ಬ್ರಿಸ್ಬೇನ್ : ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆಡಂ ಜಂಪಾ ಅವರನ್ನು ಭಾರತಕ್ಕೆ ಪ್ರವಾಸ ಮಾಡಿರುವ ಆಸ್ಟ್ರೇಲಿಯಾ ತಂಡಕ್ಕೆ ಪರಿಗಣಿಸಿಲ್ಲ. ಇದರಿಂದ ಕೋಪಗೊಂಡಿರುವ ನನ್ನ ಕತೆ ಇಲ್ಲಿಗೆ ಮುಗಿಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಮಾಡಲಿದೆ. 18 ಸದಸ್ಯರನ್ನು ಹೊಂದಿರುವ ತಂಡದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ್ದು, ನಥಾನ್ ಲಿಯಾನ್, ಆಸ್ಟನ್ ಅಗರ್, ಮಿಚೆಲ್ ಸ್ವೆಪ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಜಂಪಾಗೆ ಅವಕಾಶ ನೀಡಲಾಗಿಲ್ಲ. ಇದರಿಂದ ನೊಂದಿರುವ ಅವರು ನನ್ನ ಕತೆ ಮುಗಿಯಿತು ಎಂದು ಹೇಳಿದ್ದಾರೆ.
ಜಂಪಾ ಆಸ್ಟ್ರೇಲಿಯಾ ಸೀಮಿತ ಓವರ್ಗಳ ತಂಡದ ಕಾಯಂ ಸದಸ್ಯ. ಅದರೆ, ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಅವರು ಹೇಳುವ ಪ್ರಕಾರ ಭಾರತ ಪ್ರವಾಸದ ವೇಳೆ ಅವರಿಗೆ ಅವಕಾಶ ಕೊಡುವುದಾಗಿ ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ ಭರವಸೆ ಕೊಟ್ಟಿದ್ದರು. ಆದರೆ, ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಅವಕಾಶ ನೀಡಿಲ್ಲ.
ಆರು ವಾರಗಳ ಹಿಂದೆ ನಾನು ಭಾರತ ಪ್ರವಾಸದ ತಂಡಕ್ಕೆ ಆಯ್ಕೆಯಾಗುವ ಭರವಸೆ ಪಡೆದುಕೊಂಡಿದ್ದೆ. ಅದೀಗ ಸುಳ್ಳಾಗಿದೆ. ನಾನು ಆ ಅವಕಾಶಕ್ಕಾಗಿ ಸಾಕಷ್ಟು ಕಾದಿದ್ದೆ. ಇಲ್ಲಿಗೆ ನನ್ನ ಆಟ ಮುಗಿಯಿತು ಎಂದು 30 ವರ್ಷದ ಆಟಗಾರ ಹೇಳಿದ್ದಾರೆ.
ಇದನ್ನೂ ಓದಿ | Pat Cummins | ಆಸ್ಟ್ರೇಲಿಯಾ ಏಕ ದಿನ ಕ್ರಿಕೆಟ್ ತಂಡಕ್ಕೆ ವೇಗಿ ಪ್ಯಾಟ್ ಕಮಿನ್ಸ್ ನಾಯಕನಾಗಿ ಆಯ್ಕೆ