಿದ್ದು, 19ರಂದು ಪ್ರಶಸ್ತಿ ಸುತ್ತಿನ ಹಣಾಹಣಿ ನಿಯೋಜನೆಗೊಂಡಿದೆ. ಇದೀಗ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡ ಬಳಿಕ ವಿಶ್ವಕಪ್​ನ ಅಂಕಪಟ್ಟಿ ಹೇಗಿದೆ ಎಂಬುದನ್ನು ನೋಡೋಣ.

ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ99018+2.570
ದಕ್ಷಿಣ ಆಫ್ರಿಕಾ97214+1.261
ಆಸ್ಟ್ರೇಲಿಯಾ​97214+0.841
ನ್ಯೂಜಿಲ್ಯಾಂಡ್95410+0.743
ಪಾಕಿಸ್ತಾನ9458-0.199
ಅಫಘಾನಿಸ್ತಾನ9458-0.336
ಇಂಗ್ಲೆಂಡ್​​ 9366-0.572
ಬಾಂಗ್ಲಾದೇಶ9274-1.419
ಶ್ರೀಲಂಕಾ9274-1.419
ನೆದರ್ಲ್ಯಾಂಡ್ಸ್​​​ 9274-1.825

ಭಾರತ ಹಾಗೂ ನೆದರ್ಲ್ಯಾಂಡ್ಸ್ ತಂಡಗಳ ನಡುವಿನ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. ಆದರೆ, ಭಾರತ ತಂ ತನ್ನ ಖಾತೆಗೆ ಇನ್ನೆರಡು ಅಂಕಗಳನ್ನು ಸೇರಿಸಿಕೊಂಡಿತು. +2.570 ರನ್​ ರೇಟ್​ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಇನ್ನು ನೆದರ್ಲ್ಯಾಂಡ್ಸ್ ತಂಡಕ್ಕೆ ಕೊನೇ ಸ್ಥಾನ ಖಾತರಿಯಾಯತು. ಆ ತಂಡ 9 ರಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಸಂಪಾದಿಸಿತು. +2.570 ನೆಟ್​ರನ್​ರೇಟ್​ ಪಡೆದುಕೊಂಡಿತು.

7 ಗೆಲುವಿನೊಂದಿಗೆ 14 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಗಲುವಿನೊಂದಿಗೆ ಅಷ್ಟೇ ಅಂಕ ಹೊಂದಿರು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ದ. ಆಫ್ರಿಕಾ (+1.261) ಆಸ್ಟ್ರೇಲಿಯಾ ತಂಡಕ್ಕಿಂತ (+0.841) ಅಧಿಕ ನೆಟ್​ರನ್​ರೇಟ್​ ಹೊಂದಿದೆ.

ಇದನ್ನೂ ಓದಿ : Rohit Sharma : ನಿನಗೊಂದು ವಿಕೆಟ್​, ನನಗೊಂದು ವಿಕೆಟ್​; ರೋಹಿತ್- ಕೊಹ್ಲಿ ಹಂಚಿಕೆ ಸೂತ್ರ!

ಇಂಗ್ಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನ ಐದನೇ ಸ್ಥಾನ ಪಡೆದುಕೊಂಡು ಹಾಲಿ ವಿಶ್ವ ಕಪ್ ಅಭಿಯಾನ ಮುಗಿಸಿದೆ. ಅಫಘಾನಿಸ್ತಾನ 6ನೇ ಸ್ಥಾನದಲ್ಲಿದೆ. ಇಂಗ್ಲೆಂಡ್​ ತಂಡ ಪಾಕ್ ವಿರುದ್ದ ಗೆದ್ದು ಒಟ್ಟು 3 ಗೆಲುವಿನ ಶ್ರೇಯಸ್ಸಿಗೆ ಪಾತ್ರವಾಗಿದೆ. ಆ ತಂಡ ಬಳಿ 6 ಅಂಕಗಳಿವೆ ಹಾಗೂ -0.572 ನೆಟ್​ರನ್​ರೇಟ್ ಇದೆ. ಪಾಕ್ ವಿರುದ್ಧ ಗೆದ್ದ ಕಾರಣ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅರ್ಹತೆ ಗಳಿಸಿಕೊಂಡಿದೆ. ಆಸೀಸ್​ ವಿರುದ್ಧ ಶನಿವಾರದ ಪಂದ್ಯದಲ್ಲಿ ಸೋತ ಬಾಂಗ್ಲಾದೇಶ ಎಂಟನೇ ಹಾಗೂ ಶ್ರೀಲಂಕಾ 9ನೇ ಹಾಗೂ ನೆದರ್ಲ್ಯಾಂಡ್ಸ್​ 10ನೇ ಸ್ಥಾನ ಪಡೆದುಕೊಂಡಿದೆ.

Exit mobile version