Site icon Vistara News

Sarfaraz Khan: ಸೂರ್ಯಕುಮಾರ್​ಗೆ ಧನ್ಯವಾದ ತಿಳಿಸಿದ ಸರ್ಫರಾಜ್ ತಂದೆ; ಕಾರಣವೇನು?

Sarfaraz Khan with his father Naushad

ಮುಂಬಯಿ: ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಡುವ ಮೂಲಕ ಸರ್ಫರಾಜ್ ಖಾನ್(sarfaraz khan) ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಮಗ ಟೆಸ್ಟ್​ ಕ್ಯಾಪ್​ ಪಡೆಯುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಹಾಕಿದ ಸರ್ಫರಾಜ್​ ತಂದೆ ನೌಶಾದ್ ಖಾನ್(Naushad Khan) ಸೂರ್ಯಕುಮಾರ್​ ಯಾದವ್​ಗೆ(Suryakumar Yadav) ಧನ್ಯವಾದ ಸಲ್ಲಿಸಿದ್ದಾರೆ.

ನೌಶಾದ್ ಖಾನ್​ ಅವರು ಮೈದಾನದಕ್ಕೆ ಬಂದು ತನ್ನ ಮಗನ ಆಟ ನೋಡಬಾರದು ಎಂದು ತೀರ್ಮಾನಿಸಿದ್ದರಂತೆ. ಆದರೆ, ಅವರ ಮನಸ್ಸು ಬದಲಾಯಿಸಿದ್ದು ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್ ಯಾದವ್. ಹೌದು ಮಗನ ಟೆಸ್ಟ್ ಪದಾರ್ಪಣೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನೌಶಾದ್ ಖಾನ್, ಸೂರ್ಯಕುಮಾರ್ ಅವರ ಸಂದೇಶವು ನನ್ನನ್ನು ರಾಜ್‌ಕೋಟ್‌ಗೆ ಬರುವಂತೆ ಮಾಡಿತು. ನಾನು ಸರ್ಫರಾಜ್ ಮೇಲೆ ಒತ್ತಡ ಬೀಳಬಹುದು ಎಂಬ ಕಾರಣಕ್ಕೆ ಪಂದ್ಯ ನೋಡಲು ಬರಬಾರದೆಂದು ನಿರ್ಧರಿಸಿದ್ದೆ ಆದರೆ ಸೂರ್ಯನ ಸಂದೇಶ ನನ್ನ ಹೃದಯವನ್ನು ಕರಗಿಸಿತು. ಪದಾರ್ಪಣ ಪಂದ್ಯದಲ್ಲೇ ಮಗ ಅರ್ಧಶತಕ ಬಾರಿಸಿದ್ದನ್ನು ಕಂಡು ಸಂತಸವಾಗಿದೆ. ಇದನ್ನು ಹತ್ತಿರದಿಂದ ನೋಡುವಂತೆ ಮಾಡಿದ ಸೂರ್ಯಕುಮಾರ್​ಗೆ ಧನ್ಯವಾದಗಳು ಎಂದು ನೌಶಾದ್ ಖಾನ್ ಹೇಳಿದರು.

ಸೂರ್ಯಕುಮಾರ್ ನೀಡಿದ ಸಂದೇಶವೇನು?​​


ಸೂರ್ಯಕುಮಾರ್​​ ಯಾದವ್​ ಅವರು ಸರ್ಫರಾಜ್​ ಖಾನ್​ ಅವರ ತಂದೆಗೆ ”ನಿಮ್ಮ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ನನ್ನನ್ನು ನಂಬಿರಿ, ನಾನು ನನ್ನ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ವೇಳೆ ನನ್ನ ತಂದೆ ಮತ್ತು ತಾಯಿ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಈ ಕ್ಷಣ ನನಗೆ ಬಹಳ ವಿಶೇಷವಾಗಿತ್ತು. ಪ್ರತಿಯೊಬ್ಬ ಕ್ರಿಕೆಟಿಗನೂ ಕೂಡ ಪದಾರ್ಪಣೆ ಮಾಡುವಾಗ ಆ ಕ್ಷಣದಲ್ಲಿ ತನ್ನ ತಂದೆ, ತಾಯಿ ಇರಬೇಕು ಎಂದು ಭಾವಿಸುತ್ತಾರೆ. ಈ ಕ್ಷಣ ಮತ್ತೆ ಮತ್ತೆ ಮತ್ತೆ ಬರುವುದಿಲ್ಲ. ಹಾಗಾಗಿ ನೀವು ಹೋಗಬೇಕು” ಎಂದು ಸೂರ್ಯ ಅವರು ಸರ್ಫರಾಜ್ ತಂದೆಗೆ ಸಂದೇಶ ಕಳುಹಿಸಿದ್ದರಂತೆ.

ಇದನ್ನೂ ಓದಿ IND vs ENG 3rd Test: ಟೆಸ್ಟ್​ಗೆ ಸರ್ಫರಾಜ್​ ಪದಾರ್ಪಣೆ; ಮೈದಾನದಲ್ಲೇ ತಂದೆ ಭಾವುಕ

ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸರ್ಫರಾಜ್​ ಖಾನ್​ ಅವರು ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅರ್ಧಶತಕ ಬಾರಿಸಿದರು. ರವೀಂದ್ರ ಜಡೇಜಾ ಅವರ ತಪ್ಪಿನಿಂದಾಗಿ ರನೌಟ್​ ಸಂಕಟಕ್ಕೆ ಸಿಲುಕಿದರು. ಇಲ್ಲವಾದಲ್ಲಿ ಅವರು ಶತಕ ಬಾರಿಸುವ ಸಾಧ್ಯತೆ ಇತ್ತು. ಒಟ್ಟು 66 ಎಸೆತ ಎದುರಿಸಿ 1 ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ 62 ರನ್​ ಗಳಿಸಿದ್ದರು. ದ್ವಿತೀಯ ಇನಿಂಗ್ಸ್​ನಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಭಾರಿ ನಿರೀಕ್ಷೆ ಇರಿಸಲಾಗಿದೆ.

22 ವರ್ಷದ ಸರ್ಫರಾಜ್ 45 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 3912 ರನ್​ ಬಾರಿಸಿದ್ದಾರೆ. ಇದರಲ್ಲಿ 14 ಶತಕ ಮತ್ತು 11 ಅರ್ಧಶತಕ ಒಳಗೊಂಡಿದೆ. ಅಜೇಯ 301 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

Exit mobile version