Site icon Vistara News

Virat kohli | ಕೊಹ್ಲಿಗೆ 3ನೇ ಕ್ರಮಾಂಕವೇ ಬೆಸ್ಟ್‌, ಓಪನರ್‌ ಆಗುವುದು ಬೇಡ ಎಂದ ಹಿರಿಯ ಆಟಗಾರರು

virat kohli

ಮುಂಬಯಿ : ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್‌ ಸೂಪರ್‌-೪ ಹಣಾಹಣಿಯಲ್ಲಿ ಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಅದು ಅವರ ಟಿ೨೦ ಮಾದರಿಯ ಚೊಚ್ಚಲ ಶತಕವಾಗಿದೆ. ಈ ಪಂದ್ಯದಲ್ಲಿ ಅವರು ಆರಂಭಿಕರಾಗಿ ಬ್ಯಾಟ್‌ ಮಾಡಲು ಇಳಿದಿದ್ದರು. ಹೀಗಾಗಿ ವಿರಾಟ್‌ ಕೊಹ್ಲಿಯನ್ನು ಇನ್ನು ಮುಂದೆ ರೋಹಿತ್‌ ಶರ್ಮ ಜತೆ ಆರಂಭಿಕರಾಗಿ ಆಡಲು ಇಳಿಸಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ಹಿರಿಯ ಕ್ರಿಕೆಟಿಗರು ಅದು ಸರಿಯಲ್ಲ, ಮೂರನೇ ಕ್ರಮಾಂಕದಲ್ಲಿಯೇ ಬ್ಯಾಟ್‌ ಮಾಡಲು ಇಳಿಯುವುದೇ ಸೂಕ್ರ ಎಂದು ಹೇಳಿದ್ದಾರೆ.

ಈ ಸಾಲಿನಲ್ಲಿ ಭಾರತ ತಂಡದ ಮಾಜಿ ಎಡಗೈ ಬ್ಯಾಟರ್‌ ಗೌತಮ್‌ ಗಂಭೀರ್ ಮೊದಲಿಗರು. ವಿರಾಟ್ ಕೊಹ್ಲಿಯನ್ನು ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವುದೇ ಸೂಕ್ತ ನಿರ್ಧಾರ ಎಂದು ಅವರು ಹೇಳಿದ್ದಾರೆ. ಅಂತೆಯೇ ಭಾರತ ತಂಡದ ಮಿಸ್ಟರ್‌ ಡಿಫೆಂಡೆಬಲ್‌ ಚೇತೇಶ್ವರ್‌ ಪೂಜಾರ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿರಾಟ್‌ ಕೊಹ್ಲಿ ೩ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದೇ ಉತ್ತಮ. ರೋಹಿತ್‌ ಶರ್ಮ ಹಾಗೂ ಕೆ. ಎಲ್ ರಾಹುಲ್‌ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಬದಲಾವಣೆ ಅಗತ್ಯವಿಲ್ಲ. ಕೊಹ್ಲಿ ೩ನೇ ಕ್ರಮಾಂಕದಲ್ಲಿ ಹೆಚ್ಚು ಸ್ಕೋರ್‌ ಗಳಿಸಿದ್ದು, ಅದೇ ಸ್ಥಾನದಲ್ಲಿ ಬ್ಯಾಟ್‌ ಮಾಡಲು ಇಳಿಯವುದು ಉತ್ತಮ,” ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಟಿ೨೦ ಮಾದರಿಯಲ್ಲಿ ೯ ಬಾರಿ ಆರಂಭಿಕರಾಗಿ ಬ್ಯಾಟ್‌ ಮಾಡಿದ್ದು, ೪೦೦ ರನ್‌ಗಳನ್ನು ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆರಂಭಿಕರಾಗಿ ಇಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಉತ್ತಪ್ಪ ಏನೆಂದರು?

ಹಿರಿಯ ಆಟಗಾರ ರಾಬಿನ್‌ ಉತ್ತಪ್ಪ ಅವರೂ ಇದೇ ಮಾತನ್ನು ಪುರಸ್ಕರಿಸಿದ್ದಾರೆ. “ತಮ್ಮ ವೃತ್ತಿ ಕ್ರಿಕೆಟ್‌ನ ಬಹುತೇಕ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದಾರೆ. ಅವರು ಆರಂಭಿಕರಾಗಿ ಬ್ಯಾಟ್‌ ಮಾಡುವಂಥ ವಿಶ್ವಾಸವನ್ನೂ ಹೊಂದಿದ್ದಾರೆ. ಹೀಗಾಗಿ ಅವರು ಯಾವ ಕ್ರಮಾಂಕದಲ್ಲಿ ಆಡಲು ಇಳಿದರೆ ಉತ್ತಮ ಎಂಬ ಚರ್ಚೆಗಿಂತ ಮೂರನೇ ಕ್ರಮಾಂಕ ಅವರಿಗೆ ಹೊಂದಿಕೆಯಾಗುತ್ತದೆ ಎಂಬುದೇ ಸರಿಯಾದ ನಿರ್ಧಾರ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Virat kohli | ಚೊಚ್ಚಲ ಟಿ20(ಐ) ಶತಕವನ್ನು ಪತ್ನಿ, ಪುತ್ರಿಗೆ ಅರ್ಪಿಸಿದ ವಿರಾಟ್‌ ಕೊಹ್ಲಿ

Exit mobile version