Site icon Vistara News

ನಿಜವಾಯಿತು ಸಚಿನ್​ ತೆಂಡೂಲ್ಕರ್​ ನುಡಿದ 11 ವರ್ಷಗಳ ಹಿಂದಿನ ಭವಿಷ್ಯ; ಏನದು?

virat kohli

ಕೋಲ್ಕೊತಾ: ಟೀಮ್​ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್​ ಸಚಿನ್​ ತೆಂಡೂಲ್ಕರ್​ ಅವರು 11 ವರ್ಷಗಳ ಹಿಂದೆ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಅವರ ವಿಚಾರದಲ್ಲಿ ಭವಿಷ್ಯ ನುಡಿದ್ದರು. ಅಂದು ಸಚಿನ್​ ಹೇಳಿದಂತೆ ವಿರಾಟ್​ ಈ ಭವಿಷ್ಯವನ್ನು ಕೋಲ್ಕೊತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಿಜ ಮಾಡಿದ್ದಾರೆ. ಅಂದು ಸಚಿನ್​ ಅವರು ನುಡಿದ ಭವಿಷ್ಯದ ವಿಡಿಯೊವನ್ನು ಈಗ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಚಿನ್​ ನುಡಿದಿದ್ದ ಭವಿಷ್ಯವೇನು?

2012ರಲ್ಲಿ ನಡೆದ ಸಮಾರಂಭವೊಂದರಲ್ಲಿ ಸಲ್ಮಾನ್ ಖಾನ್ ಅವರು ವೇದಿಕೆಯಲ್ಲಿ ನಿಂತು ಸಚಿನ್​ ತೆಂಡೂಲ್ಕರ್​ ಬಳಿ ನಿಮ್ಮ ದಾಖಲೆಗಳನ್ನು ಯಾರಾದರೂ ಮುರಿಯಲು ಸಾಧ್ಯವೆ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿನ್​, ಈ ರೂಮ್​ನಲ್ಲಿ ಹಲವು ಟೀಮ್​ ಇಂಡಿಯಾದ ಯುವ ಕ್ರಿಕೆಟಿಗರು ಕುಳಿತ್ತಿದ್ದಾರೆ ಎಂದ ತಕ್ಷಣ ಸಲ್ಮಾನ್ ಖಾನ್ ಇದು ಅಸಾಧ್ಯ ಎಂದು ಹೇಳಿದ್ದರು. ಆದರೆ, ಸಲ್ಮಾನ್ ಅವರ ಈ ಮಾತನ್ನು ಒಪ್ಪದ ಸಚಿನ್,​ ನನ್ನ ದಾಖಲೆಯನ್ನು ಮುರಿಯುವ ಆಟಗಾರರು ಇಲ್ಲೇ ಇದ್ದಾರೆ ಎಂದರು. ಹೌದೇ ಹಾಗಾದರೆ ಅದು ಯಾರು ಎಂದು ಸಲ್ಮಾನ್ ಮರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿನ್​ ಅವರು ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಎಂದು ಹೇಳಿದ್ದರು. ಜತೆಗೆ ನಮ್ಮದೇ ದೇಶದ ಆಟಗಾರನೊಬ್ಬ ನನ್ನ ದಾಖಲೆ ಮುರಿದರೆ ಅದರಲ್ಲಿ ಯಾವುದೇ ಬೇಸರವಿಲ್ಲ ನಾನು ಕೂಡ ಹೆಮ್ಮೆ ಪಡೆತ್ತೇನೆ ಎಂದಿದ್ದರು. ಇದೇ ಸಮಾರಂಭದಲ್ಲಿ ಕುಳಿತ್ತಿದ್ದ ಚಿಗುರು ಮೀಸೆಯ ಕೊಹ್ಲಿ, ಸಚಿನ್​ ಮಾತು ಕೇಳಿ ನಕ್ಕಿದ್ದರು.

ಅಂದು ಸಚಿನ್​ ಹೇಳಿದಂತೆ ವಿರಾಟ್​ ಮತ್ತು ರೋಹಿತ್​ ಶರ್ಮ ಈಗಾಗಲೇ ಸಚಿನ್​ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಸಚಿನ್​ ಅವರ ಸಾರ್ವಕಾಲಿಕ ಏಕದಿನ ಶತಕದ ದಾಖಲೆಯನ್ನು ವಿರಾಟ್​ ಸರಿಗಟ್ಟಿದ ಕಾರಣ ಈ ವಿಡಿಯೊ ಮತ್ತೆ ವೈರಲ್ ಆಗಿದೆ. ವಿರಾಟ್​ ಅವರು ಇನ್ನೊಂದು ಶತಕ ಬಾರಿಸಿದರೆ ಸಚಿನ್​ ಅವರ ದಾಖಲೆ ಪತನಗೊಳ್ಳಲಿದೆ.

ತಮ್ಮ ದಾಖಲೆಯ ಶತಕವನ್ನು ಸರಿಗಟ್ಟಿದ ವೇಳೆ ಸಚಿನ್ ಅವರು ನಿಷ್ಕಲ್ಮಶ ಮನಸ್ಸಿನಿಂದ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸುವ ಜತೆಗೆ. ಮುಂದಿನ ಐದು ದಿನಗಳಲ್ಲಿ 50ನೇ ಶತಕ ಬಾರಿಸುವಂತಾಗಲಿ ಎಂದು ಹರಸಿದ್ದಾರೆ.

ಇದನ್ನೂ ಓದಿ Rohit Sharma: ಕೊಹ್ಲಿ ಬಗ್ಗೆ ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡಿದ ರೋಹಿತ್​, ದ್ರಾವಿಡ್​

ಸಚಿನ್​ ನನ್ನ ಹೀರೋ

ಶತಕದ ಬಳಿಕ ಮಾತನಾಡಿದ ವಿರಾಟ್​ ಕೊಹ್ಲಿ ಅವರು, “ಸಚಿನ್ ನನ್ನ ಹೀರೋ. ನಾನು ಅವರ ದಾಖಲೆ ಸರಿಗಟ್ಟಿರುವುದು ದೊಡ್ಡ ಗೌರವ ಭಾವನೆ ಮೂಡಿಸಿದೆ. ಇದು ನನಗೆ ಸಂಪೂರ್ಣ ವಿಶೇಷ ಎನಿಸಿದೆ. ಆದರೆ ನಾನು ಅವರಷ್ಟು ಪರಿಪೂರ್ಣತೆ ಹೊಂದಿಲ್ಲ. ನಾನು ಅವರಿಗೆ ಎಂದಿಗೂ ಸಮನಾಗುವುದಿಲ್ಲ. ಅವರು ಎಂದೆಂದಿಗೂ ಎಲ್ಲ ಕ್ರಿಕೆಟ್ ಆಟಗಾರಿಗೆ ಸ್ಫೂರ್ತಿ” ಎಂದು ವಿರಾಟ್ ಹೇಳಿದರು.

Exit mobile version