Site icon Vistara News

IPL 2023 | ಎಸ್‌ಆರ್‌ಎಚ್‌ ತಂಡದಲ್ಲಿ ಬದಲಾವಣೆ ಪರ್ವ; ಯಾರಿಗೆ ಕೊಕ್‌ ಕೊಟ್ಟಿತು ಮ್ಯಾನೇಜ್ಮೆಂಟ್‌?

IPL- 2023

ಹೈದಬಾರಾಬಾದ್‌ : ಐಪಿಎಲ್‌ ಆರಂಭಕ್ಕೆ ಇನ್ನೂ ಕೆಲವು ತಿಂಗಳುಗಳು ಬಾಕಿ ಉಳಿದಿವೆ. ಆದಾಗ್ಯೂ ಫ್ರಾಂಚೈಸಿಗಳು ೧೬ನೇ ಆವೃತ್ತಿಯ ಹಣಾಹಣಿಗೆ ಸಿದ್ಧತೆಗಳನ್ನು ನಡೆಸುತ್ತಿವೆ. ಅಂತೆಯೇ ಸನ್‌ ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ ತನ್ನ ತಂಡದ ಹೆಡ್‌ ಕೋಚ್‌ ಟಾಮ್‌ ಮೂಡಿಗೆ ಕೊಕ್ ಕೊಟ್ಟಿದ್ದು, ವೆಸ್ಟ್‌ ಇಂಡೀಸ್‌ನ ಮಾಜಿ ಬ್ಯಾಟರ್‌ ಬ್ರಿಯಾನ್‌ ಲಾರಾ ಅವರ ಜತೆ ಒಪ್ಪಂದ ಮಾಡಿಕೊಂಡಿದೆ.

ಆಸ್ಟ್ರೇಲಿಯಾದ ಟಾಮ್ ಮೂಡಿ ಕಳೆದ ಎರಡು ಆವೃತ್ತಿಗಳಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಹೆಡ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಐಎಲ್‌ಟಿ- ೨೦ ಟೂರ್ನಿಯಲ್ಲಿ ಡೆಸರ್ಟ್‌ ವೈಪರ್ ತಂಡದ ನಿರ್ದೇಶಕರಾಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಅದರ ಬೆನ್ನಲ್ಲೇ ಅವರು ಎಸ್‌ಆರ್‌ಎಚ್‌ನ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

೫೬ ವರ್ಷದ ಟಾಮ್‌ ಮೂಡಿ ತರಬೇತಿಯಡಿ ಆಡಿದ ಎಸ್‌ಆರ್‌ಎಚ್‌ ತಂಡ ಕಳೆದ ಆವೃತ್ತಿಯ ಒಟ್ಟು ೧೪ ಪಂದ್ಯಗಳಲ್ಲಿ ಆರನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆದರೆ, ೨೦೧೩ರಿಂದ ೨೦೧೬ರವರೆಗೆ ಅವರು ಎಸ್‌ಆರ್‌ಎಚ್ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದ್ದರು. ಐದು ಬಾರಿ ಪ್ಲೇಆಫ್‌ ಹಂತಕ್ಕೆ ಏರಿಸುವ ಜತೆಗೆ ೨೦೧೬ರಲ್ಲಿ ಚಾಂಪಿಯನ್‌ ಪಟ್ಟ ತಂದುಕೊಟ್ಟಿದ್ದರು. ಅಲ್ಲಿಂದ ಅವರು ತಂಡ ತೊರೆದಿದ್ದರು. ಆ ಬಳಿಕ ಆಸ್ಟ್ರೇಲಿಯಾದವರೇ ಆದ ಟ್ರೆವರ್‌ ಬೆಲಿಸ್‌ ಅವರು ಹೆಡ್‌ ಕೋಚ್‌ ಆಗಿದ್ದರು. ಬಳಿಕ ೨೦೨೦ರಲ್ಲಿ ಮೂಡಿ ಮತ್ತೆ ಕೋಚ್ ಆಗಿದ್ದರು.

ಲಾರಾ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಸ್‌ಆರ್‌ಎಚ್‌ ತಂಡ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದರು. ಇದೀಗ ಅವರು ಹೆಡ್‌ ಕೋಚ್‌ ಹುದ್ದೆಗೇರಿದ್ದಾರೆ.

ಇದನ್ನೂ ಓದಿ | Asia Cup- 2022 | ಏಷ್ಯಾ ಕಪ್‌ಗೆ ಹೋಗುವ ಭಾರತ ತಂಡದ ಹಂಗಾಮಿ ಕೋಚ್‌ ಆಗಿ ವಿವಿಎಸ್‌ ಲಕ್ಷ್ಮಣ್‌ ನೇಮಕ

Exit mobile version