Site icon Vistara News

Shahid Afridi | ಚೆಂಡು ವಿರೂಪಗೊಳಿಸಿದವರಿಗೆ ಆಟಗಾರರ ಆಯ್ಕೆ ಜವಾಬ್ದಾರಿ! ಪಿಸಿಬಿಯ ಆಯ್ಕೆಗೆ ಹಿರಿಯ ಆಟಗಾರನ ಟೀಕೆ

engvspak

ಇಸ್ಲಾಮಾಬಾದ್​ : ಪಾಕಿಸ್ತಾನ ಕ್ರಿಕೆಟ್​ ಕ್ಷೇತ್ರದಲ್ಲಿ ಏನೇ ಮಾಡಿದರೂ ಅದರ ಹಿನ್ನೆಲೆಯಲ್ಲಿ ವಿವಾದಗಳು ಇದ್ದೇ ಇರುತ್ತದೆ. ಅಂತೆಯೇ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಆಯ್ಕೆ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಶಾಹಿದ್ ಅಫ್ರಿದಿ (Shahid Afridi) ಆಯ್ಕೆಯನ್ನೂ ಕೆಲವರು ಪ್ರಶ್ನಿಸಿದ್ದಾರೆ. ಅಫ್ರಿದಿಗೆ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥರಾಗುವ ನೈತಿಕತೆ ಇಲ್ಲ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಅಫ್ರಿದಿಯ ಆಯ್ಕೆಯನ್ನು ಆಯ್ಕೆಯನ್ನು ಪ್ರಶ್ನಿಸಿರುವುದು ಮಾಜಿ ಸ್ಪಿನ್ನರ್​ ದ್ಯಾನಿಶ್​ ಕನೇರಿಯಾ ಅವರು. ಅವರ ಪ್ರಕಾರ ಶಾಹಿದ್ ಅಫ್ರಿದಿ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಶಿಕ್ಷೆ ಅನುಭವಿಸಿದವರು. ಅಂಥವನ್ನು ಆಯ್ಕೆ ಸಮಿತಿಗೆ ನೇಮಕ ಮಾಡಿದ್ದು ಸರಿಯಲ್ಲ ಎಂಬುದಾಗಿ ಅವರು ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆಯಲ್ಲಿ ಪರ್ತ್​ನಲ್ಲಿ ನಡೆದ ಪಂದ್ಯದ ವೇಳೆ ಶಾಹಿದ್​ ಅಫ್ರಿದಿ ಅವರು ಚೆಂಡನ್ನು ಕಚ್ಚಿ ವಿರೂಪ ಮಾಡಿದ್ದರು. ಆ ಪ್ರಕರಣದಲ್ಲಿ ತಪ್ಪಿತಸ್ಥರೆಂಬುದು ಸಾಬೀತಾದ ಹಿನ್ನೆಲೆಯಲ್ಲಿ ಎರಡು ಪಂದ್ಯಗಳ ನಿಷೇಧ ಹೇರಲಾಗಿತ್ತು. ಅಫ್ರಿದಿ ಚೆಂಡನ್ನು ಕಚ್ಚುತ್ತಿರುವ ವಿಡಿಯೊ ನೇರ ಪ್ರಸಾರದ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದವು. ಅದರನ್ನು ಶೇರ್​ ಮಾಡಿರುವ ದ್ಯಾನಿಶ್​ ಕನೇರಿಯಾ, ಆಯ್ಕೆ ಸಮಿತಿ ಮುಖ್ಯಸ್ಥ ಎಂದು ಬರೆದು ನಗುವಿನ ಎಮೋಜಿ ಹಾಕಿದ್ದಾರೆ.

ಅಫ್ರಿದಿಯನ್ನು ಟ್ರೋಲ್​ ಮಾಡಿದ ದ್ಯಾನಿಶ್​ ಕನೇರಿಯಾ ಅವರನ್ನೂ ಸಾಕಷ್ಟು ಮಂದಿ ಟ್ರೋಲ್​ ಮಾಡಿದ್ದಾರೆ. ನೀನೇನೂ ಸನ್ಯಾಸಿಯಲ್ಲ ಎಂಬುದಾಗಿ ಬರೆದುಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ರಮೀಜ್​ ರಾಜಾ ಅವರನ್ನು ಅಧ್ಯಕ್ಷ ಹುದ್ದೆಯಿಂದ ಇಳಿಸಿ ನಜಮ್​ ಸೇಥಿಯನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ | IND vs PAK | ಭಾರತದ ಧ್ವಜ ಬೀಸಿದ ಪಾಕ್‌ ಕ್ರಿಕೆಟಿಗ ಶಾಹಿದ್‌ ಅಫ್ರಿದಿಯ ಪುತ್ರಿ!

Exit mobile version