Site icon Vistara News

ICC World Cup 2023 : ಬಿಕೋ ಎನ್ನುತ್ತಿದೆ ವಿಶ್ವ ಕಪ್​ ಪಂದ್ಯ ನಡೆಯುವ ಸ್ಟೇಡಿಯಮ್​!

Cricket stadium

ಅಹ್ಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ 2023 ರ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಐಸಿಸಿ ವಿಶ್ವಕಪ್ 2023 ರ ಮೊದಲ ಪಂದ್ಯದ ಬಗ್ಗೆ ಹೆಚ್ಚಿನ ಉತ್ಸಾಹವಿತ್ತು, ಆದರೆ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಅನೇಕ ಕುರ್ಚಿಗಳು ಖಾಲಿ ಉಳಿದಿವೆ. ಹೀಗಾಗಿ ಜನರ ಪ್ರತಿಕ್ರಿಯೆ ಕಡಿಮೆಯಾಗಿವೆ ಎಂದು ಹೇಳಲಾಗಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಖಾಲಿ ಬಿದ್ದಿರುವ ಆಸನಗಳು ಐಸಿಸಿ ವಿಶ್ವಕಪ್ 2023ರ ಪ್ರಚಾರಕ್ಕೆ ಪೂರಕವಾಗಿಲ್ಲ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಖಾಲಿ ಸ್ಯಾಂಡ್​ಗಳಿಗೆ ಪ್ರತಿಕ್ರಿಯಿಸಿದ್ದು, ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಇಷ್ಟು ಕಡಿಮೆ ಪ್ರತಿಕ್ರಿಯೆ ಸಿಕ್ಕಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಆಯೋಜಿಸುವ ಬದಲು ಬೇರೆ ಯಾವುದಾದರೂ ಸ್ಟೇಡಿಯಮ್​ನಲ್ಲಿ ಪಂದ್ಯ ಆಯೋಜಿಸಿದ್ದರೆ ಹೆಚ್ಚು ಪ್ರೇಕ್ಷಕರು ಬರುತ್ತಿದ್ದರು ಎಂಬುದಾಗಿ ಹೇಳಲಾಗಿದೆ.

ಜನರು ಇತರ ರಾಜ್ಯಗಳಿಂದ ಪ್ರಯಾಣಿಸಬಹುದಾಗಿರುವುದರಿಂದ ಸಂಘಟಕರು ಮುಂಚಿತವಾಗಿ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದ್ದರೆ ಪ್ರತಿಕ್ರಿಯೆ ಉತ್ತಮವಾಗಿರುತ್ತಿತ್ತು ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.

ಏಕ ದಿನ ಕ್ರಿಕೆಟ್ ಬಗ್ಗೆ ನಿರಾಸೆ

ಟಿ20 ಅಬ್ಬರದಲ್ಲಿ ಏಕ ದಿನ ಕ್ರಿಕೆಟ್ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಈ ಪಂದ್ಯ ಅದಕ್ಕೆ ಸೂಕ್ತ ಉದಾಹರಣೆಯಂತೆ ಕಂಡಿದೆ. ಯಾಕೆಂದರೆ ಭಾರತದಂಥ ಕ್ರಿಕೆಟ್ ಹುಚ್ಚರ ದೇಶದಲ್ಲಿ ವಿಶ್ವ ಕಪ್ ಆರಂಭಿಕ ಪಂದ್ಯಕ್ಕೆ ಅತ್ಯಂತ ಕಡಿಮೆ ಪ್ರೇಕ್ಷಕರು ಬಂದಿದ್ದಾರೆ ಕೇವಲ 3ರಿಂದ ನಾಲ್ಕು ಗಂಟೆಗಳ ಕಾಲ ನಡೆಯುವ ಟಿ20 ಪಂದ್ಯಗಳ ಅಬ್ಬರದಲ್ಲಿ ಈ ಕ್ರಿಕೆಟ್ ಅಬ್ಬರ ಕಳೆದುಕೊಳ್ಳುತ್ತಿದೆ ಎಂಬುದಾಗಿಯೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್

ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಜಾನಿ ಬೈರ್​ಸ್ಟೋವ್​ ಮತ್ತು ಡೇವಿಡ್ ಮಲನ್ ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದರು. ಜಾನಿ ಬೈರ್ಸ್ಟೋವ್​ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರು ಮೊದಲ ಓವರ್​ನಲ್ಲಿಏ ಬೃಹತ್ ಸಿಕ್ಸರ್ ಬಾರಿಸಿದರು. ಆದರೆ, ಮ್ಯಾಟ್ ಹೆನ್ರಿ ಡೇವಿಡ್ ಮಲಾನ್ ಅವರನ್ನು ಔಟ್ ಮಾಡಿದ್ದರಿಂದ ನ್ಯೂಜಿಲೆಂಡ್ ಬೌಲರ್​ಗಳು ತಿರುಗೇಟು ನೀಡಿದರು.

ಇದನ್ನೂ ಓದಿ : ICC World cup 2023 : ಕ್ರಿಕೆಟ್‌ ಮೇಲೆ ಖಲಿಸ್ತಾನಿ ನೆರಳು; ಬೆಂಗಳೂರಿನ ಪಂದ್ಯಗಳಿಗೆ ಬಿಗಿ ಭದ್ರತೆ

ಒಂದು ವಿಕೆಟ್ ಕಳೆದುಕೊಂಡ ನಂತರವೂ, ಇಂಗ್ಲೆಂಡ್ ಬ್ಯಾಟರ್​ಗಳು ಆಗಾಗ್ಗೆ ಬೌಂಡರಿಗಳೊಂದಿಗೆ ದಾಳಿಯನ್ನು ಮುಂದುವರಿಸಿದರು. ಆದರೆ ನ್ಯೂಜಿಲೆಂಡ್ ಬೌಲರ್​ಗಳು ಒತ್ತಡಕ್ಕೆ ಒಳಗಾಗಲಿಲ್ಲ. ಮಿಚೆಲ್ ಸ್ಯಾಂಟ್ನರ್​ ಹಾಗೂ ರಚಿನ್ ರವೀಂದ್ರ ತಲಾ 1 ವಿಕೆಟ್ ಪಡೆದರು. ಜಾನಿ ಬೈರ್​ಸ್ಟೋವ್​ 33 ರನ್ ಗಳಿಸಿ ಔಟಾದರೆ, ಹ್ಯಾರಿ ಬ್ರೂಕ್ 25 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು.

ಹಾಲಿ ಋತುವಿನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎರಡೂ ಉತ್ತಮ ಕ್ರಿಕೆಟ್ ಆಟ ಆಡುತ್ತಿದೆ.

Exit mobile version